ಜಾಲಹಳ್ಳಿ (ರಾಯಚೂರು ಜಿಲ್ಲೆ): ಸಮೀಪದ ನಿಲವಂಜಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಕೊಳವೆಬಾವಿ ಕೊರೆಯುವ ಯಂತ್ರದಲ್ಲಿ ಕೆಲಸ ಮಾಡುವ ಮೂವರು ಯುವಕರು ಗಾಢ ನಿದ್ರೆಯಲ್ಲಿದ್ದಾಗ ಅವರ ಮೇಲೆ ಜೆಸಿಬಿ ಯಂತ್ರ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತಪಟ್ಟವರನ್ನು ಛತ್ತೀಸ್ಗಢ ಮೂಲದ ಕೃಷ್ಣಾ(25) ಶಿವುರಾಮ(30), ಬಲರಾಮ(28) ಎಂದು ಗುರುತಿಸಲಾಗಿದೆ. ಬೋರ್ವೆಲ್ ಕೆಲಸ ಮುಗಿಸಿಕೊಂಡು ಜಮೀನಿನಲ್ಲೇ ಮಲಗಿದ್ದ ವೇಳೆ ಈ ದುರಂತ ನಡೆದಿದೆ.
ನಿಲುಂಜಿ ಗ್ರಾಮದ ನಿವಾಸಿಯಾದ ಬಾಲಯ್ಯ ಎಂಬುವರಿಗೆ ಸೇರಿದ್ದ ಜೆಸಿಬಿ ಯಂತ್ರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಗೆ ಸಂಬAಧಿಸಿದAತೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪಿಐ ವನಕೇರಪ್ಪ ತಿಳಿಸಿದ್ದಾರೆ.