ಮೈಸೂರು: ಮೈಸೂರಿನವರೇ ಆದ ಹಿಂದೂಸ್ತಾನಿ ಸಿತಾರ್ ವಾದಕ ಡಾ.ರಾಜೀವ್ ತಾರಾನಾಥ್ ರವರಿಗೆ ಕಾರ್ಯಕ್ರಮ ನೀಡಲು ಕಮಿಷನ್ ಕೇಳಿರುವುದು ಕಾಂಗ್ರೆಸ್ ಸರ್ಕಾರದ ಕಮಿಷನ್ ದಂಧೆಯ ಮುಖ ಕಳಚಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಬಿಜೆಪಿ ಮಾದ್ಯಮ ವಕ್ತಾರ ಎಂ.ಮೋಹನ್ ಆಗ್ರಹಿಸಿದ್ದಾರೆ
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿರಿಯ ಕಲಾವಿದರೊಬ್ಬರ ಬಗ್ಗೆ ಹೀಗೆ ವರದಿ ಪ್ರಕಟವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮವಹಿಸಬೇಕು. 1948ರ ದೇವ್ ಹಗರಣದಿಂದ ಪ್ರಾರಂಭವಾಗಿ ಕಲ್ಲಿದ್ದಲು, ಗಣಿ, ಜಿ 3ಜಿ, 48, ಬೋಫೋರ್ಸ್ ಹೀಗೆ ಎಲ್ಲಾ ಪ್ರಕಾರಗಳಲ್ಲೂ ಹಗರಣಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಅಧಿಕಾರ ಏರಿರುವ ಕಾಂಗ್ರೆಸ್ ಇಂದು ದಸರೆಯ ಹೆಸರಿನಲ್ಲಿ ಕಲೆ, ಸಂಸ್ಕೃತಿಯ ಬೀಡಾದ ಮೈಸೂರಿನಲ್ಲಿ ಸಂಗೀತಗಾರರನ್ನೂ ಬಿಡದೆ ಕಮಿಷನ್ ಗೆ ಇಳಿದಿರುವುದು ಅವರ ಶೋಚನೀಯ ಪರಿಸ್ಥಿತಿ ತಿಳಿಸುತ್ತದೆ ಎಂದರು.
ದಸರಾದ್ಯಂತ 100 ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆಯುತ್ತವೆ, ಇದರಿಂದ ಕಮಿಷನ್ ಎಷ್ಟಾಗಬಹುದೆಂದು ಯಾರಾದರೂ ಲೆಕ್ಕ ಹಾಕಬಹುದು. ಈ ಬಗ್ಗೆ ಮುಖ್ಯಮಂತ್ರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಂಡು ಕಲಾವಿದರಿಗೆ ಆಗಿರುವ ಅವಮಾನಕ್ಕಾಗಿ ಬೇಷರತ್ ಕ್ಷಮೆ ಯಾಚಿಸಬೇಕೆಂದರು.
ಸಹ ವಕ್ತಾರ ಕೆ.ವಸಂತ್ ಕುಮಾರ್, ಮಹೇಶ್ ರಾಜೇ ಅರಸ್ ಇನ್ನಿತರರು ಉಪಸ್ಥಿತರಿದ್ದರು.
ಕಾಂಗ್ರೆಸ್ ನಿಂದ ಕಮಿಷನ್ ದಂಧೆಗೆ- ಬಿಜೆಪಿ ಖಂಡನೆ, ತನಿಖೆಗೂ ಆಗ್ರಹ
