ಬೆಂಗಳೂರು:- ಕನ್ನಡ ಚಲನಚಿತ್ರರಂಗದ ಇಂದಿನ ಪರಿಸ್ಥಿತಿ ನೆನೆದು ನಟ ಜಗ್ಗೇಶ್ ಅವರು ಗಳಗಳನೇ ಕಣ್ಣೀರು ಹಾಕಿದ್ದಾರೆ.
ಕನ್ನಡ ಇಂಡಸ್ಟ್ರಿಯಲ್ಲಿ ಎಲ್ಲರೂ ಒಳ್ಳೆಯ ಸಿನಿಮಾ ಮಾಡುತ್ತಿದ್ದಾರೆ. ಕೆಟ್ಟ ಸಿನಿಮಾಗಳನ್ನು ಮಾಡುತ್ತಿಲ್ಲ. ನ್ಯೂಸ್ ಪೇಪರ್ಗೆ, ಟಿವಿಗಳಿಗೆ ಜಾಹೀರಾತು ಕೊಡ್ತಾರೆ. ಆದರೆ ಥಿಯೇಟರ್ಗಳಲ್ಲಿ ಜನಗಳೇ ಇರಲ್ಲ. ಯಾಕೆ ಈ ತರ ಆಯಿತು. ಕನ್ನಡನೇ ಹಿಂಗೆ ಅಂದರೆ ಇಲ್ಲ, ಸತ್ಯವಾಗಲೂ ಇಂಡಸ್ಟ್ರಿಗೆ ಏನಾಗುತ್ತಿದೆ. ನಾವು ಸಿನಿಮಾ ಮಾಡೋದು ಹೇಗೆ?. ಯಾಕೆ ಜನ ಬರ್ತಿಲ್ಲ ಎಂದು ಜಗೇಶ್ ಅವರು ಕಣ್ಣೀರು ಹಾಕುತ್ತಲೇ ಪ್ರಶ್ನೆ ಮಾಡಿದ್ದಾರೆ.
ತಮ್ಮ ಅಣು, ಅಣುವಿನಲ್ಲೂ ಸಿನಿಮಾ ಇದೆ. ಇದೆಲ್ಲ ಭಿಕ್ಷೆ ಹಾಕಿದ್ದು ಸಿನಿಮಾ. ಆದರೆ ಕಳೆದೆರಡು ವರ್ಷಗಳಿಂದ ಎಷ್ಟೇ ಶ್ರಮ ಹಾಕಿ ಚನ್ನಾಗಿ ಸಿನಿಮಾ ಮಾಡಿದ್ರೆ ಅಭಿಮಾನಿಗಳು ಥಿಯೇಟರ್ ಕಡೆಗೆ ಬರುತ್ತಿಲ್ಲ. ಸಣ್ಣ ಸಿನಿಮಾಗಳು ಭಾರೀ ಸಂಕಷ್ಟಕ್ಕೆ ಒಳಗಾಗುತ್ತಿವೆ ಎಂದು ಜಗ್ಗೇಶ್ ಅವರು ಗಳ ಗಳನೇ ಅತ್ತಿದ್ದಾರೆ.
ಹಿಂದಿ ಸಿನಿಮಾ ನಟ ಅಕ್ಷಯ್ ಕುಮಾರ್ ಅವರು ಕೋಟ್ಯಂತರ ರೂಪಾಯಿಗಳನ್ನು ಹಾಕಿ ಸಿನಿಮಾ ಮಾಡಿದರು ಫೇಲ್ ಆಗಿದೆ. ಎಂಟೈರ್ ಇಂಡಿಯಾದಲ್ಲೇ ಸಿನಿಮಾ ಅನ್ನೋದು ವಾಶ್ ಔಟ್ ಆಗಿದೆ. ಈಗ ಏನು ಬಂದಿದೆ ಎಂದರೆ ೨೦೦ ಕೋಟಿ ರೂಪಾಯಿಗಳನ್ನು ಹಾಕಿ ಯಾರು ಸಿನಿಮಾ ಮಾಡ್ತಾರೆ, ಅದು ಸಿನಿಮಾ. ಯಾರು ಒಳ್ಳೆಯ ಕಥೆಯಿಂದ ಸಣ್ಣ ಸಿನಿಮಾ ಮಾಡ್ತಾರೆ ಅದು ಸಿನಿಮಾ ಅಲ್ಲ ಎಂದು ಭಾವುಕರಾಗಿದ್ದಾರೆ.
ಸಿನಿಮಾಗಳು ರಿಲೀಸ್ ಆದಾಗ ಯೂಟ್ಯೂಬ್ ಸೇರಿದಂತೆ ಸೋಶಿಯಲ್ ಮೀಡಿಯಾಗಳು ಇದೊಂದು ದರಿದ್ರ ಸಿನಿಮಾ, ಇದೊಂದು ಕಿತ್ತೊಗಿದ್ದು ಸಿನಿಮಾ ಇದನ್ನ ನೋಡೋದು ವೇಸ್ಟ್ ಅಂಥ ತಮ್ಮ ಶ್ರಮವನ್ನು ಹಾಕಿ ಇನ್ನೊಬ್ಬರ ಲೈಫ್ ಅನ್ನು ಹಾಳು ಮಾಡ್ತಾರೆ. ಅದನ್ನು ನೋಡಿ ಬರುವಂತ ಜನರೂ ಈ ಕಾಲದಲ್ಲಿ ಇದ್ದಾರೆ. ಎಲ್ಲರು ಚೆನ್ನಾಗಿರಲಿ. ಯಾರಿಗೂ ಕೆಟ್ಟದ್ದು ಬಯಸೋದು ಬೇಡ. ಬೈದರು ಕೂಡ ಬಂದು ಸಿನಿಮಾ ಮಾಡುತ್ತಿದ್ದೇವೆ, ಊಟ ಮಾಡುತ್ತಿದ್ದೇವೆ ಎಂದ್ರೆ ಅದಕ್ಕೆ ಕಾರಣ ಸಿನಿಮಾ. ನೀವು ಬೇಜಾರ್ ಆಗಿ ಯೂಟ್ಯೂಬ್ ನಲ್ಲಿ ವಿಡಿಯೋ ನೋಡುತ್ತಿರಲ್ಲ ಅದು ನನ್ನ ಸಿನಿಮಾ. ನನ್ನ ಅಣು, ರೇಣು, ತೃಣಕಾಷ್ಟ, ನನ್ನ ಬದುಕು, ನನ್ನ ಕನಸು, ನನ್ನ ಬಟ್ಟೆ ನನ್ನ ಊಟ ಸಿನಿಮಾ ಕೊಟ್ಟಿದ್ದು. ಹಾಗಾಗಿಯೇ ಸಿನಿಮಾವನ್ನು ನಾನು ತಾಯಿಯಂತೆ ಪ್ರೀತಿ ಮಾಡುತ್ತೇನೆ ಎಂದು ಜಗೇಶ್ ಕಣ್ಣೀರು ಹಾಕಿದ್ದಾರೆ.
ಗಳಗಳನೇ ಕಣ್ಣೀರಿಟ್ಟ ನಟ ಜಗ್ಗೇಶ್ Jaggesh
