ಮಳವಳ್ಳಿ : ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಯ ಪ್ರಭಾರ ಕಾರ್ಯದರ್ಶಿ ಕೆ.ಸಿ.ಸಾಕಮ್ಮ ವರ್ತಕರೊಬ್ಬರಿಂದ ಲಂಚ ಸ್ವೀಕರಿಸಿರುವ ಆರೋಪದ ಮೇಲೆ ಇಂದು ಮಧ್ಯಾಹ್ನ ಬಂಧಿತರಾಗಿದ್ದಾರೆ.
ತಾಲ್ಲೂಕಿನ ಕಿರುಗಾವಲಿನಲ್ಲಿರುವ ಎಪಿಎಂಸಿ ಪ್ರಾಂಗಣದಲ್ಲಿನ ಗೋದಾಮು ಬಾಡಿಗೆ ವಿಚಾರವಾಗಿ ಆನಂದ್ ಎಂಬುವರಿಂದ 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹಿನ್ನೆಲೆಯಲ್ಲಿ ಮಂಡ್ಯ ಲೋಕಾಯುಕ್ತಕ್ಕೆ ವರ್ತಕ ಆನಂದ್ ದೂರು ಸಲ್ಲಿಸಿದ್ದರು. ಈ ಸಂಬಂಧ ಇಂದು 20 ಸಾವಿರ ರೂ. ಹಣ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎಪಿಎಂಸಿ ಕಚೇರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಿದ್ದರಾಜು ಎಂಬುವರ ಮೂಲಕ ಹಣ ಪಡೆದು ತಮ್ಮ ಕಪಾಟಿನಲ್ಲಿರಿಸಿದ್ದ ಹಣವನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡು ಸಿದ್ದರಾಜು ಹಾಗೂ ಪ್ರಭಾರ ಕಾರ್ಯದರ್ಶಿ ಸಾಕಮ್ಮ ಅವರನ್ನು ಬಂಧಿಸಿದ್ದಾರೆ.
ಲೋಕಾಯುಕ್ತ ದಾಳಿಯಲ್ಲಿ ಎಸ್ಪಿ ಪುಟ್ಟಮಾದಯ್ಯ, ಡಿವೈಎಸ್ಪಿ ಹೆಚ್.ಟಿ.ಸುನೀಲ್ ಕುಮಾರ್, ವೃತ್ತ ನಿರೀಕ್ಷಕರಾದ ಮೋಹನ್ ರೆಡ್ಡಿ, ಪ್ರಕಾಶ್, ಬ್ಯಾಟರಾಯಿಗೌಡ, ಸಿಬ್ಬಂದಿಗಳಾದ ಶರತ್, ಶಂಕರ್, ಮಹದೇವಸ್ವಾಮಿ, ಹೇಮಾವತಿ, ನಂದಿನಿ ಉಪಸ್ಥಿತರಿದ್ದರು.
ಎಪಿಎಂಸಿ ಕಾರ್ಯದರ್ಶಿ ಲೋಕಾ ಬಲೆಗೆ
