ಬೆಂಗಳೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ನಾಲ್ಕು ಪ್ರತ್ಯೇಕ ಪ್ರಕರಣದಲ್ಲಿ ತುಮಕೂರು ಜಿಲ್ಲೆಯ ಮಧುಗಿರಿ ಉಪ ಕಾರಾಗೃಹದ ಜೈಲರ್ ಸೇರಿ ನಾಲ್ವರು ಆರೋಪಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಮಧುಗಿರಿ ಉಪ ಕಾರಾಗೃಹದ ಅಧೀಕ್ಷಕ ದೇವೇಂದ್ರ ಆರ್.ಕೋಣಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ವ್ಯಕ್ತಿಯಾಗಿದ್ದಾರೆ.
ಶಿರಾ ನಿವಾಸಿ ಅರ್ಬಾಜ್ ಪ್ರಕರಣವೊಂದರಲ್ಲಿ ಮಧುಗಿರಿ ಉಪ ಕಾರಾಗೃಹದಲ್ಲಿದ್ದರು. ಆಗಾಗ್ಗೆ ಅವರನ್ನು ನೋಡಲು ಮನೆಯವರು ಬರುತ್ತಿದ್ದರು. ಬಂದಾಗಲೆಲ್ಲ ರೂ.1,500,ರೂ.2,000 ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಹಣ ಕೊಡದಿದ್ದರೆ ತುಮಕೂರು ಜೈಲಿಗೆ ಕಳುಹಿಸುವುದಾಗಿ ಬೆದರಿಸುತ್ತಿದ್ದರು. ಮಂಗಳವಾರ ಕುಟುಂಬದವರು ಅರ್ಬಾಜ್ ಭೇಟಿ ಮಾಡಲು ಬಂದಿದ್ದು, ಅಧೀಕ್ಷಕರು ರೂ.5 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಶಿಕ್ಷಕರ ಹೆಚ್ಚುವರಿ ವೇತನ ಪಾವತಿಗೆ ಹಣ ಬೇಡಿಕೆ ಇಟ್ಟು ಹಣ ಪಡೆಯುತ್ತಿರುವಾಗ ಬಿಇಒ ಕಚೇರಿಯ ಅಧೀಕ್ಷಕ ವೆಂಕಟೇಶ ಇನಾಮದಾರ, ಬೀಳಗಿ ಕಂದಾಯ ಶಿರಸ್ತೆದಾರ ಮಹಾಂತೇಶ್ ಹುರಕಡ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮಂಗಳವಾರ ಮಧ್ಯಾಹ್ನ ಬಾದಾಮಿ ಪಟ್ಟಣದ ಬಿಇಒ ಕಚೇರಿಯಲ್ಲಿ ಲೆಕ್ಕ ಅಧೀಕ್ಷಕ ವೆಂಕಟೇಶ ಇನಾಮದಾರ ಲೋಕಾಯುಕ್ತ ದಾಳಿ ಸಂದರ್ಭದಲ್ಲಿ ಶಿಕ್ಷಕರಿಂದ ನಗದು ಹಣ ಪಡೆಯುವ ಸಂದರ್ಭದಲ್ಲಿ ನೇರವಾಗಿ ಸಿಕ್ಕಿಬಿದ್ದಿದ್ದಾರೆ.
ಗುಳೇದಗುಡ್ಡ ನಗರದ ವೆಂಕಟೇಶ್ವರ ಪ್ರೌಢಶಾಲೆಯ ಶಿಕ್ಷಕರ ವೇತನವನ್ನು ಶೀಘ್ರ ಬಿಡುಗಡೆ ಮಾಡಬೇಕೆಂದು ಹೇಳಿದ್ದರು. ಆಗ ವೆಂಕಟೇಶ್ ಇನಾಮದಾರ ಅವರು 18 ಸಾವಿರ ರೂ ಲಂಚ ನೀಡಬೇಕೆಂದು ಬೇಡಿಕೆ ಇಟ್ಟಿದ್ದು, ಅದರಲ್ಲಿ 10,000 ಮೊದಲು ನೀಡಿದ್ದು, ಪಿರಿಯಾದಿದಾರ ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ ಸತ್ಯಪ್ಪ ಸಂಗಪ್ಪ ಕಾಮ ಇವರು ಮಂಗಳವಾರ ಮಧ್ಯಾಹ್ನ 1.30 ಗಂಟೆಗೆ 8 ಸಾವಿರ ರೂಪಾಯಿ ಲಂಚ ನೀಡುವಾಗ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ಮಾಡಿದ್ದಾರೆ.
ಬೀಳಗಿ ಕಂದಾಯ ಶಿರಸ್ತೆದಾರ ಮಹಾಂತೇಶ್ ಹುರಕಡ್ಲಿ ಎಂಬುವರು ಪಹಣಿ (ಕಾಲಂ11)ಶರ್ತು ಕಡಿಮೆ ಮಾಡಿಕೊಡಲು 10 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಜೈಲರ್ ಸೇರಿ ನಾಲ್ವರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ
