ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಇನ್ಸ್ಟಾಗ್ರಾಂ ಖಾತೆಲಿಇನ್ವೆಸ್ಟ್ ಮಾಡಿ ಅದಿಕ ಲಾಭ ಗಳಿಸೊ ಜಾಹೀರಾತು ನೀಡಿ ಹೂಡಿಕೆದಾರರೊಬ್ಬರಿಗೆ ಮೋಸ ಮಾಡಿದ್ದ ಆನ್ ಲೈನ್ ವಂಚಕನೋರ್ವನನ್ನ ಚಾಮರಾಜನಗರ ಸೆನ್ ಪೊಲೀಸರು ಜೈಲಿಗಟ್ಟಿಧ್ದಾರೆ.
indian_stock_traderl ಎಂಬ ಯೂಸರ್ ನೇಮ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಆನ್ಲೈನ್ ಇನ್ವೆಸ್ಟ್ಮೆಂಟ್ ಮಾಡಿ ಅಧಿಕ ಲಾಭ ಗಳಿಸಬಹುದು ಎಂಬ ಜಾಹೀರಾತನ್ನು ನಂಬಿ ಆನ್ಲೈನ್ ಇನ್ವೆಸ್ಟ್ಮೆಂಟ್ನಲ್ಲಿ ಹೂಡಿಕೆ ಮಾಡಿ 18,197/-ರೂ ಹಣವನ್ನು ಕಳೆದುಕೊಂಡು ಮೋಸ ಹೋಗಿರುವುದಾಗಿ ಸಂಜನಾ ಎಂಬುವವರು ಚಾಮರಾಜನಗರ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬೆಂಗಳೂರಿನ ನಿವಾಸಿ ಲಿಖಿತ್ ಎಂಬುವವರನ್ನು ಪತ್ತೆ ಮಾಡಿ ದಸ್ತಗಿರಿ ಮಾಡಲಾಗಿ ಆರೋಪಿಯು ಮೈಸೂರು, ಧಾರವಾಡ, ಬಳ್ಳಾರಿ ಸೇರಿದಂತೆ 23 ಕಡೆಗಳಲ್ಲಿ ಸಾರ್ವಜನಿಕರನ್ನು ನಂಬಿಸಿ ಒಟ್ಟು 7,68,627/- ರೂ ಹಣವನ್ನು ತನ್ನ ಹಾಗು ತನ್ನ ಆಪ್ತರ ಖಾತೆಗಳಿಗೆ ಹಾಕಿಸಿಕೊಂಡು ವಂಚಿಸಿರುವುದನ್ನು ಬೇಧಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿಧ್ದಾರೆ
ಪೊಲೀಸ್ ಅಧೀಕ್ಷಕರಾದ ಕವಿತಾ.ಬಿ.ಟಿ ರವರ ನಿರ್ದೇಶನದಂತೆ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಉದೇಶ್.ಟಿ.ಜೆ ಹಾಗೂ ಚಾಮರಾಜನಗರ ಡಿವೈಎಸ್ಪಿ ರವರಾದ ಲಕ್ಷ್ಮಯ್ಯ.ವಿ ರವರ ಮಾರ್ಗದರ್ಶನದಂತೆ ಚಾಮರಾಜನಗರ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವರಾದ ಸಾಗರ್ ರವರು ತಮ್ಮ ಸಿಬ್ಬಂದಿಯವರ ಜೊತೆ ಕಾರ್ಯಾಚರಣೆ ಕೈಗೊಂಡು ಆರೋಪಿನ್ನ ಪತ್ತೆಹಚ್ಚಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳಾದ ಅಯ್ಯನಗೌಡ ಮಹದೇವಸ್ವಾಮಿ ,ಶ್ರೀನಿವಾಸಮೂರ್ತಿ , ಎಂ.ಮಹೇಶ್ ,ರಾಜು ,ಜಗದೀಶ್ ಮೋಹನ್, ಅಬ್ದುಲ್ಖಾದರ್ ರವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.