ಸುವರ್ಣ ಬೆಳಕು ಫೌಂಡೇಶನ್ ವತಿಯಿಂದ ಪರಿಸರದ ಅರಿವು ಮೂಡಿಸಿದ ಜಾಗೃತಿ ಜಾಥಾ
ಮೈಸೂರು: ಪರಿಸರದ ಅರಿವು, ಸಂರಕ್ಷ ಣೆಗಾಗಿ ಸುವರ್ಣ ಬೆಳಕು ಫೌಂಡೇಶನ್ ಹಾಗೂ ಎಚ್.ಸಿ. ಮಹದೇವಪ್ಪ ಅಭಿಮಾನಿಗಳ ಬಳಗ ವತಿಯಿಂದ ಮೈಸೂರು ಓವಲ್ ಮೈದಾನದಿಂದ ಗಾಂಧಿಪ್ರತಿಮೆ ವರೆಗೆ ಭಾನುವಾರ ಸಂಜೆ ಪರಿಸರ ಜಾಗೃತಿ ಜಾಥಾ ಯಶಸ್ವಿಯಾಗಿ ಜರುಗಿತು. ಪರಿಸರ ಜಾಗೃತಿ ಜಾಥಾಗೆ ನಾಗರಾಜು ತಲಕಾಡು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಕಾಡು ನಾಡಾದಂತೆ ನಾಡೂ ಕಾಡಾಗುವ ಪರಿ ಬೇಕು ಸಾವಿರಾರು ವರ್ಷಗಳಿಂದ ಕಾಡುಗಳನ್ನು ನಾಡುಗಳನ್ನಾಗಿ ಪರಿವರ್ತಿಸಲಾಗುತ್ತಿದೆ ,ಆದರೆ ಈಗ ನಾಡುಗಳೇ ಕಾಡುಗಳಾಗುವಂತೆ ಮಾರ್ಪಡಿಸಬೇಕಿದೆಅಂದರೆ ನಾಡುಗಳೊಳಗೆ ಮನೆಗಳ ಸಂಖ್ಯೆ ಗಿಂತ ಮರಗಳ ಸಂಖ್ಯೆ ಅಧಿಕವಿರುವಂತೆ ನೋಡಿ ಕೊಳ್ಳಬೇಕು.ಮಾನವಕುಲ ಉಳಿಯಬೇಕಾದರೆ ಕಾಡುಕ್ರಾಂತಿ ಆಗಿ ತಲೆಗೊಂದು ಮರ ಇರಬೇಕು .ಪ್ರತಿಕುಟುಂಬದ ಪ್ರತಿಯೊಬ್ಬರ ಹೆಸರಲ್ಲಿ ಮರ ಇರಬೇಕು.ತಲೆಗೊಂದು ಮರ ಎಂಬ ಕಾನೂನು ಬೇಕು ರೇಷನ್ ಕಾರ್ಡ್, ಆಧಾರ್ ಕಾರ್ಡ್ ಪಾನ್ ಕಾರ್ಡ್ಗಳು ಇದ್ದಂತೆ ಗ್ರೀನ್ ಕಾರ್ಡ್ಎಂಬ ಐಡಿಯನ್ನು ಕೂಡ ಅರಣ್ಯ ಇಲಾಖೆ ಖಡ್ಡಾಯಾಮಾಡಬೇಕು ಆಗ ಮಾತ್ರ ಪರಿಸರ ಉಳಿಯಲು ಸಾದ್ಯ. ದೇಶದ ಪ್ರತಿಯೊಬ್ಬರೂ ಒಂದೊಂದು ಮರವನ್ನು ದತ್ತು ತೆಗೆದುಕೊಂಡು ಬೆಳೆಸುವಂತಾಗಬೇಕು.ಆಗಮಾತ್ರ ಮನುಷ್ಯನ ಆರೋಗ್ಯಕರ ಪೀಳಿಗೆ ಮುಂದುವರೆಯಲು ಸುಲಭ.ದೇವರು ಧರ್ಮ ಜಾತಿ ಗಳಿಗಿಂತ ಮರಗಳ ಪ್ರೀತಿ ಹೆಚ್ಚಿಸಿಕೊಳ್ಳಬೇಕು.ಜನಸಂಖ್ಯೆಗನುಗುಣವಾಗಿ ಯಾವುದೇ ದೇಶದಲ್ಲಿ ಆಹಾರೋತ್ಪಾದನೆ ಗಳಲ್ಲಿ, ನಗರಗಳ ಅಭಿವೃದ್ಧಿ ಯಲ್ಲಿ, ವಿಜ್ಞಾನ ತಂತ್ರಜ್ಞಾನ ಅಭಿವೃದ್ಧಿ ಯಲ್ಲಿಹೆಚ್ಚಳ ತರುತ್ತಿರುವ ಮನುಷ್ಯ ಪರಿಸರದ ಅಭಿವೃದ್ಧಿ ಯಲ್ಲಿ ಮಾತ್ರ ಹಿಮ್ಮುಖ ಚಲನೆಯಲ್ಲಿ ಸಾಗುತ್ತಿದ್ದಾನೆ.ಮುಂದಾದರೂ ಕಾಡುಕ್ರಾಂತಿ ವಿಜೃಂಬಿಸಲಿ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಎಚ್ ಪವಿತ್ರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ. ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದ ಮಕ್ಕಳಿಗೆ ಸುಸ್ಥಿರ ಅಭಿವೃದ್ಧಿಯ ದೃಷ್ಟಿಯಲ್ಲಿ ಪೀಳಿಗೆಯು ಸಂರಕ್ಷಿಸಬೇಕಾದ ಪರಿಸರದ ಬಗ್ಗೆ ಸರಳವಾಗಿ ವಿವರ ನೀಡಿದರು.ಬಳಿಕ ಮಾತನಾಡಿದ ಸುವರ್ಣ ಬೆಳಕು ಫೌಂಡೇಶನ್ ಅದ್ಯಕ್ಷ ಮಹೇಶ್ ನಾಯಕ್, ಅವರು ಪರಿಸರ ರಕ್ಷಣೆ ಸಮಾಜ ಸೇವೆಯಲ್ಲ. ಬದಲಾಗಿ ಪ್ರತಿಯೊಬ್ಬರ ಜವಾಬ್ದಾರಿ. ಪರಿಸರ ಮನುಷ್ಯರಿಗಾಗಿ ಮಾತ್ರ ಇಲ್ಲ. ಪ್ರತಿ ಜೀವಿಗಳಿಗೂ ಪರಿಸರದ ಮೇಲೆ ಹಕ್ಕಿದೆ. ಮರ, ಗಿಡಗಳನ್ನು ಸಂರಕ್ಷಿಸಿದರೆ ಅವು ನಮ್ಮನ್ನು ರಕ್ಷಿಸುತ್ತವೆ. ಮರಗಳನ್ನು ಬೆಳೆಸುವುದರಿಂದ ರೋಗಗಳು ದೂರವಾಗುತ್ತವೆ ಎಂದರು.
ಇದೇ ಸಂಧರ್ಭದಲ್ಲಿ ಪರಿಸರ ಜಾಗೃತಿ ಮೂಡಿಸುವ ಫ್ಲೆಕ್ಸ್ ಹಿಡಿದ ಕ್ರೀಡಾ ಪಟುಗಳು ಮಕ್ಕಳು ವಿದ್ಯಾರ್ಥಿಗಳು, ಓವಲ್ ಮೈದಾನದಿಂದ ರಸ್ತೆ ಮಾರ್ಗವಾಗಿ ನ್ಯಾಯಾಲಯದಲಯ ಗಾಂಧಿ ಪ್ರತಿಮೆ ಎದುರು ಪಾರ್ಕ್ ಬಳಿ ಗಿಡ ನೆಡುವ ಮೂಲಕ ಜಾಥಾ ಸಮಾವೇಶಗೊಂಡಿತು.ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಬಿ.ಆರ್, ರವಿ. ಟಿ.ಎಸ್.ಸಹಾಯಕ ದೈಹಿಕ ನಿರ್ದೇಶಕರು, ಮೈ.ವಿ.ವಿ ಡಾ|| ಆರ್ ಕೆ.ಎಸ್.ಓ.ಯು.ಶಿವಪ್ರಸಾದ್ ಎಚ್.ಎಂ,ಮೈ.ಎ.ವಿ, ಹಿರಿಯ ಆರೋಗ್ಯ ನಿರೀಕ್ಷಕರು,ಡಾ. ಮಹದೇವ ಸ್ವಾಮಿ, ಹೊರಳ ಹಳ್ಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ. ವರ್ಷಿತ್, ಕಾರ್ತಿಕ್,ಮುಂತಾದವರು ಭಾಗವಹಿಸಿದ್ದರು.