ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯನ್ನು ಅಕ್ರಮ ಮುಕ್ತ ಗೊಳಿಸಲು ಪಣತೊಟ್ಟಿರುವ ಚುನಾವಣಾ ಆಯೋಗ. ಈ ಹಿನ್ನಲೆ ರಾಜ್ಯದ ಗಡಿಗಳಲ್ಲಿ ಚೆಕ್ ಪೋಸ್ಟ್ ಜಾಲ ಹೆಣದಿದೆ.
ಈಗಾಗಲೇ ತನ್ನ ಕಾರ್ಯದಲ್ಲಿ ತೊಡಗಿರುವ ಚುನಾವಣಾ ಆಯೋಗ . ರಾಜ್ಯಾದ್ಯಂತ ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಯಾವುದೇ ಕ್ಷಣದಲ್ಲಾದರೂ ಚುನಾವಣಾ ವೇಳಾಪಟ್ಟಿ ಪ್ರಕಟಣೆಗೊಳ್ಳುವ ಸಾಧ್ಯತೆ ಇದ್ದು, ಆ ಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ.
ಚುನಾವಣೆಯಲ್ಲಿ ಆಕ್ರಮ ತಡೆಗಟ್ಟಲು ಹಾಗೂ ನೀತಿ ಸಂಹಿತೆ ಜಾರಿಗೆ ತರುವ ಸಲುವಾಗಿ 19 ಜಿಲ್ಲೆಗಳಲ್ಲಿ ಗಡಿಭಾಗ ಹೊಂದಿರುವ ನೆರೆ ರಾಜ್ಯದ ಆರು ರಾಜ್ಯದ ಗಡಿ ಪ್ರದೇಶಗಳಲ್ಲಿ ಈಗಾಗಲೇ ಬರುವರೆ 171 ಚೆಕೋಸ್ಕರ ಸ್ಥಾಪನೆಯಾಗಿದೆ. ನೀತಿ ಜಾರಿಗೆ ಬಂದ ನಂತರ ಚೆಕ್ ಪೋಸ್ಟ್ ಗಳ ಸಂಖ್ಯೆ ಹೆಚ್ಚಾಗಲು ಸಾಧ್ಯತೆ ಇದೆ.
ಅನುಮಾನಾಸ್ಪದ ವಾಹನಗಳ ಸಂಚಾರ ಹಾಗೂ ಆಗಮನ ನಿರ್ಗಮನಗಳ ಮೇಲೆ ಕಣ್ಗಾವಲು. ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ , ಕೇರಳ , ಮಹಾರಾಷ್ಟ್ರ ಗೋವಾ ಗಳಿಂದ ಕರ್ನಾಟಕ ರಾಜ್ಯಕ್ಕೆ ಪ್ರವೇಶಿಸುವ ಮುಖ್ಯ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಗಡಿ ಭಾಗಗಳ ಬಳಿ ಬರುವ ರಾಜ್ಯದ ಜಿಲ್ಲೆಗಳಲ್ಲಿ ಅಂತರ್ ರಾಜ್ಯ ಚೆಕ್ ಪೋಸ್ಟ್ ಗಳನ್ನು ಅಳವಡಿಸಲಾಗಿದೆ. ಚೆಕ್ಪೋಸ್ಟ್ ಕಾರ್ಯಾಚರಣೆಗೆ ಬೆಂಬಲ ನೀಡುವಂತೆ ನೆರೆ ರಾಜ್ಯಗಳ ಪೊಲೀಸು ಹಾಗೂ ಇತರ ಅಧಿಕಾರಿಗಳೊಂದಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯ ಚುನಾವಣಾ ಅಧಿಕಾರಿಗಳು ಪತ್ರ ವ್ಯವಹಾರ ನಡೆಸಿದ್ದಾರೆ.
ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣು: 6 ರಾಜ್ಯಗಳ ಗಡಿ ಪ್ರದೇಶಗಳಲ್ಲಿ 171 ಚೆಕ್ ಪೋಸ್ಟ್
