ಮೈಸೂರು: ಜಯ ಕರ್ನಾಟಕ ಸೇನೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಮೈಸೂರಿನ ರೋಟರಿ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಇದೇ ವೇಳೆ ಜಿಲ್ಲಾ ಉಪಾಧ್ಯಕ್ಷ ಕಾಂತರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜು, ಸಂಘಟನಾ ಕಾರ್ಯದರ್ಶಿ ಮಂಜುನಾಥ್ ರಾವ್, ಸಹಕಾರ್ಯದರ್ಶಿ ರಂಗಸ್ವಾಮಿ ನೇಮಕಗೊಂಡರು. ಮೈಸೂರು ನಗರಾಧ್ಯಕ್ಷರಾಗಿ ಶ್ರೀಹರ್ಷ, ನಗರ ಉಪಾಧ್ಯಕ್ಷರಾಗಿ ಸಂದೇಶ್ಕುಮಾರ್, ನಗರ ಕಾರ್ಯದರ್ಶಿ ನವೀನ್, ನಗರ ಪ್ರಧಾನ ಕಾರ್ಯದರ್ಶಿ ಚೇತನ್, ನರಸಿಂಹ ರಾಜ ಕ್ಷೇತ್ರ ಅಧ್ಯಕ್ಷರಾಗಿ ಸಂದೇಶ್, ಮೈಸೂರು ತಾಲ್ಲೂಕು ಅಧ್ಯಕ್ಷರಾಗಿ ಸುರೇಶ್, ಇಲವಾಲ ಹೋಬಳಿ ಅಧ್ಯಕ್ಷರಾಗಿ ಕುಮಾರ್ ಪದಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು.
ಸಂಘಟನೆಯ ರಾಜ್ಯಾಧ್ಯಕ್ಷ ಡಾ.ಬಿ.ಎನ್.ಜಗದೀಶ್, ಜಿಲ್ಲಾಧ್ಯಕ್ಷ ಶ್ರೀಧರ್ ನಾಯಕ್, ಕಾರ್ಯಾಧ್ಯಕ್ಷ ರಾಮಚಂದ್ರ, ಸಂಘಟನಾ ಕಾರ್ಯದರ್ಶಿ ವಿಜಯಗೌಡ, ರಾಜು ನಾಯಕ್ ಸೇರಿ ಇನ್ನಿತರರು ಉಪಸ್ಥಿತರಿದ್ದರು.
ಜಯಕರ್ನಾಟಕ ಸೇನೆ ಪದಾಧಿಕಾರಿಗಳ ಪದಗ್ರಹಣ
