ಮೈಸೂರು: ಮೈಸೂರು ಜಿಲ್ಲೆಯಲ್ಲಿ 496 ಡೆಂಘಿ ಪ್ರಕರಣಗಳು ಇದ್ದು, 16 ಆಕ್ಟಿವ್ ಪ್ರಕರಣಗಳಿವೆ. ಓರ್ವರು ಡೆಂಘಿಗೆ ಬಲಿಯಾಗಿದ್ದಾರೆ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾಹಿತಿ ನೀಡಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ ಈಗ ಮಳೆಗಾಲ ಆರಂಭವಾಗಿದೆ. ಹೀಗಾಗಿ ಡೆಂಘಿ ಪ್ರಕರಣಗಳು ಹೆಚ್ಚಾಗುತ್ತಿವೆ. ಡೆಂಘಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ.
ನಗರ ಪ್ರದೇಶದಲ್ಲೇ 130ಕ್ಕೂ ಹೆಚ್ಚು ಪ್ರಕರಣ ಕಂಡು ಬಂದಿದೆ. ಈಗಾಗಲೇ ಗ್ರಾಮಾಂತರ ಮತ್ತು ನಗರ ಪ್ರದೇಶದಲ್ಲಿ ಡೆಂಘೆ ಹರಡದಂತೆ ಕ್ರಮ ವಹಿಸಲು ಸೂಚನೆ ಕೊಟ್ಟಿದ್ದೇನೆ.
ರಾಜ್ಯಕ್ಕೆ ಹೋಲಿಕೆ ಮಾಡಿಕೊಂಡರೆ ಮೈಸೂರಿನಲ್ಲಿ ಕಡಿಮೆ ಪ್ರಕರಣಗಳು ಪತ್ತೆಯಾಗಿವೆ.
ಆಷಾಡ ಶುಕ್ರವಾರಕ್ಕೆ ಬೇಕಾದ ಎಲ್ಲಾ ಅಗತ್ಯ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ.
ಜನರ ಧಾರ್ಮಿಕತೆಗೆ ಸರ್ಕಾರ ಬದ್ಧವಿದೆ.
ಕಬಿನಿ ಡ್ಯಾಮ್ ಭರ್ತಿಯಾಗುತ್ತಿದೆ. ಕಬಿನಿ ಡ್ಯಾಮ್ ನಿಂದ ಈಗ ಕೆರೆ ಕಟ್ಟೆಗಳಿಗೆ ನೀರು ಬಿಡಲು ಸೂಚಿಸಲಾಗಿದೆ. ಮುಂದೆ ಯಾವ ರೀತಿ ಮಳೆಯಾಗುತ್ತದೆ ಎಂಬ ಮಾಹಿತಿ ಪಡೆದು ಕೃಷಿಗೆ ನೀರು ಬಿಡುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ.
ಜಿಲ್ಲೆಯಲ್ಲಿ 496 ಡೆಂಘಿ ಪ್ರಕರಣಗಳು: 16 ಆಕ್ಟಿವ್ ಪ್ರಕರಣಗಳಿವೆ- ಡಾ.ಎಚ್.ಸಿ.ಮಹದೇವಪ್ಪ ಮಾಹಿತಿ
