ಆರ್ಸಿಎಚ್ ವರದಿ
ಮೈಸೂರು: ಅಯೋದ್ಯೆಯಲ್ಲಿ ರಾಮಮಂದಿರ ಸ್ಥಾಪನೆಯ ಅಂಗವಾಗಿ ಜ.೨೪ರಂದು ಎಲ್ಲಾ ರಾಮಮಂದಿರಗಳಲ್ಲಿಯೂ ಶತಕೋಟಿ ರಾಮತಾರಕ ನಾಮಜಪ ಮಹಾಯಜ್ಞ ಶ್ರೀರಾಮ ತಾರಕ ಮಹಾಯಾಗವನ್ನು ಸಾಮೂಹಿಕವಾಗಿ ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ತಿಳಿಸಿತು.
ನಗರದ ಪತ್ರಕರ್ತರಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ.ಟಿ.ಪ್ರಕಾಶ್, ಈಗಾಗಲೇ ವಿಜಯದಶಮಿಯಿಂದ ಸಾಮೂಹಿಕ ಯಜ್ಞಕ್ಕೆ ಚಾಲನೆ ನೀಡಿದ್ದೇವೆ. ಮುಂಬರುವ ಜ.22ರಂದು ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನ ಅಂಗವಾಗಿ ನಡೆಯಲಿರುವ ಕಾರ್ಯಕ್ರಮಕ್ಕೆ ಬೆಂಬಲವಾಗಿ ಲೋಕಕಲ್ಯಾಣಾರ್ಥವಾಗಿ ಹಾಗೂ ಸಮಸ್ತ ಜನ ಒಳಿತಿಗಾಗಿ ರಾಮ ತಾರಕ ಮಂತ್ರವನ್ನು ಶ್ರೀರಾಮ ಜಯ ರಾಮ ಜಯ ಜಯ ರಾಮ ಎಂಬ ಮಹಾಮಂತ್ರವನ್ನು ಬೀದರ್ ನಿಂದ ಚಾಮರಾಜನಗರದವರೆಗೆ ಎಲ್ಲಾ ರಾಮಮಂದಿರಗಳಲ್ಲಿ ಮತ್ತು ಎಲ್ಲಾ ದೇವಸ್ಥಾನಗಳಲ್ಲಿ ಆಯೋಜಿಸಲಾಗಿದೆ. ಮೈಸೂರಿನ ಸಮಸ್ತ ಜನರು ಕೈಜೋಡಿಸಬೇಕು ಎಂದು ಮೈಸೂರು ನಗರ ಹಾಗೂ ಜಿಲ್ಲಾ ಬ್ರಾಹ್ಮಣರ ಸಂಘದ ವತಿಯಿಂದ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ವಿನಂತಿಸಿಕೊಳ್ಳುತ್ತೇವೆಂದರು. ಡಾ.ಭಾನುಪ್ರಕಾಶ್ ಶರ್ಮ, ಗೋಪಾಲರಾವ್, ಹರೀಶ್, ಬಾಲಕೃಷ್ಣ, ಜ್ಯೋತಿ, ಜಯಸಿಂಹ ಇನ್ನಿತರರು ಇದ್ದರು.