ಚಾಮರಾಜನಗರ: ಗುಡ್ ಪ್ರೈಡೇ ಮತ್ತು ವೀಕೆಂಡ್ ಹಿನ್ನೆಲೆಯಲ್ಲಿ ಊಟಿಗೆ ಸಾವಿರಾರು ಪ್ರವಾಸಿಗರು ತೆರಳುತ್ತಿದ್ದಾರೆ.
ಆದರೆ, ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಬಂಡೀಪುರದಿAದ ಮಧುಮಲೈ ರಸ್ತೆವರೆಗೂ ಬಿಗಿ ಭದ್ರತೆ ಕೈಗೊಂಡಿರುವುದರಿAದ ಕಿಮೀಗಟ್ಟಲೇ ಟ್ರಾಫಿಕ್ ಉಂಟಾಗಿದ್ದು ಪ್ರವಾಸಿಗರು ಸುಸ್ತು ಹೊಡೆದಿದ್ದಾರೆ. ಯಾವುದೇ ಭದ್ರತಾ ಲೋಪವಾಗದಿರಲು ಎಲ್ಲಾ ವಾಹನಗಳನ್ನು ತಪಾಸಣೆ ಮಾಡಿ ಬಿಡುತ್ತಿದ್ದು ರಜೆಯ ಮಜಾ ಅನುಭವಿಸಲು ತೆರಳಿದವರು ಟ್ರಾಫಿಕ್ ಜಂಜಾಟದಲ್ಲಿ ಸಿಲುಕಿದ್ದಾರೆ.
ಇನ್ನು, ಪ್ರಧಾನಿ ಅವರ ವಿಶೇಷ ಭದ್ರತಾ ಪಡೆ ಗುಂಡ್ಲುಪೇಟೆಯಲ್ಲಿ ಈಗಾಗಲೇ ಪರಿಶೀಲನೆ ನಡೆಸಿದ್ದು ಹೆಲಿಪ್ಯಾಡ್, ಸಂಚರಿಸುವ ಮಾರ್ಗ ಎಲ್ಲವನ್ನೂ ತಮ್ಮ ವ್ಯಾಪ್ತಿಗೆ ತೆಗೆದುಕೊಂಡಿದೆ. ಸಫಾರಿ ನಿರ್ಬಂಧದ ಅರಿವಿಲ್ಲದವರೂ ಬಂಡೀಪುರಕ್ಕೆ ಬಂದು ನಿರಾಸೆಯಿಂದ ಕೆಲವರು ಹಿಂತಿರುಗಿದ ಘಟನೆಗಳು ನಡೆದಿದೆ.