ಮೈಸೂರು: ತಂಗಿಯನ್ನ ಪ್ರೀತಿಸುತ್ತಿದ್ದ ಯುವಕನ ಅಣ್ಣ ಹಾಗೂ ಸ್ನೇಹಿತರು ಬರ್ಬರವಾಗಿ ಹತ್ಯೆಗೈದ ಘಟನೆ ಬೆಳವಾಡಿ ಗ್ರಾಮದಲ್ಲಿ ನಡೆದಿದೆ.
ಹೇಮಂತ್ ಅಲಿಯಾಸ್ ಸ್ವಾಮಿ (23) ಕೊಲೆಯಾದ ದುರ್ದೈವಿ.ಕಲ್ಲಿನಿಂದ ಜಜ್ಜಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಬೈಕ್ನಲ್ಲಿ ಬರುತ್ತಿದ್ದ ವೇಳೆ ಮೂವರಿಂದ ಕೃತ್ಯ ನಡೆದಿದೆ.
ಸಾಗರ್,ಪ್ರತಾಪ್ ಹಾಗೂ ಮಂಜು ಕೊಲೆ ಮಾಡಿದ ಆರೋಪಿಗಳು.
ಸಾಗರ್ ಸಹೋದರಿನ್ನು ಸ್ವಾಮಿ ಪ್ರೀತಿಸುತ್ತಿದ್ದ ಎಂದು ಹೇಳಲಾಗಿದೆ.
ಇದೇ ವಿಚಾರವಾಗಿ ಸಾಗರ್ ಹಾಗೂ ಸ್ವಾಮಿ ನಡುವೆ ವೈಷಮ್ಯ ಬೆಳೆದಿತ್ತು.ಈ ಹಿನ್ನಲೆ ಸ್ನೇಹಿತರ ಜೊತೆ ಸೇರಿ ಸಾಗರ್ ಕೊಲೆ
ಮಾಡಿ ದ್ವೇಷ ತೀರಿಸಿಕೊಂಡಿದ್ದಾನೆ. ಪರಾರಿಯಾಗಿರುವ ಆರೋಪಿಗಳ ಸೆರೆಗೆ ಪೊಲೀಸರು ಜಾಲ ಬೀಸಿದ್ದಾರೆ.
ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.