ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಬಿರುಸಿನಿಂದ ಮತದಾನ ನಡೆಯುತ್ತಿದ್ದು ವೃದ್ಧರು, ಯುವ ಮತದಾರರು ಓಟ್ ಮಾಡಲು ನವೋಲ್ಲಾಸದಿಂದ ದಾಂಗುಡಿ ಇಡುತ್ತಿದ್ದಾರೆ. ಚಾಮರಾಜನಗರದ 74 ವರ್ಷದ ವೃದ್ಧರೊಬ್ಬರು ನಡೆಯಲಾಗದೇ ವೀಲ್ ಚೇರ್ ನಲ್ಲಿ ಮತದಾನ ಮಾಡಿ ಗಮನ ಸೆಳೆದಿದ್ದಾರೆ. ಚಾಮರಾಜನಗರದ ಹರ್ಷಿತಾ ಎಂಬ ಹೊಸ ವೋಟರ್ ಬೆಳಗ್ಗೆ 7 ಗಂಟೆಗೇ ಬಂದು ಮತದಾನ ಮಾಡುವ ಮೂಲಕ ವೋಟಿಂಗ್ ಪವರ್ ಸಾರಿದ್ದಾರೆ. ಇನ್ನು, ಚಾಮರಾಜನಗರದ ಸಂತೇಮರಹಳ್ಳಿ ವೃತ್ತ ಸಮೀಪದ ಮತಗಟ್ಟೆಯಲ್ಲಿ ಇವಿಎಂ ಕೈ ಕೊಟ್ಟ ಘಟನೆಯೂ ನಡೆಯಿತು. ಉಪ್ಪಾರ ಬೀದಿಯ ಮತಗಟ್ಟೆ 69 ರಲ್ಲಿ ಇವಿಎಂನಲ್ಲಿ ತಾಂತ್ರಿಕ ದೋಷ ಕಂಡು ಬಂದು ಬಳಿಕ ಅಧಿಕಾರಿಗಳಿಂದ ಸರಿಪಡಿಸಿ ಮತದಾನ ಅರ್ಧ ತಾಸು ತಡವಾಗಿ ಆರಂಭಗೊಂಡಿದೆ.