ಮೈಸೂರು: ಎನ್.ಟಿ.ಎಂ.ಎಸ್ ಸರ್ಕಾರಿ ಶಾಲೆ ಉಳಿಸಿ ಎಂಬ ಹೋರಾಟ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು ಕಾಲಾನಂತರ ಹೋರಾಟದ ಹಾದಿತಪ್ಪಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಹಲವರು ಹಿಂದೆ ಸರಿದ ಹಿನ್ನಲೆ ಹೋರಾಟ ಮುನ್ನೆಡೆಸಲಾಗದ
ಕರ್ನಾಟಕ ಕಾವಲು ಪಡೆ ಕಾರ್ಯಕರ್ತರು ಹೋರಾಟ ಅಂತಿಮ ಶವಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಯೊಂದನ್ನು ಉಳಿಸುವ ಪ್ರಯತ್ನವೊಂದನ್ನು ನಮ್ಮ ಹೆಗಲ ಮೇಲಿರಿಸಿ ಅನೇಕರು ನುಣುಚಿಕೊಂಡರು ಮಧ್ಯವರ್ತಿಗಳ ನಡೆಗೆ ಬೇಸತ್ತು ಇಂದು ಎನ್ ಟಿಎಂಸ್ ಶಾಲೆ ಉಳಿಸಿ ಎಂಬ ಶವವನ್ನು ನಡುರಸ್ತೆಯಲ್ಲೇ ಬಿಡುತ್ತಿದ್ದೇವೆಂದು ಕರ್ನಾಟಕ ಕಾವಲುಪಡೆಯ ಅಧ್ಯಕ್ಷ ಮೋಹನ್ ಕುಮಾರ್ ಗೌಡ ಹಾಗೂ ಕಾರ್ಯಕರ್ತರು ಅಸಹನೆಯ ನೋವಿನ ಕಿಡಿ ಹೊರಹಾಕಿ ಅಲ್ಲದೆ ಹೋರಾಟದಲ್ಲಿ ಮಹನೀಯರ ಹೆಸರಿನಲ್ಲಿ ಆಗಿರುವ ವಂಚನೆಗೆ ಖಂಡನೆ ವ್ಯಕ್ತಪಡಿದರು.