ನಾಗಮಂಗಲ: ತಾಲೂಕಿನ ಪಾಲಗ್ರಹಾರ ಗ್ರಾಮದ ಪುಟ್ಟಸ್ವಾಮಿ ರವರ ಕುಟುಂಬ ತಮ್ಮ ಕೊನೆಯ ಮಗ ಮಂಜುನಾಥ್ ರವರ ಅತ್ತೆ ಮನೆಯಾದ ಮಲ್ಲಸಂದ್ರ ಗ್ರಾಮಕ್ಕೆ ಹಬ್ಬಕ್ಕೆ ತೆರಳುವಾಗ ಕಸಬಾ ಹೋಬಳಿ ಮಾಯಿಗೋನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಿ.ನೇರಲಕೆರೆ ದಾಖಲೆ ಗ್ರಾಮ ನರಸಿಂಹೇಗೌಡನ ಕೊಪ್ಪಲು ಬಳಿ ಬುಧವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಮಹೇಂದ್ರ ಬೊಲೆರೋ ಕೆ.ಎ.34 ಎಂ 8998. ವಾಹನದ ಮುಂಬದಿಯ ಟೈರ್ ಸಿಡಿದಿದ್ದು ಅಪಘಾತ ಸಂಭವಿಸಿದೆ ವಾಹನ ನಿಯಂತ್ರಿಸಲು ಪಕ್ಕದ ಕಲ್ಲಿಗೆ ಗುದಿಯಲಾಗಿದೆ ಮತ್ತೊಮ್ಮೆ ಹಿಂಬದಿಯ ಟೈರ್ ಸಿಡಿದು ವಾಹನ ಚಾಲಕ ಪುಟ್ಟಸ್ವಾಮಿರವರ ಹಿರಿಯ ಪುತ್ರ ಶಾಂತಕುಮಾರ (50 ವರ್ಷ)ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಕುಟುಂಬದ ಗಾಯಾಳುಗಳಾದ ಪುಟ್ಟಸ್ವಾಮಿ, ಮಣಿಯಮ್ಮ, ಮಂಜುನಾಥ್, ಜಗದೀಶ್ ಹಾಗು ಪೂರ್ಣಿಮಾ ದಂಪತಿಯ ಇಬ್ಬರೂ ಮಕ್ಕಳು ಬೆಳ್ಳೂರ್ ಕ್ರಾಸ್ ಬಿ.ಜಿ. ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ