ಚಾಮರಾಜನಗರ:- ಮಹಿಳೆಯೊಬ್ಬರು ಇಬ್ಬರು ಅಪ್ರಾಪ್ತ ಮಕ್ಕಳನ್ನು ನೇಣು ಹಾಕಿ ನಂತರ ತಾವು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ತಾಲ್ಲೂಕಿನ ತೆರಕಣಾಂಬಿ ಹೋಬಳಿಯ ಬೊಮ್ಮನಹಳ್ಳಿ ಗ್ರಾಮದ ಹೊರ ವಲಯದ ಜಮೀನಿನಲ್ಲಿ ಅಭಿ ಉರುಫ್ ಧನಂಜಯ ಎಂಬುವರ ಪತ್ನಿ ಮೇಘ (24) ರವರು ತಮ್ಮ ಇಬ್ಬರು ಹೆಣ್ಣು ಮಕ್ಕಳಾದ ಪುನ್ವಿತಾ (06), ಮನ್ವಿತಾ, (03) ರವರುಗಳನ್ನು ನೇಣು ಹಾಕಿ ನಂತರ ತಾವು ನೇಣು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇನ್ಸ್ಪೆಕ್ಟರ್ ವನರಾಜು ತಿಳಿಸಿದ್ದಾರೆ.
ಪತಿ ಕೊಲೆ ಮಾಡಿರುವ ಶಂಕೆ: ಸದರಿ ಮೇಘ ಮತ್ತು ಮಕ್ಕಳ ಆತ್ಮಹತ್ಯೆಯ ಬಗ್ಗೆ ಮೃತರಕುಟುಂಬದವರಿAದ ಪತಿಯೇ ಬಾತ ತನ್ನ ತಾಯಿ ನಿರ್ಮಲಮ್ಮ, ತಂದೆ ಮಲ್ಲಿಕಾರ್ಜುನ ಮತ್ತು ತಮ್ಮ ಪುಟ್ಟು ಜೊತೆಗೆ ಸೇರಿ ತನ್ನ ಹೆಂಡತಿ ಮಕ್ಕಳÀನ್ನು ನೇಣು ಬಿಗಿದು ಹತ್ಯೆಗೈದಿದ್ದಾನೆ ಎಂದು ಮೃತ ಮೇಘಳ ತಂದೆ ಮಹೇಶ್ ಆರೋಪಿಸಿದ್ದಾರೆ.
ಅಭಿ ಉರುಫ್ ಧನಂಜಯ ಮತ್ತು ಮೇಘ ಅವರ ಮದುವೆಯಾಗಿ ಎಂಟು ವರ್ಷಗಳಾಗಿತ್ತು. ಪ್ರಾರಂಭದ ದಿನಗಳಿಂದಲೂ ಕುಟುಂಬದವರೆಲ್ಲಾ ಸೇರಿ ಚಿತ್ರಹಿಂಸೆ ನೀಡುತ್ತಿದ್ದರು. ಆದರೂ ಮೇಘಳ ಕುಟುಂಬದವರು ಮಗಳು ಗಂಡನ ಮನೆಯಲ್ಲಿಯೇ ಗೌರವದಿಂದ ಜೀವನ ಸಾಗಿಸಬೇಕು ಎಂದು ಬುದ್ಧಿ ಮಾತುಗಳನ್ನು ಹೇಳಿ ಗಂಡನ ಮನೆಯಲ್ಲಿಯೇ ಇರಿಸಿದ್ದರು.
ನಿನ್ನೆ ಗುರುವಾರ ಬೆಳಿಗ್ಗೆಯಿಂದಲೂ ಮನೆಯಲ್ಲಿ ಗಲಾಟೆ ನಡೆದಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ಲಕ್ಷ್ಮಯ್ಯ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ವನರಾಜು ಭೇಟಿ ನೀಡಿ ಪರಿಶೀಲನೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಈಗಾಗಲೇ ಮೃತರ ಪತಿ ಹಾಗೂ ಅವರ ತಂದೆ, ತಾಯಿಯನ್ನು ಪೋಲಿಸರು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.
ಕುಟುಂಬದವರು ನಮ್ಮ ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡದೇ ಪ್ರತಿಭಟನೆ ನಡೆಸುತ್ತಿದ್ದಾರೆ.
ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
