ಎಚ್ ಡಿ ಕೋಟೆ: ತಾಲೂಕಿನ ಜಕ್ಕಹಳ್ಳಿ ಗ್ರಾಮದಲ್ಲಿ ಸುಮಾರು ದಿನಗಳಿಂದ ಚಿರತೆಯು ಮೂರು ನಾಲ್ಕು ಜಾನುವಾರುಗಳನ್ನು ತಿಂದಿದ್ದು ಇದನ್ನು ಅರಣ್ಯ ಇಲಾಖೆಗೆ ತಿಳಿಸ್ದಾಗ ಅರಣ್ಯ ಇಲಾಖೆಯವರು ಚಿರತೆಯನ್ನು ಸೆರೆ ಹಿಡಿಯಲು ಸಣ್ಣಗ್ಧರಾಗಿ ಕೂಡಲೇ ಬೋನನ್ನು ಚಿರತೆಯು ಹಸುವನ್ನು ತಿಂದಿದ್ದ ಜಾಗವಾದ ಲಿಂಗೇಗೌಡ ಎಂಬುವರ ಜಮೀನಿನಲ್ಲಿ ಇಳಿಸಿದ್ದರು ಆದರೆ ಚಿರತೆಯು ಇಂದು ಬೆಳಗ್ಗೆ ಬೋನಿಗೆ ಬಿದ್ದಿರುವುದನ್ನು ಗಮನಿಸಿದ ರೈತರು ಅರಣ್ಯ ಇಲಾಖೆಗೆ ಮಾಹಿತಿಯನ್ನು ತಿಳಿಸಿದರು ನಂತರ ಅರಣ್ಯ ಇಲಾಖೆಯವರು ಸ್ಥಳಕ್ಕೆ ಬಂದು ಚಿರತೆಯನ್ನು ಕೊಂಡೊಯ್ಯುವಾಗ ರೈತರು ನಮಗೆ ಇಲ್ಲೇ ಪರಿಹಾರವನ್ನು ನೀಡಿ ಎಂದು ವಿನಂತಿ ಮಾಡಿಕೊಂಡರು ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನಿನ ಪ್ರಕಾರ ಎಲ್ಲಾ ರೀತಿಯ ಪರಿಹಾರವನ್ನು ನಾವು ಕುಡಿಸುವುದಾಗಿ ಭರವಸೆಯನ್ನು ಅರಣ್ಯ ಅಧಿಕಾರಿಗಳಾದ ಡಿ ಆರ್ ಎಫ್ ಚಂದನ್ ಮತ್ತು ಪೆಮ್ಮಯ್ಯ. ಎಂ ರವರುತಿಳಿಸಿದರು ನಂತರ ಚಿರತೆಯನ್ನು ಕೋಟೆಯ ಅರಣ್ಯ ಇಲಾಖೆಯ ಕಚೇರಿಗೆ ರವಾನಿಸಿದರು.