ಚಾಮರಾಜನಗರ: ಗೋವಿಂದರಾಜನಗರಲ್ಲಿ ಸೋಲ್ತೀನಿ ಅಂತಾಇಲ್ಲಿಗೆ ಬಂದಿಲ್ಲ, ಆ ಕೆಲಸನಾ ನನ್ನಎಕ್ಕಡನೂ ಮಾಡಲ್ಲಎಂದು ವಸತಿ ಸಚಿವವಿ.ಸೋಮಣ್ಣಗುಡುಗಿದರು.
ಟಿಕೆಟ್ಘೋಷಣೆಯಾದ ಬಳಿಕ ಮೊದಲ ಬಾರಿಗೆಚಾಮರಾಜನಗರಕ್ಕೆ ಆಗಮಿಸಿದ ವಿ.ಸೋಮಣ್ಣ ಬಿಜೆಪಿ ಕಚೇರಿಯಲ್ಲಿ ಪದಾಧಿಕಾರಿಗಳ ಸಭೆ ನಡೆಸಿದರು. ಈ ವೇಳೆ ಅವರುಮಾತನಾಡಿ, ಗೋವಿಂದರಾಜನಗರದಲ್ಲಿ ಸೋಲ್ತಿನಿ ಅಂತಾ ಸೋಮಣ್ಣಇಲ್ಲಿಗೆ ಬಂದಿದ್ದಾರೆಅಂತೆಲ್ಲಾ ಕೆಲವರು ಹೇಳ್ತಾರೆ, ಆದರೆ ಆ ಕೆಲಸನಾ ನನ್ನಎಕ್ಕಡಾನೂ ಮಾಡಲ್ಲ, ಬೆಂಗಳೂರಲ್ಲಿ 5-6 ಕ್ಷೇತ್ರಗೆಲ್ಲಿಸುವ ಸಾಮಥ್ರ್ಯ ನನಗಿದೆಎಂದರು.
ನನಗೆ ಇದು ಬಯಸದೇ ಬಂದ ಭಾಗ್ಯಅಂಥಲ್ಲಾ, ಹೈಕಮಾಂಡ್ ನನ್ನ ಮೇಲೆ ವಿಶ್ವಾಸಇಟ್ಟು ಈ ಕೆಲಸ ಕೊಟ್ಟಿದೆ, ನಾನೋರ್ವಜಾತ್ಯತೀತ ನಾಯಕ, ಸಿದ್ದರಾಮಯ್ಯ ಸೋಲಿಸುವ ಉದ್ದೇಶದಿಂದ ನನ್ನನ್ನು ಕಣಕ್ಕಿಳಿಸಿದ್ದಾರೆ, ವರುಣದಲ್ಲಿ ನನ್ನನ್ನುಅದ್ಧೂರಿಯಾಗಿ ಸ್ವಾಗತಿಸಿದ್ದಾರೆ, ಥಕಥೈಅಂಥಾಕುಣಿತೀದಾರೆ, ಚಾಮರಾಜನಗರಕ್ಕೆಏನಾಗಿದೆ ಪುಟ್ ಬಾಲ್, ವಾಲಿಬಾಲ್ , ಗೋಲಿ ಎಲ್ಲಾಆಡ್ತೀದಿರಾಎಂದು ಬಂಡಾಯ ಸಾರಿದ್ಧವರಿಗೆ ನಯವಾಗಿ ಚೇಡಿಸಿದರು.
ಜಿಲ್ಲೆಘೋಷಣೆಯಾಗಿದ್ದಾಗಿನಿಂದ ಈಗಲೂ ಚಾಮರಾಜನಗರ ಹಾಗೇ ಇದೆ, ಇದರ ಸಮಗ್ರಅಭಿವೃದ್ಧಿಯನ್ನು ಸೋಮಣ್ಣ ಮಾಡ್ತಾನೆ, 13 ರ ಬಳಿಕ ನಿಮ್ಮ ಸೇವಕನಾಗಿರುತ್ತೇನೆ, ಮೋದಿ ಕಾರ್ಯಕ್ರಮದಲ್ಲಿ ನಂಬಿಕೆ ಇದ್ದರೇ ನನ್ನನ್ನು ಬೆಂಬಲಿಸಿ, ಜನರ ಬಳಿ ತೆರಳಿ ಮತಯಾಚಿಸಿ ಎಂದು ಮನವಿ ಮಾಡಿದರು.
ನಾಯಿ-ನರಿ ಮಾತಿಗೆಲ್ಲಾ ಪ್ರತಿಕ್ರಿಯಿಸಲ್ಲ: ರುದ್ರೇಶ್ ವಿರುದ್ಧ ಸೋಮಣ್ಣಕೆಂಡ :ನಾಯಿ-ನರಿ ಮಾತಿಗೆಲ್ಲಾ ನಾನು ಪ್ರತಿಕ್ರಿಯೆಕೊಡಲ್ಲಎನ್ನುವ ಮೂಲಕ ರುದ್ರೇಶ್ ವಿರುದ್ಧ ಸಚಿವ ಸೋಮಣ್ಣಕಿಡಿಕಾರಿದರು.
ಸುದ್ದಿಗಾರರೊಂದಿಗೆಅವರು ಮಾತನಾಡಿ ನನ್ನ ವಿರುದ್ಧ ನನ್ನ ಮೇಲ್ಪಟ್ಟವರು ಮಾತನಾಡಿದರೇ ನಾನು ಮಾತನಾಡುತ್ತೇನೆ, ಅದು ಬಿಟ್ಟು ನಾಯಿ-ನರಿಗೆಲ್ಲಾ ಪ್ರತಿಕ್ರಿಯಿಸಲ್ಲ ಆ ಥರದವರ ಬಗ್ಗೆ ನೀವು ಕೂಡ ಪ್ರಶ್ನೆ ಕೇಳಬೇಡಿ ಎಂದುಗರಂಆದರು.
ಬಂಡಾಯದ ವಿಚಾರ ಬಗ್ಗೆ ಸಚಿವ ಸೋಮಣ್ಣ ಪ್ರತಿಕ್ರಿಯಿಸಿ ಅದು ಪಕ್ಷದಆಂತರೀಕ ವಿಚಾರ, ಪಾರ್ಟಿ ನಾಯಕರುಎಲ್ಲವನ್ನೂ ಸೆಟರೈಟ್ ಮಾಡುತ್ತಾರೆ, 17 ರಂದು ವರುಣದಲ್ಲಿ 19 ರಂದುಚಾಮರಾಜನಗರದಲ್ಲಿ ನಾಮಪತ್ರ ಸಲ್ಲಿಸುತ್ತೇನೆಎಂದು ತಿಳಿಸಿದರು.
ನಮ್ಮ ವರಿಷ್ಟರ ಸೂಚನೆ ಮೇರೆಗೆಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ, ಜನರು ಬದಲಾವಣೆ ಬಯಸಿದ್ದಾರೆ, ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲ್ಲಿದೆ. ಚುನಾವಣೆಯಲ್ಲಿ ಸೋಮಣ್ಣನೇ ಸ್ಟಾರ್ ಪ್ರಚಾರಕ, ಕಾರ್ಯಕರ್ತರೇ ಸ್ಟಾರ್ ಪ್ರಚಾರಕರುಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆಎಂದರು.