ಬಾಲಿವುಡ್ ನಟಿ ರಾಖಿ ಸಾವಂತ್ ತಮ್ಮದಲ್ಲದ ತಪ್ಪಿಗಾಗಿ ಮತ್ತೆ ಸುದ್ದಿಯಾಗಿದ್ದಾರೆ. ಲಿಪ್ ಕಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಖಿ ಸುದ್ದಿಯಾಗಿದ್ದು, ಈ ಪ್ರಕರಣ ಬರೋಬ್ಬರಿ 17 ವರ್ಷಗಳ ಹಿಂದೆ ನಡೆದದ್ದು ಎಂದು ಹೇಳಲಾಗುತ್ತಿದೆ.
ಬಾಲಿವುಡ್ ಗಾಯಕ ಮಿಕಾ ಸಿಂಗ್ ಹುಟ್ಟು ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕವಾಗಿ ರಾಖಿ ಸಾವಂತ್ ಅವರಿಗೆ ಬಲವಂತವಾಗಿ ಕಿಸ್ ಮಾಡಿದ್ದರು. 2006ರಲ್ಲಿ ನಡೆದ ಘಟನೆಯ ಬಗ್ಗೆ ರಾಖಿ ಕೋರ್ಟ್ ಮೊರೆ ಹೋಗಿದ್ದರು. ಸತತ 17 ವರ್ಷಗಳಿಂದ ಈ ಕೇಸ್ ನಡೆಯುತ್ತಿದೆ. ಹಾಗಾಗಿ ಇದೀಗ ಮಿಕಾ ಸಿಂಗ್ ಆ ಕೇಸ್ ಅನ್ನು ಕ್ಲೋಸ್ ಮಾಡಬೇಕು ಎಂದು ಬಾಂಬೆ ಹೈಕೋರ್ಟಿಗೆ ಮೊರೆ ಹೋಗಿದ್ದಾರೆ.
ಪ್ರಕರಣದ ನಂತರ ನಾವಿಬ್ಬರೂ ಮನಸ್ತಾಪವನ್ನು ಬಗೆಹರಿಸಿಕೊಂಡಿದ್ದೇವೆ. ರಾಖಿ ಸಾವಂತ್ ಕೂಡ ತಮ್ಮದೇ ಆದ ಉದ್ಯೋಗದಲ್ಲಿ ಬ್ಯುಸಿಯಾಗಿದ್ದಾರೆ. ಎಫ್.ಐ.ಆರ್ ಕ್ಲೋಸ್ ಮಾಡಲು ಅವರಿಗೆ ಯಾವುದೇ ಅಭ್ಯಂತರವಿಲ್ಲ. ಹಾಗಾಗಿ ಈ ಪ್ರಕರಣವನ್ನು ಅಂತ್ಯಗೊಳಿಸಬೇಕು ಎಂದು ಮಿಕಾ ಮನವಿ ಮಾಡಿದ್ದಾರೆ.
ಕೋರ್ಟ್ ಮುಂದೆ 17 ವರ್ಷಗಳ ಹಿಂದೆ ನಡೆದ ಲಿಪ್ ಲಾಕ್
