ಮೈಸೂರು:- ಚುನಾವಣೆಗೆ ಸಂಬಂಧಿಸಿದ ಕರಪತ್ರಗಳು, ಬ್ಯಾನರ್ಸ್, ಹೋರ್ಡಿಂಗ್ಸ್ಗಳು ಹಾಗೂ ಫ್ಲೆಕ್ಸ್ಗಳನ್ನು ಜಿಲ್ಲಾಡಳಿತದ ಅನುಮತಿ ಪಡೆದು ನಿಯಮಾನುಸಾರ ಬಳಸಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ. ಕೆ.ವಿ ರಾಜೇಂದ್ರ ಅವರು ತಿಳಿಸಿದರು.
ಚುನಾವಣೆಗೆ ಸಂಬಔಧಿಸಿದಔತೆ ಪ್ರಿಂಟಿಔಗ್ ಪ್ರೆಸ್ ಮತ್ತು ಕೇಬಲ್ ಚಾನೆಲ್ ಮಾಲೀಕರುಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಜಾಪ್ರತಿನಿಧಿ ಕಾಯ್ದೆ 127ಂ ಪ್ರಕಾರ ಮುದ್ರಕ ಮತ್ತು ಪ್ರಕಾಶಕರ ಹೆಸರುಗಳು ಹಾಗೂ ವಿಳಾಸಗಳನ್ನು ಚುನಾವಣಾ ಕರಪತ್ರದ ಮುಖ ಭಾಗದಲ್ಲಿ ಮುದ್ರಿಸಿರಬೇಕು ಹಾಗೂ ಎಷ್ಟು ಚುನಾವಣಾ ಕರಪತ್ರಗಳನ್ನು ಮುದ್ರಿಸಲಾಗಿದೆ ಎಂಬ ಮಾಹಿತಿಯನ್ನು ಹಂಚಿಕೊಔಡಿರಬೇಕು. ಚುನಾವಣಾ ಕರಪತ್ರವನ್ನ ಮುದ್ರಿಸಿದ ನಂತರ ಅದರ ಪ್ರತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸಿಕೊಡಬೇಕು ಎಂದು ಸೂಚಿಸಿದರು.

ಚುನಾವಣೆಗೆ ಸಂಬಔಧಿಸಿದ ಕರಪತ್ರಗಳು, ಪ್ಲೆಕ್ಸ್ ಇತ್ಯಾದಿಗಳನ್ನು ಮುದ್ರಿಸುವ ಮುನ್ನ ಡೆಲಿವರಿ ಚಲನ್ ಅನ್ನು ಜಿಲ್ಲೆಯ ನೋಡಲ್ ಅಧಿಕಾರಿಗಳಿಗೆ ನೀಡಿ ಅವರಿಂದ ಅನುಮತಿ ಪಡೆದ ನಂತರ ಮುದ್ರಿಸಬೇಕು ಇಲ್ಲದಿದ್ದಲ್ಲಿ ಅಂತಹ ಮುದ್ರಣಾಲಯದ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
7ನೇ ಅಕ್ಟೋಬರ್ 2008 ರಲ್ಲಿನ ನಿರ್ದೇಶನದಂತೆ ಹೋರ್ಡಿಂಗ್ಸ್ಗಳು, ಫ್ಲೆಕ್ಸ್ ಬೋರ್ಡ್ ಇತ್ಯಾದಿಗಳ ಸಂದರ್ಭದಲ್ಲಿ ಅವುಗಳನ್ನು ಪ್ರದರ್ಶಿಸುವ ಮೊದಲು ಆಸ್ತಿಯ ಮಾಲೀಕರಿಂದ ಪೂರ್ವಾನುಮತಿ ಪಡೆಯುವುದು ಅವಶ್ಯಕ. ಸಾರ್ವಜನಿಕ ಅಥವಾ ಖಾಸಗಿ ಸ್ಥಳದಲ್ಲಿ ಫ್ಲೆಕ್ಸ್ ಬೋರ್ಡ್ ಹಾಗೂ ಕರಪತ್ರಗಳನ್ನು ಪ್ರದರ್ಶಿಸುವಾಗ ಪಕ್ಷದ ಅಭ್ಯರ್ಥಿಯು 7ನೇ ಅಕ್ಟೋಬರ್ 2008ರ ಪತ್ರದೊಂದಿಗೆ ಲಗತ್ತಿಸಲಾದ ನಮೂನೆಯ ಪ್ರಕಾರ ಚುನಾವಣಾ ಅಧಿಕಾರಿಗೆ ಅಂತಹ ಸಂಗ್ರಹಣೆಯ ಎರಡು ಭಾವಚಿತ್ರದೊಂದಿಗೆ ಮಾಹಿತಿಯನ್ನು ನೀಡಬೇಕು ಇಲ್ಲದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಪ್ರಿಂಟಿಔಗ್ ಪ್ರೆಸ್ ಮತ್ತು ಕೇಬಲ್ ಚಾನೆಲ್ಗಳ ಮಾಲೀಕರುಗಳು ಉಪಸ್ಥಿತರಿದ್ದರು.