ನಂಜನಗೂಡು:- ಜಾನಪದ ಕಲಾವಿದರು ಶ್ರೀಗಂಧದಂತೆ ಎಂದು ನಂಜನಗೂಡು ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ್ ಬಣ್ಣಿಸಿದರು.
ನಂಜನಗೂಡು ನಗರದ ಹಂಡುವಿನಹಳ್ಳಿ ಬಡಾವಣೆಯಲ್ಲಿ ಏಳುಮಲೆ ಮಹದೇಶ್ವರ ಸಾಂಸ್ಕೃತಿಕ ಕಲಾ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಜಾನಪದ ಗೀತೆ ಮತ್ತು ಸುಗಮ ಸಂಗೀತ 2023 ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಗೀತೆಗಳಿಗೆ ಅದರದ್ದೇ ಆದ ಇತಿಹಾಸವನ್ನು ಹೊಂದಿದೆ. ಜಾನಪದ ಗೀತೆಗಳನ್ನು ಕೇಳಿದರೆ ಪದೇ ಪದೇ ಕೇಳಬೇಕು ಅನ್ನಿಸುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಿನಿಮಾ ಗೀತೆಗಳಿಗೆ ಜನರು ಮಾರು ಹೋಗಿದ್ದಾರೆ. ಕೇಳುಗರೆ ಇಲ್ಲದೆ ಜನರ ಜಾನಪದವು ಅಳಿವಿನ ಅಂಚಿಗೆ ಬಂದು ತಲುಪುತ್ತಿರುವುದು ದುರಂತ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂತಹ ಕಾರ್ಯಕ್ರಮಗಳನ್ನು ಹೆಚ್ಚಾಗಿ ನಡೆಸಿ ಜನರಿಗೆ ಜಾಗೃತಿ ಮೂಡಿಸಿ, ಜಾನಪದ ಕಲಾವಿದರಿಗೆ ನೆರವಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಪಂ ಸದಸ್ಯರಾದ ಮಹದೇವ್, ಗಂಗಾಧರ್, ಏಳುಮಲೆ ಮಹದೇಶ್ವರ ಸಾಂಸ್ಕೃತಿಕ ಕಲಾ ಟ್ರಸ್ಟ್ ಕಾರ್ಯದರ್ಶಿ ಮಾದೇಶ್, ಬದನವಾಳು ಲಕ್ಷ್ಮೀನಾರಾಯಣ, ರವಿ, ಮಲ್ಲಿಕಾರ್ಜುನ ಸೇರಿದಂತೆ ಹಲವರು ಭಾಗವಹಿಸಿದ್ದರು.
ಜಾನಪದ ಕಲಾವಿದರು ಶ್ರೀಗಂಧದಂತೆ : ಗಂಗಾಧರ್
