ಪಾಂಡವಪುರ ತಾಲೂಕಿನ ಇಂಗಲಗುಪ್ಪೆ ಗ್ರಾಮದ ಪ್ರಜ್ವಲ್ ಅಶೋಕ್ (21) ಅವರಿಗೆ ಕಳೆದ ಆರು ದಿನಗಳ ಹಿಂದೆ ಪಾಂಡವಪುರ ರೈಲ್ವೆ ಸ್ಟೇಷನ್ ಬಳಿ ಅಪಘಾತವಾಗಿ ಮೈಸೂರಿನ ಆಸ್ಪತ್ರೆಗೆ ಸೇರಿಸಲಾಗಿತ್ತು ಈತನ ಮೆದುಳು ನಿಷ್ಕ್ರಿಯ ವಾಗಿತ್ತು
ಪ್ರಜ್ವಲ್ ನ ಪೋಷಕರ ಅಪ್ಪಣೆ ಮೆರೆಗೆ ಆತನ ಅಂಗಾಂಗಗಳನ್ನು ಆಸ್ಪತ್ರೆ ವೈದ್ಯರಿಂದ ಬೇರ್ಪಡಿಸಿ ದಾನ ಮಾಡಿ ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ ಎನ್ನಲಾಗಿದೆ.
ಮೃತನ ಶವ ಟೆಸ್ ಛತ್ರದ ಬಳಿಯ ಇಂಗಲಗುಪ್ಪೆಗ್ರಾಮಕ್ಕೆ ಶನಿವಾರ ಆಗಮಿಸುತ್ತದೆ ಎಂದು ಮೃತನ ಪೋಷಕರು ತಿಳಿಸಿದ್ದಾರೆ