ಬೆಳಗಿನ ಉಪಹಾರವನ್ನು ಬಿಟ್ಟುಬಿಡುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು, ಅದರಲ್ಲಿ ಪ್ರಮುಖವಾದದ್ದು ಶಕ್ತಿ ಮತ್ತು ನಿಶ್ಯಕ್ತಿಯ ಕೊರತೆ. ಒಂದು ಆಘಾತಕಾರಿ ಪ್ರಕರಣದಲ್ಲಿ ಇತ್ತೀಚೆಗೆ ಬಹಿರಂಗಗೊAಡ ಪ್ರಕಾರ 8 ವರ್ಷಗಳಿಂದ ಉಪಹಾರ ಬಿಟ್ಟುಬಿಟ್ಟಿದ್ದ ಚೀನಾದ ಒಂದು ಮಹಿಳೆಯಲ್ಲಿ 200 ಪಿತ್ತಕೋಶದ ಕಲ್ಲು ಕಾಣಿಸಿಕೊಂಡಿತು.
45 ವರ್ಷ ವಯಸ್ಸಿನ ಒS ಚೆನ್ ಎಂದು ಗುರುತಿಸಲ್ಪಟ್ಟಿದ್ದ ಮಹಿಳೆ ಸುಮಾರು 10 ವರ್ಷಗಳ ಕಾಲ ಹೊಟ್ಟೆ ನೋವನ್ನು ಅನುಭವಿಸುತ್ತಿದ್ದಳು. ಅವಳು ತನ್ನ ತಪುö್ಪ ತಿಳುವಳಿಕೆಯಿಂದಾಗಿ ಯಾವುದೇ ರೀತಿಯ ವೈದ್ಯಕೀಯ ಪರೀಕ್ಷೆಗೆ ಭಯ ಪಟ್ಟು ಆಸ್ಪತ್ರೆಗೆ ಸೇರಲಿಲ್ಲ ಎಂದು ಚೀನಾದ ಹೆಝೌ ಜಿಂಗ್ಜಿ ಆಸ್ಪತ್ರೆಯವರ ಪ್ರಕಟನೆ ತಿಳಿಸಿದೆ.
ಅವಳಿಗೆ ತಡೆಯಲಾಗದ ನೋವು ಕಂಡಾಗ ಆಸ್ಪತ್ರೆಗೆ ಹೇಗಾದರೂ ಸೇರಿದಳು. ವೈದ್ಯಕೀಯ ಪರೀಕ್ಷೆಗಳ ನಂತರ ಅವಳಲ್ಲಿ ಅಸಂಖ್ಯಾತ ಪಿತ್ತ ಕೋಶದ ಕಲ್ಲುಗಳು ಕಂಡು ಬಂದವು. ವೈದ್ಯರ ಪ್ರಕಾರ ಕೆಲವು ಕಲ್ಲುಗಳು ಮೊಟ್ಟೆಗಳಂತೆ ದೊಡ್ಡದಾಗಿವೆ. ಪಿತ್ತಕೋಶ ಮತ್ತು ಪಿತ್ತರಸದ ಕಲ್ಲುಗಳನ್ನು ತೆಗೆದುಹಾಕಲು ವೈದ್ಯರು ಆರುವರೆ ಗಂಟೆಗಳ ಕಾಲ ಅವಳನ್ನು ಶಸ್ತçಚಿಕಿತ್ಸೆಗೆ ಗುರಿಪಡಿಸಿದರು.
ಈ ಕಾರ್ಯಾ ಮಾಡಿದ ಶಸ್ತçಚಿಕಿತ್ಸಕರಲ್ಲಿ ಒಬ್ಬರಾದ ಡಾ ಕ್ವಾನ್ವೀ ವೀ ಹೇಳಿದರು, ಪಿತ್ತ ಕೋಶದ ಕಲ್ಲುಗಳು ಬೆಳಗ್ಗಿನ ಉಪಾಹಾರವನ್ನು ಬಿಟ್ಟುಬಿಡುವ ಅಭ್ಯಾಸದಿಂದಾಗಿ ಉಂಟಾಗಬಹುದು. ಡಾ ಕ್ವಾನ್ವೀ ವೀ ಪ್ರಕಾರ ಯಾರಾದರೂ ಬೆಳಗ್ಗಿನ ಉಪಹಾರವನ್ನು ತಪ್ಪಿಸಿದರೆ ಅವರ ಪಿತ್ತಕೋಶವು ಕುಗ್ಗುವಿಕೆ ಅಥವಾ ವಿಸ್ತರಿಸುವಿಕೆಯಿಂದ ಇರುತ್ತದೆ ಇದರಿಂದಾಗಿ ಪಿತ್ತರಸ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿರುತ್ತಾರೆ.
ಎಚ್ಚರಿಕೆ ಇರಲಿ.. ಬೆಳಗಿನ ಉಪವಾಸ ಅನಾರೋಗ್ಯದ ಸಹವಾಸ
