ಕುಶಾಲತೋಪು ಸಿಡಿತಕ್ಕೆ ಜಗ್ಗದ ಗಜಪಡೆ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2024 ದಸರಾ ಗಜಪಡೆ ಮತ್ತು ಅಶ್ವಾರೋಹಿ ದಳದ ಸಮ್ಮುಖದಲ್ಲಿ ಕುಶಾಲತೋಪು ಸಿಡಿಸುವ ಅಂತಿಮ ಹಂತದ ತಾಲೀಮು ನೆರವೇರಿದೆ.
ವಸ್ತು ಪ್ರದರ್ಶನ ಆವರಣದ ಪಾರ್ಕಿಂಗ್ ಸ್ಥಳದಲ್ಲಿ ನಡೆದ ತಾಲೀಮಿನಲ್ಲಿ ಗಜಪಡೆಯ ಅತ್ಯಂತ ಹಿರಿಯ ಆನೆ ವರಲಕ್ಷಿ÷್ಮ ಹೊರತುಪಡಿಸಿ ಉಳಿದ 13 ಆನೆಗಳು ತಾಲೀಮಿನಲ್ಲಿ ಭಾಗಿಯಾಗಿದ್ದು, ಅಶ್ವಾರೋಹಿ ದಳದ 30 ಕ್ಕೂ ಹೆಚ್ಚು ಕುದುರೆಗಳು ಸಹ ಭಾಗವಹಿಸಿದ್ದರು.
ನಗರ ಸಶಸ್ತç ಮೀಸಲು ಪಡೆಯ ಸಿಬ್ಬಂದಿಗಳಿAದ ಏಳು ಫಿರಂಗಿ ಗಾಡಿಗಳಿಂದ ತಲಾ ಮೂರು ಬಾರಿ ಒಟ್ಟು 21 ಕುಶಾಲತೋಪುಗಳನ್ನು ಸಿಡಿಸಿದ ಸಿಎಆರ್ ಸಿಬ್ಬಂದಿಗಳು ಇದಕ್ಕೂ ಮುನ್ನಾ ಆನೆಗಳ ಬಳಿ ಆಟಂಬಾAಬ್ ಸಿಡಿಮದ್ದನ್ನು ಸಿಡಿಸಲಾಯಿತು.
ಕುಶಾಲತೋಪು ಸಿಡಿಸಿದ ಶಬ್ದಕ್ಕೆ ವೇಳೆ ಬೆದರದೆ ನಿಂತಿದ್ದ ಗಜಪಡೆ ಹಾಗೂ ಅಶ್ವಾರೋಹಿ ದಳ ಜಂಬೂಸವಾರಿ ಮೆರವಣಿಗೆಗೆ ನಾವು ಸಿದ್ದ ಎಂಬ ಸಂದೇಶವನ್ನು ಆನೆ ಕುದುರೆಗಳು ರವಾಸಿದಂತೆ ಇದ್ದರು.
ಈ ಕುರಿತು ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಸಿಎಫ್ ಡಾ ಮಾಲತಿಪ್ರಿಯಾ, ಡಿಸಿಎಫ್ ಡಾ ಐ ಬಿ ಪ್ರಭುಗೌಡ ಅವರು ಅಂತಿಮ ಹಂತ ತಾಲೀಮಿನಲ್ಲಿ ಭಾಗವಹಿಸಿದ್ದರು.