ವಯನಾಡ್: ಕೇರಳದ ಭೂಕುಸಿತದ ಪರಿಣಾಮವಾಗಿ ಇಡೀ ಜಿಲ್ಲೆಯೇ ಈಗ ಮುರುಕು ಮಂಟಪದಂತೆ ಕಾಣುತ್ತಿದೆ. ಭೂಕುಸಿತದ ತೀವ್ರತೆಗೆ ನೂರಾರು ಜನ ಕಾಣೆಯಾಗಿದ್ದರೆ, ಸದ್ಯ ಸಾವಿನ ಸಂಖ್ಯೆ 93ಕ್ಕೆ ಏರಿಕೆಯಾಗಿದೆ.
ಕೇರಳದ ಸುಂದರ ನಗರಿಗಳಲ್ಲಿ ಒಂದಾದ ವಯನಾಡಿನ ಮೇಲೆ ವರುಣ ದೇವನ ಕ್ರೂರ ದೃಷ್ಟಿ ಬಿದ್ದಿದೆ. ಕೇರಳ ಸಿಎಂ ಪಿಣರಾಯಿ ವಿಜಯಯನ್ ಅವರು ಸುದ್ದಿಗೋಷ್ಟಿ ನಡೆಸಿ ಭೂಕುಸಿತದ ಬಗ್ಗೆ ಮಾಹಿತಿ ನೀಡಿದ್ದಾರೆ. ಕೇರಳದಲ್ಲಿ ಇಂದು ಮುಂಜಾನೆ ೪.೧೦ಕ್ಕೆ ಕಂಡು ಕೇಳರಿಯದ ಭೂ ಕುಸಿತ ಸಂಭವಿಸಿದೆ. ಸದ್ಯ ೯೩ ಜನರ ಮೃತದೇಹ ಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ೧೨೮ ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದಿದ್ದಾರೆ.
ವಯನಾಡ್ ಜಿಲ್ಲೆ ಸಂಕಷ್ಟದ ತವರಾಗಿ ನರಳಿಕೆಯ ನೆಲೆಯಾಗಿ ಕಾಣುತ್ತಿದೆ. ವಯನಾಡ್ ಪ್ರಕೃತಿ ಸೌಂದರ್ಯವನ್ನೇ ತನ್ನ ಒಡಲಲ್ಲಿಟ್ಟುಕೊಂಡು ದೇಶ ವಿದೇಶಿ ಪ್ರವಾಸಿಗರನ್ನು ಸೆಳೆಯುವ ಸೌಂದರ್ಯದೂರು. ಹೀಗಾಗಿ ಇಲ್ಲಿ ನಿತ್ಯ ಸಾವಿರಾರು ಪ್ರವಾಸಿಗರು ಬಂದು ಹೋಗುತ್ತಾರೆ. ಪ್ರಮುಖವಾಗಿ ಮುನ್ನಾರು, ವಯನಾಡು ಕೇರಳದ ಟೂರಿಸ್ಟ್ ಹಬ್ ಗಳಾಗಿಯೇ ಗುರುತಿಸಲ್ಪಟ್ಟಿವೆ.
ಕೇರಳದಲ್ಲಿ ಭೂಕುಸಿತ: 93ಕ್ಕೇರಿದ ಸಾವು
