ಮಂಡ್ಯ:ರೈತರ ಪಾಲಿನ ಸಂಜೀವಿನಿ ನಂದಿನಿ ಉಳಿಸಿ ಗುಜರಾತ್ ಅಮೂಲ್ ತಿರಸ್ಕರಿಸಿ ಎಂದು ರಾಜ್ಯಾದ್ಯಂತ ಕದಂಬ ಸೈನ್ಯ ಕನ್ನಡ ಸಂಘಟನೆ ಏಪ್ರಿಲ್ ೧೯ ರಿಂದ ಆಂದೋಲನ ಹಮ್ಮಿಕೊಂಡಿದೆ ಎಂದು ಸಂಘಟನೆ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಂದಿನಿ ಉತ್ಪನ್ನಗಳಿಗೆ ಷೆಡ್ಡು ಹೊಡೆದು ಗುಜರಾತಿನ ಅಮೂಲ್ ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಸದ್ದಿಲ್ಲದೆ ನಡೆಯುತ್ತಿದೆ ಎಂದರು.
ನಂದಿನಿ ಕರ್ನಾಟಕ ಮತ್ತು ಹೊರ ರಾಜ್ಯಗಳಲ್ಲಿ ಅಧಿಪತ್ಯ ಸ್ಥಾಪಿಸಿರುವ ನಮ್ಮ ಕೆಎಂಎಫ್ ಹೊಡೆಯಲು ಈಗಾಗಲೇ ಹುಬ್ಬಳ್ಳಿ, ಬೆಳಗಾವಿ ಮಹಾನಗರಕ್ಕೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದಾರೆ. ಈಗ ಬೆಂಗಳೂರು ಮಹಾನಗರದಲ್ಲಿ ಕೆಲ ದಿನಗಳಿಂದ ನಂದಿನಿ ಪದಾರ್ಥಗಳು ಎಲ್ಲೆಡೆ ಸಿಗದಂತೆ ಕೃತಕ ಅಭಾವ ಸೃಷ್ಟಿಸಿ ಈಗ ಆ ಜಾಗದಲ್ಲಿ ಅಮೂಲ್ ಉತ್ಪನ್ನಗಳು ದೊರೆಯುವಂತೆ ವ್ಯವಸ್ಥಿತವಾಗಿ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಹೇಳಿಕೆ ನೀಡಿದರೆ ಸಾಲದು ತೀವ್ರವಾಗಿ ಹೋರಾಟ ಮಾಡಬೇಕು. ರೈತರ ಒಡನಾಡಿ ಹೈನುಗಾರಿಕೆಯನ್ನು ಉಳಿಸಬೇಕು ಕನ್ನಡಿಗರು ಕಟ್ಟಿ ಬೆಳೆಸಿದ ಬ್ಯಾಂಕುಗಳನ್ನು ಬೇರೆ ಬ್ಯಾಂಕುಗಳ ಜೊತೆಗೆ ಬೆಳಗಿನ ಮಾಡಿ ಹೊರ ರಾಜ್ಯದವರಿಗೆ ಉದ್ಯೋಗವನ್ನು ನೀಡುತ್ತಿದ್ದಾರೆ. ಈಗ ರೈತರ ಪಾಲಿನ ಸಂಜೀವಿನಿ
ಯಾಗಿರುವ ನಂದಿನಿ ಉತ್ಪನ್ನಗಳಿಗೆ ಕೈ ಹಾಕಿದ್ದಾರೆ ಇದರಿಂದ ರೈತರು ದೇವರ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಹೇಳಿದರು.
ನಮ್ಮನ್ನಾಳುವ ಸರ್ಕಾರಗಳು ಕರ್ನಾಟಕದ ಕನ್ನಡಿಗರನ್ನು ಸಂಕಷ್ಟಕ್ಕೆ ಸಿಲುಕುಸುತ್ತಾ ಬಂದಿದ್ದಾರೆ. ಈಗಾಗಲೇ ವ್ಯಾಪಾರ ವಹಿವಾಟು ಹೊರ ರಾಜ್ಯದವರ ಪಾಲಾಗುವದರ ಜೊತೆ ಕೆಎಂಎಫ್ ಕೂಡ ಪಾಲಾಗುತ್ತದೆ. ಕನ್ನಡಿಗರೇ ಜಾಗೃತರಾಗಿ ಕನ್ನಡ ವಿರೋಧಿಗಳಿಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಎಸ್.ಶಿವಕುಮಾರ್, ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ಎಂ.ಬಿ. ಮಹದೇವ್, ಮೈಸೂರು ಶಿವಕುಮಾರ್, ಆರಾಧ್ಯ ಇತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.