ಮೈಸೂರು:ಸಿರಿಧಾನ್ಯಗಳು ನಮ್ಮ ಕೃಷಿ ಲೋಕದ ಸಂಪತ್ತು , ಒಂದೊಮ್ಮೆ ನಿರ್ಲಕ್ಷ್ಯಕ್ಕೆ ಈಡಾಗಿದ್ದ ಸಿರಿಧಾನ್ಯಗಳು ಮತ್ತೆ ಜನಪ್ರಿಯವಾಗುತ್ತಿವೆ.
ಜನರ ಆರೋಗ್ಯಕ್ಕೂ, ಪರಿಸರಕ್ಕೂ ಒಳಿತು ಮಾಡುವ ಸಿರಿಧಾನ್ಯಗಳು ಭವಿಷ್ಯದ ಆಹಾರಗಳು ಎಂದರೆ ತಪ್ಪಾಗಲಾರದು, ಇಂದು ಸಹಜ ಸಮೃದ್ಧ’ ಸಂಸ್ಥೆ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ- ಸುತ್ತೂರು, ದೇವಧಾನ್ಯ ರೈತ ಉತ್ಪಾದಕ ಕಂಪನಿ, ಸಹಜ ಸೀಡ್ಸ್ ಸಹಯೋಗದಲ್ಲಿ ಮೈಸೂರಿನ ನಂಜರಾಜ ಬಹದ್ದೂರು ಛತ್ರದಲ್ಲಿ ಎರಡು ದಿನಗಳ ಕಾಲ ನಡೆಯುವ ಸಿರಿಧಾನ್ಯ ಮೇಳವನ್ನು ಸುತ್ತೂರು ಶ್ರೀಗಳು ಮತ್ತು ನಟಿ ಯಮುನಾ ಶ್ರೀನಿಧಿ ಅವರು ಉದ್ಘಾಟಿಸಿದರು..
ಆಧುನಿಕ ಮತ್ತು ಐಶಾರಾಮಿ ಕೇಂದ್ರಿತ ಜೀವನ ಶೈಲಿಯು ದೇಹವನ್ನು ಕಾಯಿಲೆಗಳ ಗೂಡಾಗಿಸಿದೆ.
ಔಷಧಿಗಳು ಆಹಾರ ಎಂಬಂತಾಗಿರುವ ಇಂದಿನ ದಿನಗಳಲ್ಲಿ, ಆಹಾರವೇ ಔಷಧಿಯಾಗುವ ಅಗತ್ಯವಿದೆ. ಆರೋಗ್ಯ ಕಾಪಾಡಿಕೊಳ್ಳಲು ಸಿರಿಧಾನ್ಯಗಳು ಅತ್ಯುತ್ತಮ ದಾರಿ ಎಂದರೆ ತಪ್ಪಾಗಲಾರದು
*ಮೇಳದಲ್ಲಿ ಏನೇನಿದೆ..,,??*
ಎರಡು ದಿನಗಳ ಮೇಳದಲ್ಲಿ ಕರ್ನಾಟಕದ ವಿವಿಧ ರೈತ ಗುಂಪುಗಳು ಸಿರಿಧಾನ್ಯ, ಅಕ್ಕಿ ಹಾಗೂ ಮೌಲ್ಯವರ್ಧಿತ ತಿನಿಸುಗಳನ್ನು ಪ್ರದರ್ಶಿಸಿವೆ. ಛತ್ತೀಸಗಢ ಆದಿವಾಸಿ ಮಹಿಳೆಯರು ದೇಸಿ ಮೆಕ್ಕೆಜೋಳ, ಜೋಳ, ಬೇಳೆಕಾಳು, ತರಕಾರಿ-ಸೊಪ್ಪು, ಗಡ್ಡೆ ಗೆಣಸುಗಳನ್ನು ಮೇಳಕ್ಕೆ ತಂದಿದ್ದಾರೆ.
ಮಧ್ಯಪ್ರದೇಶದ ಬೈಗಾ ಸಮುದಾಯದ ‘ಸಿಖಿಯಾ’, ನಾಗಾಲ್ಯಾಂಡಿನ ಅಪರೂಪದ ‘ಜಾಬ್ ಟಿಯರ್ಸ್’ ಪ್ರದರ್ಶನದಲ್ಲಿ ಇರಲಿವೆ.
ಕುಂದಗೋಳದ `ದೇವಧಾನ್ಯ ರೈತ ಉತ್ಪಾದಕರ ಕಂಪನಿ’ಯು ಕೈಗೆಟುಕುವ ದರದಲ್ಲಿ ಸಿರಿಧಾನ್ಯಗಳ ಅಕ್ಕಿಯನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದೆ. ಮಹಿಳಾ ರೈತ ಗುಂಪುಗಳ ಮೌಲ್ಯವರ್ಧಿತ ಪದಾರ್ಥಗಳು ಸಹ ಲಭ್ಯವಿದೆ.
ಮರೆತು ಹೋಗುತ್ತಿರುವ ವೈವಿಧ್ಯಮಯ ದೇಸಿ ತಿಂಡಿಗಳಾದ ಸಿರಿಧಾನ್ಯದ ಬಿಸ್ಕೆಟ್, ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಉಂಡೆಗಳ ಮಾರಾಟ ಏರ್ಪಡಿಸಲಾಗಿದೆ.
ಬಾಯಿ ಚಪ್ಪರಿಸಲು ದೇಸಿ ಅಡುಗೆ, ಕೈತೋಟದಲ್ಲಿ ಬಿತ್ತಲು ನಾಟಿ ಬೀಜ ಮತ್ತು ಸಾವಯವ ಪದಾರ್ಥಗಳು ಲಭ್ಯವಿವೆ.
ಹಲಸಿನ ಸಸಿಗಳು, ಬಾಕಾಹು ಪದಾರ್ಥಗಳು, ಶುದ್ಧ ನೈಸರ್ಗಿಕ ಎಣ್ಣೆ, ಸಾವಯವ ಬೀಜ, ಉಪ್ಪಿನಕಾಯಿ, ಐಸ್ ಕ್ರೀಂ, ಕರಕುಶಲ ಸಾಮಗ್ರಿಗಳ ಮಾರಾಟ ನಡೆಯಲಿದೆ
ಸಿರಿಧಾನ್ಯ ಅಡುಗೆ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ
ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆಗಳ ಸ್ಪರ್ಧೆಯು ಆಗಸ್ಟ್ 27ರಂದು (ಭಾನುವಾರ) ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.
ಮನೆಯಲ್ಲಿ ತಯಾರಿಸಿದ ಬಗೆಬಗೆಯ ಅಡುಗೆಗಳನ್ನು ಸ್ಪರ್ಧೆಗೆ ತರಬಹುದು. ವಿಜೇತರಿಗೆ ಬಹುಮಾನ ನೀಡಲಾಗುವುದು.
ಇದರ ಜತೆಗೆ, ಬೆಳಿಗ್ಗೆ 10 ಗಂಟೆಗೆ ಮಕ್ಕಳಿಗಾಗಿ ಸಿರಿಧಾನ್ಯಗಳ ಕುರಿತ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ.
ಈ ಎರಡೂ ಸ್ಪರ್ಧೆಗಳಿಗೆ ಪ್ರವೇಶ ಉಚಿತವಾಗಿದೆ
ಒಟ್ಟಾರೆ ಮೈಸೂರಿನಲ್ಲಿ ಸಿರಿದಾನ್ಯ ಮೇಳ ನಡೆಯುತ್ತಿರುವುದು ಮೈಸೂರಿಗರಿಗೆ ಸಂತಸದ ವಿಚಾರವಾಗಿದ್ದು ಮೇಳದಲ್ಲಿ ಎಲ್ಲರೂ ಪಾಲ್ಗೊಂಡು ಸಿರಿಧಾನ್ಯಗಳ ಬಳಕೆ ಮಾಡುವ ಮನಸು ಮಾಡಿದರೆ ಆರೋಗ್ಯಕ್ಕೂ ಒಳ್ಳೆಯದು ಮೈಸೂರು.