ಬೇಲೂರು : ವಿಶ್ವವಿಖ್ಯಾತ ಬೇಲೂರಿನ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ರಾತ್ರಿ ಹೊತ್ತು ದಾಸೋಹಕ್ಕೆ ಚಾಲನೆ
ನೀಡಿದ ಶಾಸಕ ಹೆಚ್.ಕೆ. ಸುರೇಶ್ ವಿಶ್ವವಿಖ್ಯಾತ ಬೇಲೂರು ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ರಾತ್ರಿ ಹೊತ್ತು ದಾಸೋಹ ಪ್ರಾರಂಭಕ್ಕೆ ಶಾಸಕ ಹೆಚ್.ಕೆ. ಸುರೇಶ್ ಅವರು ಚಾಲನೆ ನೀಡಿದರು ದೇವರಿಗೆ ಮಂಗಳಾರತಿ ಹಾಗೂ ಬಂದಂತಹ ಭಕ್ತಾದಿಗಳಿಗೆ ಪ್ರಸಾದ ಬಡಿಸುವ ಮೂಲಕ ರಾತ್ರಿಯ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.
ಚಾಲನೆ ನೀಡಿ ಮಾತನಾಡಿದ ಶಾಸಕರು ಬೇಲೂರು ಒಂದು ವಿಶ್ವವಿಖ್ಯಾತ ತಾಣವಾಗಿದ್ದು ಇಲ್ಲಿ ಮಧ್ಯಾಹ್ನದ ಹೊತ್ತು ಮಾತ್ರ ದಾಸೋಹ ವ್ಯವಸ್ತೆಯಿತ್ತು ಇಲ್ಲಿ ಬಂದಂತಹ ಭಕ್ತಾದಿಗಳಿಗೆ ಇಲ್ಲಿ ತಂಗುವಂತವರಿಗಾಗಲಿ ಅಥವಾ ಮುಂದೆ ಪ್ರಯಾಣ ಮಾಡುವಂತವರಿಗಾಗಲಿ ರಾತ್ರಿ ಹೊತ್ತು ಪ್ರಸಾದದ ವ್ಯವಸ್ಥೆಯ ಅವಶ್ಯಕತೆ ಇದೆ ಎಂಬ ಕೂಗು ಕೇಳಿಬಂದಿದ್ದರಿಂದ ಈ ವ್ಯವಸ್ಥೆಯನ್ನು ಇಲ್ಲಿಯ ದೇವಸ್ಥಾನದ ಸಮಿತಿ ಯವರು ಈ ದಿವಸ ಒಂದು ಒಳ್ಳೆಯ ತೀರ್ಮಾನವನ್ನು ತೆಗೆದುಕೊಂಡು ಪ್ರಸಾದದ ವ್ಯವಸ್ಥೆಯನ್ನು ಮಾಡಿರುತ್ತಾರೆ ಇದರಿಂದ ಹೊರ ಭಾಗದಿಂದ ಬರುವ ಭಕ್ತಾದಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಈ ಸಂಧರ್ಭದಲ್ಲಿ ದೇಗುಲ ಸಮಿತಿ ಅಧ್ಯಕ್ಷ ಡಾ|ನಾರಾಯಣಸ್ವಾಮಿ, ಮುಖಂಡರುಗಳಾದ ಕುಮಾರ್, ದಯಾನಂದ್, ಸಮಿತಿಯ ಸದಸ್ಯರುಗಳಾದ ವಿಜಯಲಕ್ಷ್ಮೀ, ಸುಧಾರಮೇಶ್ ಮುಂತಾದವರು ಇದ್ದರು.
ವರದಿ : ಸುಚಿತ್ರ ಗೌಡ