ಆರ್ಸಿಎಚ್ ವರದಿ
ಮೈಸೂರು: ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾದ ಬೆನ್ನಲ್ಲೇ ದೀಪಾಲಂಕಾರಕ್ಕೂ ಸಕಲ ಸಿದ್ದತೆ ನಡೆದಿದ್ದು, ಅತ್ತ ದೀಪಾಲಂಕಾರದ ಅಂದ ತುಂಬಿಕೊಳ್ಳಲು ಅಂಬಾರಿಯAತಹ ಒಪನ್ ಬಸ್ಗಳು ರಸ್ತೆಗಿಳಿಯಲು ಸಿದ್ಧತೆ ನಡೆಸಿದೆ.
ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ದಸರಾಗೂ ಮುನ್ನವೇ ಮತ್ತೆ ಅಂಬಾರಿ ಹೆಸರಿನ ಓಪನ್ ಬಸ್ (ತೆರೆದ ಬಸ್)ಗಳನ್ನು ಸಂಚಾರಕ್ಕೆ ರಸ್ತೆಗಿಳಿಸಲು ತಯಾರಿ ನಡೆಸಿವೆ. 2018ರಲ್ಲಿ ಮೊದಲ ಬಾರಿಗೆ ಪ್ರವಾಸೋದ್ಯಮವನ್ನು ಉತ್ತೇಜಿಸಲು ಒಪನ್ ಬಸ್ ಸಂಚಾರವನ್ನು ಪರಿಚಯಿಸಲಾಯಿತು.
ಅಂದಿನಿAದ ಮೈಸೂರಿನ ದಸರಾ ದೀಪಾಲಂಕಾರದ ಬೆಳಕಿನಲ್ಲಿ ನಗರದ ಪಾರಂಪರಿಕ ಕಟ್ಟಡಗಳ ಸೊಬಗು ಹಾಗೂ ನಗರದ ರಸ್ತೆಗಳ ಸೊಬಗು ವೀಕ್ಷಿಸಲು ಒಪನ್ ಬಸ್ ಜನರ ನಂಬರ್ ಒನ್ ಬೇಡಿಕೆಯಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ಇನ್ಫೋಸಿಸ್ ಫೌಂಡೇಶನ್ನ ಮುಖ್ಯಸ್ಥೆ ಸುಧಾಮೂರ್ತಿ ಸೇರಿ ಅನೇಕ ಗಣ್ಯರು ಸಹ ಸಂಚರಿಸಿ ಖುಷ್ ಆಗಿದ್ದಾರೆ.
ಈ ವಿಶೇಷ ವಿನ್ಯಾಸದ ಬಸ್ನಲ್ಲಿ 32 ಸೀಟುಗಳಿದ್ದು, ಪ್ರವಾಸ ಮಾಡಲು ಬಯಸುವವರು ಆನ್ಲೈನ್ ಅಥವಾ ಮೈಸೂರಿನ ಮೆಟ್ರೋಪೊಲೊ ಬಳಿ ಇರುವ ಮಯೂರ ಹೋಟೆಲ್ ಸಮೀಪ ನೇರವಾಗಿ ಟಿಕೆಟ್ ಪಡೆದು ಪ್ರವಾಸ ಮಾಡಬಹುದಾಗಿದೆ. ಒಬ್ಬರಿಗೆ ಈ ಬಾರಿ ಮೇಲ್ಭಾಗದಲ್ಲಿ ಸಂಚರಿಸುವವರಿಗೆ ತಲಾ 500 ರೂ ಹಾಗೂ ಕೆಳ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ 250ರೂ.ಗಳನ್ನು ನಿಗಧಿ ಪಡಿಸಿದೆ.
ಸಂಜೆ 6.30, ರಾತ್ರಿ 8 ಮತ್ತು ರಾತ್ರಿ 9.30ರಿಂದ ಮೂರು ಅಂತರದಲ್ಲಿ ಒಂದು ಗಂಟೆ ಅವಧಿಯ ದೀರ್ಘಾವಧಿ ಚಾಲನೆ ನಡೆಯಲಿದೆ. ಈಗ ಮಯೂರ ಹೊಯ್ಸಳ ಹೋಟೆಲ್ನಿಂದ ಹಳೆ ಡಿಸಿ ಕಚೇರಿ- ಕ್ರಾಫರ್ಡ್ ಹಾಲ್- ಓರಿಯಂಟಲ್ ಸೆಂಟ್ರಲ್ ಲೈಬ್ರರಿ- ರಾಮಸ್ವಾಮಿ ವೃತ್ತ- ಸಂಸ್ಕೃತ ಪಾಠಶಾಲೆ- ಅರಮನೆ ದಕ್ಷಿಣ ದ್ವಾರ- ಜಯಮಾರ್ತಾಂಡ ಗೇಟ್- ಹಾರ್ಡಿಂಜ್ ವೃತ್ತ- ಕೆಆರ್ ವೃತ್ತ- ಸಯ್ಯಾಜಿ ರಾವ್ ರಸ್ತೆ- ಆಯುರೆಡಿಕ್ ಕಾಲೇಜು ವೃತ್ತದವರೆಗೆ ಮಾರ್ಗವನ್ನು ವಿನ್ಯಾಸಗೊಳಿಸಲಾಗಿದೆ. , ರೈಲು ನಿಲ್ದಾಣ ಮತ್ತು ಮಯೂರ ಹೋಟೆಲ್ ಬಳಿ ಮತ್ತೆ ಮುಕ್ತಾಯಗೊಳ್ಳಲಿದೆ.
ಓಪನ್ ಬಸ್ ಬುಕ್ಕಿಂಗ್ಗೆ ಶೀಘ್ರವೇ ಓಪನ್!
![](https://stateroute.in/wp-content/uploads/no-image.jpg)