ಸ್ವೀಡನ್: ಲೈಂಗಿಕತೆಯನ್ನು ಕ್ರೀಡೆ ಎಂದು ನೋಂದಾಯಿಸಿರುವ ಮೊತ್ತಮೊದಲ ದೇಶ ಸ್ವೀಡನ್ ಇದೀಗ ಯೂರೋಪಿಯನ್ ಸೆಕ್ಸ್ ಚಾಂಪಿಯನ್ ಶಿಪ್ ಆಯೋಜಿಸಿದೆ. ಜೂನ್ 8ರಂದು ಗೋಥೆನ್ಬರ್ಗ್ನಲ್ಲಿ ಸೆಕ್ಸ್ ಚಾಂಪಿಯನ್ಶಿಪ್ ನಡೆಯಲಿದೆ.
16 ವಿಭಾಗಗಳಲ್ಲಿ ಈ ಸೆಕ್ಸ್ ಚಾಂಪಿಯನ್ಶಿಪ್ ಅನ್ನು ನಡೆಸಲಾಗುತ್ತಿದೆ. ವರದಿಗಳ ಪ್ರಕಾರ, ಸೆಕ್ಸ್ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸುವುದಾಗಿ ಈಗಾಗಲೇ ವಿವಿಧ ಯುರೋಪಿಯನ್ ದೇಶಗಳ 20 ಪ್ರತಿನಿಧಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.
ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ವಿಜೇತರು ಯಾರೆಂಬುದನ್ನು ಮೂವರು ತೀರ್ಪುಗಾರರು ಮತ್ತು ಪ್ರೇಕ್ಷಕರ ರೇಟಿಂಗ್ ಮೂಲಕ ನಿರ್ಧರಿಸಲಾಗುತ್ತದೆ. ಪ್ರೇಕ್ಷಕರ 70% ಮತಗಳನ್ನು ಪರಿಗಣಿಸಿದರೆ, 30% ಮತಗಳನ್ನು ತೀರ್ಪುಗಾರು ನೀಡುತ್ತಾರೆ ಎಂದು ತಿಳಿದು ಬಂದಿದೆ.
ಸ್ವೀಡಿಷ್ ಫೆಡರೇಶನ್ ಆಫ್ ಸೆಕ್ಸ್ನ ಅಧ್ಯಕ್ಷ ಡ್ರಾಗನ್ ಬ್ರಾಟಿಚ್ ಈ ಬಗ್ಗೆ ಮಾತನಾಡಿ, ಲೈಂಗಿಕತೆಯನ್ನು ಕ್ರೀಡೆಯಾಗಿ ಪರಿವರ್ತಿಸುವುದು ಅನಿವಾರ್ಯ. ಇದು ಗಂಡು ಮತ್ತು ಹೆಣ್ಣಿನ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತೇಜಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.