ನವದೆಹಲಿ: ಪ್ರತಿ ತಿಂಗಳ ಮೊದಲ ದಿನ LPG ದರ ಪರಿಷ್ಕರಣೆ ಆಗಲಿದ್ದು, ಆಗಸ್ಟ್ನಲ್ಲೂ ಬೆಲೆ ಏರಿಕೆಯ ಶಾಕ್ ನೀಡಲಾಗಿದೆ. ಆದರೆ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ದೇಶಾದ್ಯಂತ 19 ಕೆ.ಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರವನ್ನು ಏರಿಕೆ ಮಾಡಲು ಆಯಿಲ್ ಮಾರ್ಕೆಂಟಿಂಗ್ ಕಂಪನಿಗಳು ನಿರ್ಧರಿಸಿವೆ.
ಆಗಸ್ಟ್ 1ರಿಂದ 19 ಕೆ.ಜಿಯ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ದರ 8 ರೂಪಾಯಿ 50 ಪೈಸೆ ಏರಿಕೆ ಮಾಡಲಾಗಿದೆ. 14 ಕೆಜಿಯ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅಡುಗೆ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ ಆಗದಿರುವುದು ಗೃಹಿಣಿಯರು ನಿಟ್ಟುಸಿರು ಬಿಡುವಂತೆ ಮಾಡಿದೆ.
ಕಳೆದ ಜುಲೈ 1ರಂದು 19 ಕೆಜಿ ವಾಣಿಜ್ಯ ಸಿಲಿಂಡರ್ ದರದಲ್ಲಿ ಬರೋಬ್ಬರಿ 30 ರೂಪಾಯಿ ಕಡಿಮೆ ಮಾಡಲಾಗಿತ್ತು. ಸತತ ಬೆಲೆ ಇಳಿಕೆಯ ಬಳಿಕ ಇಂದು 8 ರೂಪಾಯಿ 50 ಪೈಸೆ ಏರಿಕೆಯಾಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ನ ಮಾಹಿತಿ ಪ್ರಕಾರ ಇಂದಿನಿಂದ 19 ಕೆ.ಜಿ LPG ಸಿಲಿಂಡರ್ ದರದಲ್ಲಿ 8.50 ರೂಪಾಯಿ ಏರಿಕೆಯಾಗಿದೆ. ನೂತನ ದರ ಪರಿಷ್ಕರಣೆಯ ಪಟ್ಟಿ ಬಿಡುಗಡೆಯಾಗಿದೆ.
ಆಗಸ್ಟ್ನಲ್ಲೂ ಬೆಲೆ ಏರಿಕೆಯ ಶಾಕ್
