ಚಾಮರಾಜನಗರ:- ಗಡಿಜಿಲ್ಲೆ ಚಾಮರಾಜನಗರದ್ಯಾಂತ ಮತದಾನ ಆರಂಭವಾಗಿದ್ದು ಬಿರುಸಿನ ಮತದಾನ ನಡೆಯುತ್ತಿದೆ, ಸ್ಯಾಂಡಲ್ ವುಡ್ ನಟ, ಕೆಂಡಸಂಪಿಗೆ ಖ್ಯಾತಿಯ ವಿಕ್ಕಿ ಗ್ರಾಮದ ಮೊದಲ ಮತದಾನ ಮಾಡಿದರು.
ಚಾಮರಾಜನಗರ ತಾಲೂಕಿನ ಮೂಡ್ಲುಪುರ ಗ್ರಾಮಕ್ಕೆ ದೂರದ ಬೆಂಗಳೂರಿನಿಂದ ನಟ ವಿಕ್ಕಿ ಆಗಮಿಸಿ ಗ್ರಾಮದ ಮೊದಲ ಮತದಾನ ಮಾಡಿದರು. ಈ ಮೂಲಕ ಮತದಾನ ಜಾಗೃತಿ ಸಾರಿದರು ಸ್ಯಾಂಡಲ್ ವುಡ್ ನಟ.