ಮೈಸೂರು: ನನ್ನ ಮೇಲೆ ಮಾಡಿರುವ ಆರೋಪಗಳನ್ನು ಸಾಬೀತು ಮಾಡದಿದ್ದರೆ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ನಗರದ ಜಲದರ್ಶಿನಿಯಲ್ಲಿ ಮಾತನಾಡಿದ ಅವರು ಕೃಷ್ಣೇಗೌಡ ಮಾಡಿರುವ ಆರೋಪಗಳನ್ನು ಸಾಬೀತು ಪಡಿಸಬೇಕು.
ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲ ಅಂದ್ರೆ ನಾನು ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆಂದರು.
ಹೋರಾಟಗಾರರು ಕೆಲವು ನಿಂದನೆಗಳನ್ನ ಅನುಭವಿಸಬೇಕಾಗುತ್ತದೆ. ಆ ಸಾಲಿನಲ್ಲಿ ನಾವು ಇದ್ದೇವೆ. ನಿನ್ನೆ ರೈತ ಮುಖಂಡ ಅಂತ ಹೇಳಿಕೊಂಡು ಇಂಗಲಕುಪ್ಪೆ ಕೃಷ್ಣೇಗೌಡ ಎಂಬ ವ್ಯಕ್ತಿ ನನ್ನ ಮೇಲೆ ಮಾಡಿರುವ ಆರೋಪಗಳು ಶುದ್ಧ ಸುಳ್ಳುಗಳಿಂದ ಕೂಡಿದೆ. ದುರುದ್ದೇಶ ಪೂರ್ವಕವಾಗಿ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರಲು ಮಾಡಿರುವ ಹುನ್ನಾರ ಇದಾಗಿದೆ. ಅವನು ಮಾಡಿರುವ ಆರೋಪಗಳಿಗೆ ನಾನು ಯಾವುದೇ ತನಿಖೆಗೂ ಸಿದ್ದನಿದ್ದೇನೆಂದರು. ನಾನು ಅಕ್ರಮ ಆಸ್ತಿ ಹಣ ಸಂಪಾದನೆ ಮಾಡಿದ್ದರೆ, ಅವುಗಳನ್ನೇಲ್ಲ ಮುಟ್ಟುಗೋಲು ಹಾಕಿಕೊಳ್ಳಲಿ ಎಂದರು.
ಈತ ಒಬ್ಬ ಕ್ರಿಮಿನಲ್ ಹಿನ್ನಲೆ ಉಳ್ಳವನಾಗಿದ್ದು, ಇವನು ಮತ್ತು ಇವನ ಜೊತೆ ಇರುವ ಸಂಗಡಿಗರು ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಅತ್ಯಾಚಾರ, ಡಕಾಯಿತಿ, ವಂಚನೆ, ಅಪಹರಣ ಸೇರಿ ಹಲವು ಪ್ರಕರಣಗಳು ಇವರ ಮೇಲೆ ಇವೆ ಎಂದು ಎಫ್ಐಆರ್ ಗಳ ಸಮೇತ ಹೇಳಿದರು.
ಇವನ ಮೇಲೆ 12 ಕೋಟಿ ಮೌಲ್ಯದ ಹಗರಣ ಇದೆ. ಸಾಕಷ್ಟು ವಂಚನೆ ಕೇಸ್ ಗಳಿವೆ. ಈ ರೀತಿಯ ಹಿನ್ನಲೆಯಿರುವ ವ್ಯಕ್ತಿ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದಾನೆ. ನಾನು ಅಕ್ರಮ ಆಸ್ತಿ ಮಾಡಿದ್ದೇನೆ ಎಂದು ಆರೋಪ ಮಾಡಿದ್ದಾನೆ.
ನಾವು ಸಾವಯವ ಕೃಷಿ ಮಾಡಲು ಆಸ್ತಿ ಖರೀದಿ ಮಾಡಿರುವುದು ನಿಜ. ನಾನೊಬ್ಬ ಕೃಷಿಕನಾಗಿ ನೈಸರ್ಗಿಕ ಕೃಷಿ ಮಾಡಲು ಜಮೀನು ಖರೀದಿ ಮಾಡಿದ್ದೇನೆ. ಯಾವುದೇ ರಾಜಕಾರಣಿಗಳ ಜೊತೆ ಒಳ ಸಂಬಂಧ ಇಟ್ಟು ನಾನು ಸಂಪಾದನೆ ಮಾಡಿಲ್ಲ. ನೀನು ನನ್ನ ಬಗ್ಗೆ ಮಾತನಾಡುವ ನೈತಿಕತೆ ನಿನಗೆ ಇಲ್ಲ. ನಾನು ಕದ್ದು ಮುಚ್ಚಿ ಆಸ್ತಿ ಮಾಡಿಲ್ಲ. ಹೋರಾಟಕ್ಕಾಗಿ ಕಡಲೇ ಪುರಿ ತಿಂದುಕೊಂಡು ಹೋರಾಟ ಮಾಡಿಕೊಂಡು ಬಂದಿದ್ದೇನೆ.
41 ವರ್ಷದ ಹೋರಾಟದ ಇತಿಹಾಸದಲ್ಲಿ ಯಾವುದೇ ಅನೈತಿಕ ಚಟುವಟಿಕೆ ಮಾಡಿಲ್ಲ.
ನಾನು ವಕೀಲ ವೃತ್ತಿಯನ್ನೂ ಮಾಡುತ್ತಿದ್ದೇನೆ. ನನ್ನ ವಕೀಲ ವೃತ್ತಿಯಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಕೇಸ್ ನಡೆಸಿದ್ದೇನೆ. ನಮ್ಮ ವೃತ್ತಿಯಲ್ಲೂ ಕೂಡ ನಾನು ಸ್ವಚ್ಛವಾಗಿದ್ದೇನೆ. ಕಷ್ಟ ಅಂತ ಬಂದವರಿಗೆ ಉಚಿತವಾಗಿ ಕೇಸ್ ನಡೆಸಿಕೊಟ್ಟಿದ್ದೇನೆ. ಭೂ ಸ್ವಾಧೀನ ಪ್ರಕರಣಗಳಲ್ಲಿ ಅನ್ಯಾಯ ಆದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇನೆ. ನಾನು ನನ್ನದೇ ಆದ ಸಿದ್ದಾಂತ ಇಟ್ಟುಕೊಂಡು ಜೀವನ ಮಾಡುತ್ತಿದ್ದೇನೆಂದರು.
ನಾನು ಮನಸ್ಸು ಮಾಡಿದ್ದರೆ ಎಂಎಲ್ಎ ಆಗಬಹುದಿತ್ತು. ಅಕ್ರಮ ಅಂತ ಆರೋಪ ಮಾಡಿರುವ ವ್ಯಕ್ತಿ ಅದನ್ನು ಸಾಬೀತು ಪಡಿಸಲಿ. ಆತ ಒಬ್ಬ ಅವಿವೇಕಿ ಅವನು ಮಾಡಿದ ಆರೋಪಗಳು ಸಾಬೀತು ಪಡಿಸಲಿ. ಅವನ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ. ನನ್ನನ್ನ ಕಾಂಗ್ರೆಸ್ ಬ್ರೋಕರ್ ಅಂತ ಹೇಳಿದ್ದಾನೆ.
ಕಾಂಗ್ರೆಸ್ ವಿರುದ್ಧ ಹೋರಾಡಿದವರು ನಾವು, ಯಾವುದೇ ರಾಜಕಾರಣಿ ಜೊತೆ ಹಲ್ಲುಗಿಂಜಿಕೊಂಡು ಎಲ್ಲೂ ಹೋಗಿಲ್ಲ. 41 ವರ್ಷಗಳ ನನ್ನ ಹೋರಾಟದ ಜೀವನದಲ್ಲಿ ಒಂದೇ ಒಂದು ಪೈಸೆ ಯಾರಿಂದಲೂ ಪಡೆದಿಲ್ಲ. ಪಡೆದಿದ್ದರೆ ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.
ನಾನು ಕಬ್ಬು ನಿಯಂತ್ರಣ ಮಂಡಳಿ ಸದಸ್ಯರಾಗಿರುವುದು ನಿಜ. ಅದನ್ನು ನಮ್ಮ ಸಂಘದ ಮುಂದೆ ಇಟ್ಟು ಅವರ ನಿರ್ಣಯ, ಒಪ್ಪಿಗೆ ಮೇರೆಗೆ ಆಯ್ಕೆ ಮಾಡಿದ್ದಾರೆ. ಕೃಷ್ಣೇಗೌಡ ನನ್ನ ಮನೆ ಬಾಗಿಲು ಕಾಯುತ್ತಿದ್ದ, ಕಾಲಿಗೆ ಬೀಳುತ್ತಿದ್ದ
ನಾನು ಶೂ ಧರಿಸಿದ್ದರೂ ಕಾಲಿ ಬಿದ್ದು ಯುವ ಘಟಕ ಮಾಡಿಕೊಡಿ ಎಂದು ಬೇಡುತ್ತಿದ್ದನು. ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ, ಇದನ್ನು ನಿರಾಕರಿಸಿದ್ದಕ್ಕೆ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾನೆಂದು ಕಿಡಿಕಾರಿದರು.
ಆರೋಪ ಸಾಬೀತು ಮಾಡದಿದ್ದರೆ ಮಾನನಷ್ಟ ಮೊಕ್ಕದ್ದಮೆ ಹೂಡುವೆ: ಬಡಗಲಪುರ ನಾಗೇಂದ್ರ
