ಮೈಸೂರು: ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ಅಪೂರ್ವ ಸ್ನೇಹ ಬಳಗದ ವತಿಯಿಂದ ಚಾಮುಂಡಿಪುರಂ ನಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ಹಿರಿಯ ಸ್ವಾತಂತ್ರ ಹೋರಾಟಗಾರ ಹಾಗೂ ಕರ್ನಾಟಕದ ಗಾಂಧಿ ಎಂದು ಹೆಸರು ಪಡೆದಿದ್ದ ತಗಡೂರು ರಾಮಚಂದ್ರ ರಾವ್ ಅವರ 125ನೇ ಜನ್ಮದಿನ ಸರಳವಾಗಿ ಆಚರಿಸಲಾಯಿತು.
ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿದ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿಟಿ.ಪ್ರಕಾಶ್, ತಗಡೂರು ರಾಮಚಂದ್ರ ರಾಯರು
ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯ ಚಳವಳಿಯನ್ನು ದೇಶಾದ್ಯಂತ ತೀವ್ರಗೊಳಿಸಿದ್ದ ಸಂದರ್ಭದಲ್ಲಿ ಕರ್ನಾಟಕದಿಂದಲೂ ಅನೇಕ ಮಂದಿ ಗಾಂಧಿ ಅನುಯಾಯಿಗಳು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಗಾಂಧೀಜಿ ಅವರ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಅಂತಹ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಕರ್ನಾಟಕದ ಗಾಂಧಿ ಎಂದೇ ಖ್ಯಾತರಾಗಿದ್ದ ಶ್ರೀ ತಗಡೂರು ರಾಮಚಂದ್ರರಾವ್ ಅವರು ಪ್ರಮುಖರು ಎಂದು ಸ್ಮರಿಸಿದರು.
ಇದೆ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯ ಮಾ ವಿ ರಾಮ್ ಪ್ರಸಾದ್, ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ಅಜಯ್ ಶಾಸ್ತ್ರಿ, ಸುಚೇಂದ್ರ, ವರುಣ ಮಹಾದೇವ್, ರಾಘವೇಂದ್ರ ಮಠದ ಮುಖ್ಯ ಸಂಚಾಲಕರಾದ ನಾಗರಾಜ್, ಅಕ್ಷಯ್, ಎಸ್ ಎನ್ ರಾಜೇಶ್, ರಾಕೇಶ್ ಇನ್ನಿತರರು ಹಾಜರಿದ್ದರು.