ಲಿಮಾ (ಪೆರು): ದಕ್ಷಿಣ ಪೆರುವಿನ ಸಣ್ಣ ಚಿನ್ನದ ಗಣಿಯಲ್ಲಿ ಭಾನುವಾರ ಬೆಂಕಿ ಕಾಣಿಸಿಕೊಂಡು 27 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಅರೆಕ್ವಿಪಾದ ದಕ್ಷಿಣ ಪ್ರದೇಶದಲ್ಲಿ ಶನಿವಾರ ಮುಂಜಾನೆ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ವರದಿಯ ಪ್ರಕಾರ, ಅರೆಕ್ವಿಪಾದಲ್ಲಿನ ಯಾನಾಕ್ವಿಹುವಾ ಗಣಿ ಶಾಫ್ಟ್ನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಸಾವನ್ನಪ್ಪಿದ ಗಣಿಗಾರರ ಕುಟುಂಬಗಳಿಗೆ ಪೆರುವಿಯನ್ ಸರ್ಕಾರ ಸಹಾಯ ಅಸ್ತ ಚಾಚಿದ್ದು, ಪರಿಹಾರ ಘೋಷಿಸಿದೆ.
ಸ್ಥಳೀಯ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ಚಿತ್ರಗಳು ಘಟನಾ ಸ್ಥಳದಿಂದ ಹೊರಬರುವ ಕಪ್ಪು ಹೊಗೆಯನ್ನು ತೋರಿಸಿದೆ.