ಮೈಸೂರು:- ರಾಜ್ಯದಲ್ಲಿ ಮತದಾನ ಉತ್ಸಾಹ ಜೋರಾಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. “60 ಪ್ರತಿಶತದಷ್ಟು ಮತಗಳು ಕಾಂಗ್ರೆಸ್ಗೆ ಸಿಗಲಿವೆ. ಪಕ್ಷ ಕನಿಷ್ಠ 130 ಗರಿಷ್ಠ 160 ಸ್ಥಾನಗಳನ್ನು ಪಡೆದು, ಪೂರ್ಣ ಬಹುಮತದಿಂದ ಸರ್ಕಾರ ರಚನೆ ಮಾಡಲಿದೆ” ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ವರುಣದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮತದಾನ ಮಾಡಲು ಮತಗಟ್ಟೆ ಕೇಂದ್ರಕ್ಕೆ ಹೋಗುವ ಮೊದಲು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, “ರಾಜ್ಯದಲ್ಲಿ ಕಾಂಗ್ರೆಸ್? ಅಧಿಕಾರಕ್ಕೆ ಬರಲಿದೆ. ಸಂಪೂರ್ಣ ಬಹುಮತದಿಂದಲೇ ನಾವು ಸರ್ಕಾರ ರಚನೆ ಮಾಡುತ್ತೇವೆ. 130 ಕ್ಕೂ ಅಧಿಕ ಸ್ಥಾನವನ್ನು ಪಕ್ಷ ಗೆಲ್ಲಲಿದೆ” ಎಂದರು.
“ನಾನು ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ. ಆದರೆ, ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಇದು ನನ್ನ ಕೊನೆಯ ಚುನಾವಣೆ. ಸಿಎಂ ಅಭ್ಯರ್ಥಿಯನ್ನು ಹೈಕಮಾಂಡ್?? ನಿರ್ಧರಿಸಲಿದೆ” ಎಂದು ಹೇಳಿದರು. ಬಳಿಕ ವರುಣ ಮತಕ್ಷೇತ್ರದಲ್ಲಿ ಮತ ಚಲಾವಣೆ ಮಾಡಿದರು. ಸಿದ್ದರಾಮಯ್ಯ ವರುಣ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯ ವಿ. ಸೋಮಣ್ಣ ಅವರು ಎದುರಾಳಿಯಾಗಿದ್ದಾರೆ.
ಕೊನೆ ಚುನಾವಣೆಯ ಮತ ಚಲಾಯಿಸಿದ ಸಿದ್ದರಾಮಯ್ಯ
