ಬೆಂಗಳೂರು : ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗಾಯಾಳುಗಳ ಸಮಸ್ಯೆ ಇನ್ನಿಲ್ಲದಂತೆ ಕಾಡಿದೆ. ಇದೀಗ ಟೂರ್ನಿ ಮಧ್ಯದಲ್ಲಿ ಇಂಗ್ಲೆಂಡ್ ಆಲ್ರೌಂಡರ್ ಡೇವಿಡ್ ವಿಲ್ಲೀ ಸೇವೆ ಕಳೆದುಕೊಳ್ಳುವಂತ್ತಾಗಿದ್ದು, ಅವರ ಜಾಗದಲ್ಲಿ ಆಲ್ರೌಂಡರ್ ಕೇದಾರ್ ಜಾಧವ್ ಅವರೊಟ್ಟಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಫ್ರಾಂಚೈಸಿಯು ಸೋಮವಾರ ಅಧಿಕೃತ ಘೋಷಣೆ ಮಾಡಿದೆ.
ಐಪಿಎಲ್ 2023 ಟೂರ್ನಿಯಲ್ಲಿ ಒಟ್ಟಾರೆ 4 ಪಂದ್ಯಗಳನ್ನು ಆಡಿರುವ ಡೇವಿಡ್ ವಿಲ್ಲೀ 3 ವಿಕೆಟ್ಗಳನ್ನು ಮಾತ್ರ ಪಡೆದಿದ್ದಾರೆ. ಅವರ ಗಾಯದ ಸಮಸ್ಯೆ ಯಾವ ರೀತಿಯದ್ದು ಎಂಬ ಬಗ್ಗೆ ಫ್ರಾಂಚೈಸಿ ಆರಂಭದಲ್ಲಿ ಸ್ಪಷ್ಟ ಮಾಹಿತಿ ನೀಡಿಲ್ಲ. ಹೀಗಾಗಿ ಅವರನ್ನು ಟೂರ್ನಿಯ ಉಳಿದ ಪಂದ್ಯಗಳಿಂದ ಕೈಬಿಟ್ಟು ಹೊಸ ಆಟಗಾರನ ಜೊತೆಗೆ ತುರ್ತಾಗಿ ಒಪ್ಪಂದ ಮಾಡಿಕೊಂಡಿದೆ. ಡೇವಿಡ್ ವಿಲ್ಲಿ ಪಾದದ ಗಾಯದ ಸಮಸ್ಯೆ ಎದುರಿಸಿದ್ದಾರೆ ಎಂಬುದು ತಿಳಿದುಬಂದಿದೆ.
ಆರ್ಸಿಬಿ ತಂಡದಲ್ಲಿ ಆಡಿದ್ದರು
ಅಂದಹಾಗೆ ಬಲಗೈ ಬ್ಯಾಟರ್ ಕೇದಾರ್ ಜಾಧವ್ ಆರ್ಸಿಬಿ ತಂಡಕ್ಕೆ ಹೊಸಬರೇನಲ್ಲ. 2010ರಲ್ಲಿ ಐಪಿಎಲ್ ಡೆಲ್ಲಿ ಡೇರ್ಡೆವಿಲ್ಸ್ನೊಂದಿಗೆ ಐಪಿಎಲ್ ವೃತ್ತಿಬದುಕು ಆರಂಭಿಸಿದ ಕೇದಾರ್ ಜಾಧವ್ ಮೊದಲ ಪಂದ್ಯ ಆಡಿದ್ದು ಆರ್ಸಿಬಿ ವಿರುದ್ಧವೇ. ಪದಾರ್ಪಣೆಯ ಪಂದ್ಯದಲ್ಲೇ ಅವರು ಫಿಫ್ಟಿ ಬಾರಿಸಿ ವಿಶೇಷ ದಾಖಲೆ ಪಟ್ಟಿ ಸೇರಿದ್ದರು. ಐಪಿಎಲ್ನಲ್ಲಿ ಈವರೆಗೆ ಒಟ್ಟು 93 ಪಂದ್ಯಗಳನ್ನು ಆಡಿರುವ ಮಹಾರಾಷ್ಟ್ರದ ಆಟಗಾರ ಕೇದಾರ್ ಜಾಧವ್ ಒಟ್ಟಾರೆ 1196 ರನ್ಗಳನ್ನು ಬಾರಿಸಿದ್ದಾರೆ.
ಆರ್ಸಿಬಿ-ಎಲ್ಎಸ್ಜಿ ಪಂದ್ಯಕ್ಕೆ ಮಳೆ ಕಾಟ, ಪಂದ್ಯ ರದ್ದಾದರೆ ಪ್ಲೇ-ಆಫ್ಸ್ ಲೆಕ್ಕಾಚಾರವೇನು?
2016 ಮತ್ತು 17ರ ಆವೃತ್ತಿಗಳಲ್ಲಿ ಅವರು ಆರ್ಸಿಬಿ ಪರ ಒಟ್ಟಾರೆ 17 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. 2021ರಲ್ಲಿ ಕೊನೇ ಬಾರಿ ಐಪಿಎಲ್ ಅಖಾಡದಲ್ಲಿ ಕಾಣಿಸಿಕೊಂಡಿದ್ದ ಕೇದಾರ್ ಜಾಧವ್ ಅವರನ್ನು ಆರ್ಸಿಬಿ ಇದೀಗ 1 ಕೋಟಿ ರೂ. ಒಪ್ಪಂದದೊಂದಿಗೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಕೇದಾರ್ ಕಮ್ಬ್ಯಾಕ್
2021ರ ನವೆಂಬರ್ ಬಳಿಕ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಕಣ್ಮರೆಯಾಗಿದ್ದ ಕೇದಾರ್ ಜಾಧವ್, 2022ರ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಮಹಾರಾಷ್ಟ್ರ ಪರ ಆಡುವ ಮೂಲಕ ಕಮ್ಬ್ಯಾಕ್ ಮಾಡಿದ್ದರು. 38 ವರ್ಷದ ಅನುಭವಿ ಬ್ಯಾಟರ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 283 ರನ್ ಸಿಡಿಸುವ ಮೂಲಕ ಭಾರಿ ಸದ್ದು ಮಾಡಿದ್ದರು.
ಜಯಂಟ್ಸ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ ಘಿIನಲ್ಲಿ ಒಂದು ಮಹತ್ವದ ಬದಲಾವಣೆ!
2018ರ ಬಳಿಕ ಪ್ರಥಮದರ್ಜೆ ಕ್ರಿಕೆಟ್ನಲ್ಲಿ ಕೇದಾರ್ ಜಾಧವ್ ಬಾರಿಸಿದ ಮೊದಲ ಶತಕ ಇದಾಗಿದೆ. ಅಷ್ಟೇ ಅಲ್ಲದೆ 2014ರ ಬಳಿಕ ಬಾರಿಸಿದ ಮೊದಲ ದ್ವಿಶತಕ ಕೂಡ. 2013-14ರ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ 1223 ರನ್ (17 ಇನಿಂಗ್ಸ್ಗಳಲ್ಲಿ) ಬಾರಿಸಿ ಗರಿಷ್ಠ ರನ್ ಸ್ಕೋರರ್ ಆಗಿದ್ದ ಜಾಧವ್ ಟೀಮ್ ಇಂಡಿಯಾ ಕದ ತಟ್ಟಿದ್ದರು. 2012-13ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಉತ್ತರ ಪ್ರದೇಶ ಎದುರು 327 ರನ್ ಬಾರಿಸಿರುವುದು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅವರ ಶ್ರೇಷ್ಠ ಪ್ರದರ್ಶನವಾಗಿದೆ.
ಆರ್ಸಿಬಿ ಕ್ಯಾಪ್ಟನ್ಸಿ ಮುಂದುವರಿಸುವ ಬಗ್ಗೆ ಮಹತ್ವದ ಮಾಹಿತಿ ನೀಡಿದ ವಿರಾಟ್ ಕೊಹ್ಲಿ!
ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್ನಲ್ಲಿ 73 ಪಂದ್ಯಗಳನ್ನು ಆಡಿರುವ ಕೇದಾರ್ ಜಾಧವ್, 9 ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯಗಳಲ್ಲೂ ತಮ್ಮ ಕರಾಮತ್ತು ಪ್ರದರ್ಶಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 1000ಕ್ಕೂ ಹೆಚ್ಚು ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ 100ಕ್ಕೂ ಹೆಚ್ಚು ಸ್ಟ್ರೈಕ್ರೇಟ್ ಮತ್ತು 40ಕ್ಕೂ ಹೆಚ್ಚಿನ ಸರಾಸರಿ ಹೊಂದಿರುವ ಏಕಮಾತ್ರ ಬ್ಯಾಟರ್ ಎಂಬ ಹೆಗ್ಗಳಿಕೆ ಕೇದಾರ್ ಜಾಧವ್ ಅವರದ್ದು.