ಮೈಸೂರು: ನಗರದ ಇನ್ನರ್ ವಿಲ್ ಕ್ಲಬ್ ಆಫ್ ಮೈಸೂರು ಗೋಲ್ಡ್ ಡಿಸ್ಟ್ 318ರ ನೂತನ ಅಧ್ಯಕ್ಷರಾಗಿ ಶ್ರೀಮತಿ ಪ್ರೇಮಾ ರವಿ ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನಗರದ ಲೇ ರುಚಿ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಸ್ಥಾಪಕ ಅಧಿಕಾರಿ ಹಾಗೂ ಹಿಂದಿನ ಜಿಲ್ಲಾಧ್ಯಕ್ಷರು ಆದ ಅನುರಾಧಾ ನಾಧಕುಮಾರ್ ಅವರು 2024-25ನೇ ಸಾಲಿನ ನೂತನ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಅಧಿಕಾರಿ ಹಸ್ತಾಂತರ ಮಾಡಿದರು.
ಇನ್ನರ್ ವಿಲ್ ಕ್ಲಬ್ ಆಫ್ ಮೈಸೂರು ಗೋಲ್ಡ್ ಸಂಸ್ಥೆಯು ಕಳೆದ 6 ವರ್ಷಗಳಿಂದ ಕಾರ್ಯನಿರ್ವಹಿಸಿಕೊಂಡು ಬಂದಿದ್ದು, ಹಲವು ಸಮಾಜಸೇವೆಗಳಲ್ಲಿ ತೊಡಗಿಸಿಕೊಳ್ಳುತ್ತಾ ಬಂದಿದ್ದು, ಇದೇ ರೀತಿ ಮುಂದುವರೆದು ನೂತನ ಆಯ್ಕೆಯಾದ ಅಧ್ಯಕ್ಷರು, ಪದಾಧಿಕಾರಿಗಳಿಂದ ಶ್ರೀಲಂಕಾದಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ ಟಿ-ಶರ್ಟ್ ನೀಡಲಾಗಿದೆ.

ಅದೇ ರೀತಿ ಅಂಗವಿಕಲರಿಗೆ ವೀಲ್ ಚೇರ್, ಚಿಗುರು ಆಶ್ರಮಕ್ಕೆ ಅಕ್ಕಿ ಹಿಟ್ಟು ರುಬ್ಬುವ ಯಂತ್ರ ಕೊಡುಗೆಯಾಗಿ ನೀಡಲಾಯಿತು. ತದನಂತರ ಸಂಘದ ಸದಸ್ಯರಾಗಿ 10 ಮಂದಿಯನ್ನು ಸಂಘಕ್ಕೆ ಸೇರ್ಪಡೆಗೊಂಡರು.
ಇದೇ ಸಂದರ್ಭದಲ್ಲಿ ಕಾರ್ಯದರ್ಶಿ ಶ್ರೀಮತಿ ಅಂಶು ಅಗರವಾಲ್, ಮಾಜಿ ಅಧ್ಯಕ್ಷರು ಉಮಾ ಅನಿಲ್, ಹಾಗೂ ಮಾಜಿ ಕಾರ್ಯದರ್ಶಿ ವಿಜಯಲಕ್ಷ್ಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.