ಮೈಸೂರು:- ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಕರ ಹೆಸರು ಅಂತಿಮಗೊಂಡಿದ್ದು, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಈ ವರ್ಷದ ದಸರಾವನ್ನು ಉದ್ಘಾಟಿಸುವರು. ಮೈಸೂರಿನಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಈ ಬಾರಿಯ ಮೈಸೂರು ದಸರಾವನ್ನು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಉದ್ಘಾಟಿಸುವರು ಎಂದರು.
ಚಾಮುಂಡಿ ಬೆಟ್ಟದಲ್ಲಿಂದು ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ವಿಶ್ವವಿಖ್ಯಾತ ಮೈಸೂರು ದಸರಾವನ್ನು ಅ. 15ರಂದು ಬೆಳಿಗ್ಗೆ 10.15ರಿಂದ 10.30ರ ಒಳಗಿನ ಶುಭ ಲಗ್ನದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಉದ್ಘಾಟಿಸುವರು ಎಂದರು.
ಈ ಬಾರಿಯ ಮೈಸೂರು ದಸರಾ ಉದ್ಘಾಟಕರ ಹೆಸರನ್ನು ಅಂತಿಮಗೊಳಿಸುವ ತೀರ್ಮಾನವನ್ನು ಸಚಿವ ಸಂಪುಟ ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿವೇಚನೆಗೆ ಬಿಡಲಾಗಿತ್ತು. ಅದರಂತೆ ಮುಖ್ಯಮಂತ್ರಿಗಳು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ಹೆಸರನ್ನು ಅಂತಿಮಗೊಳಿಸಿ ಅವರೇ ಉದ್ಘಾಟಕರ ಹೆಸರನ್ನು ಘೋಷಣೆ ಮಾಡಿದ್ದಾರೆ.
ನಾಡ ಹಬ್ಬ ದಸರಾ ಅ. 15 ರಿಂದ ಆರಂಭಗೊಳ್ಳಲಿದ್ದು, 10 ದಿನಗಳ ಕಾಲ ದಸರಾ ವೈಭವೋಪೇತವಾಗಿ ನಡೆಯಲಿದ್ದು, ವಿಜಯದಶಮಿ ದಿನ ನಾಡದೇವತೆ ಚಾಮುಂಡೇಶ್ವರಿಯ ಜಂಬೂಸವಾರಿಯೊಂದಿಗೆ ದಸರಾ ಮುಕ್ತಾಯಗೊಳ್ಳಲಿದೆ.
ಈ ಬಾರಿಯ ದಸರಾವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಯುವ ದಸರಾ, ರೈತರ ದಸರಾ ಹೀಗೆ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಗಿದೆ.
ಮೈಸೂರು ದಸರಾಗೆ ಸಿದ್ಧತೆಗಳು ಭರದಿಂದ ನಡೆದಿದ್ದು, ಮೈಸೂರು ದಸರಾಗೆ ಅಗತ್ಯ ಅನುದಾನವನ್ನು ಒದಗಿಸಲು ಸರ್ಕಾರ ಮುಂದಾಗಿದೆ.
ಪ್ರತಿ ಬಾರಿಯೂ ಜಂಬೂಸವಾರಿ ಮೆರವಣಿಗೆ ದಸಾರ ಉತ್ಸವದ ಪ್ರಮುಖ ಆಕರ್ಷಣಿಯಾಗಿದೆ. 9 ದಿನಗಳ ಕಾಲ ನಡೆಯಲಿರುವ ವೈಭವೋಪೇತ ದಸರಾ ಉತ್ಸವದಲ್ಲಿ ಸಾಂಸ್ಕøತಿಕ ನಗರಿ ಸಿದ್ದಗೊಳ್ಳುತ್ತಿದೆ. ಜಂಬೂಸವಾರಿ ದಿನದಿಂದು ಅರಮನೆ ಮುಂಭಾಗ ಬಲರಾಮನ ದ್ವಾರದ ಬಳಿ ನಂದಿಧ್ವಜಕ್ಕೆ ಮುಖ್ಯಮಂತ್ರಿಗಳು ಪೂಜೆ ಸಲ್ಲಿಸುವ ಮೂಲಕ ಅದ್ಧೂರಿ ದಸರಾ ಮೆರವಣಿಗೆ ಚಾಲನೆ ದೊರೆಯಲಿದೆ.
9 ದಿನಗಳ ಕಾಲ ಮೈಸೂರು ನಗರದ ಪಾರಂಪಾರಿಕ ಐತಿಹಾಸಿಕ ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತದೆ. ಈ ಕಣ್ಣುಕೋರೈಸುವ ವಿದ್ಯುತ್ ದೀಪಗಳನ್ನು ಕಣ್ತುಂಬಿಕೊಳ್ಳಲು ದಸರಾ ಮೆರವಣಿಗೆಯನ್ನು ವೀಕ್ಷಿಸಲು ಲಕ್ಷಾಂತರ ಜನರು ಮೈಸೂರಿಗೆ ಭೇಟಿ ನೀಡುತ್ತಾರೆ. ಇದರ ಜೊತೆಗೆ ಫಲಪುಷ್ಪ ಪ್ರದರ್ಶನ, ಯುವ ದಸರಾ ಸೇರಿದಂತೆ ಅರಮನೆಯಲ್ಲಿ ನಡೆಯಲಿರುವ ಸಂಗೀತ ಕಾರ್ಯಕ್ರಮ ದಸರಾ ಮಹೋತ್ಸಕ್ಕೆ ಮೆರಗು ತಂದು ಕೊಡಲಿದೆ. ಒಟ್ಟಾರೆ ಈ ಬಾರಿಯ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.