ಬೆಂಗಳೂರು:- 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಗಾಗಿ ಇಡೀ ಕ್ರೀಡಾ ಜಗತ್ತೇ ಕಾಯುತ್ತಿದೆ. ಈ ವರ್ಷದ ಕೊನೆಗೆ ೨೦೨೫ರ ಐಪಿಎಲ್ ಮೆಗಾ ಆಕ್ಷನ್ ನಡೆಯಲಿದೆ. ಇದಕ್ಕೂ ಮುನ್ನವೇ ಐಪಿಎಲ್ ತಂಡಗಳು ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಳ್ಳಬಹುದು. ಬಳಿಕ ಉಳಿದ ಆಟಗಾರರನ್ನು ಆಕ್ಷನ್ಗಾಗಿ ಬಿಡಲೇಬೇಕಿದೆ.
ಆರ್ಸಿಬಿ ತಂಡವು ವಿರಾಟ್ ಕೊಹ್ಲಿ ಹೊರತುಪಡಿಸಿ ಮತ್ಯಾರನ್ನ ರೀಟೈನ್ ಮಾಡಿಕೊಳ್ಳಲಿದೆ ಎಂದು ಇದುವರೆಗೂ ಸ್ಪಷ್ಟನೆ ನೀಡಿಲ್ಲ. ರೀಟೈನ್ ಲಿಸ್ಟ್ನಲ್ಲಿ ಕೊಹ್ಲಿ ಜೊತೆಗೆ ವಿಲ್ ಜಾಕ್ಸ್, ರಜತ್ ಪಾಟಿದಾರ್ ಹೆಸರು ಇದೆ ಎಂದು ಹೇಳಲಾಗುತ್ತಿದೆ. ಗ್ಲೆನ್ ಮ್ಯಾಕ್ಸ್ವೆಲ್ ಹೆಸರು ಇತ್ತು ಎಂದು ವರದಿ ಆಗಿತ್ತು ಈ ಬೆನ್ನಲ್ಲೇ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ರೀಟೈನ್ ಮಾಡಿಕೊಳ್ಳುವುದು ಡೌಟ್ ಎಂದು ಆರ್ಸಿಬಿ ಮೂಲಗಳು ತಿಳಿಸಿವೆ.
ಮ್ಯಾಕ್ಸ್ ವೆಲ್ ಕಳಪೆ ಪ್ರದರ್ಶನ
ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮ್ಯಾಕ್ಸ್ವೆಲ್ ಕಳಪೆ ಪ್ರದರ್ಶ ನೀಡಿದ್ರು. ಒಂದು ಮ್ಯಾಚ್ನಲ್ಲೂ ೩೦ಕ್ಕಿಂತಲೂ ಹೆಚ್ಚು ರನ್ ಮ್ಯಾಕ್ಸಿ ಗಳಿಸಲೇ ಇಲ್ಲ. ಇದು ತಂಡದ ಫಲಿತಾಂಶಗಳ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ತಾನು ಆಡಿದ ೧೦ ಪಂದ್ಯಗಳಲ್ಲಿ ಕೇವಲ ೫೨ ರನ್ ಗಳಿಸಿದ್ರು. ಈ ಪೈಕಿ ಹೈಎಸ್ಟ್ ಸ್ಕೋರ್ ೨೮ ಆಗಿತ್ತು.
ಆರ್ಸಿಬಿಯಿಂದ Maxwell ಮ್ಯಾಕ್ಸ್ ವೆಲ್ ಔಟ್!
