ನಂಜನಗೂಡು: ತರಕಾರಿ ತುಂಬಿಕೊಂಡು ಸಾಗುತ್ತಿದ್ದ ಲಾರಿ ಪಲ್ಟಿ, ಪ್ರಾಣಾಪಾಯದಿಂದ ಪಾರಾದ ಚಾಲಕ, ಲಾರಿ ಸಂಪೂರ್ಣ ಜಖಂಯಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಗೋಳೂರು ಗ್ರಾಮದ ಬಳಿ ನಡೆದ್ದಿದೆ.
ಮೈಸೂರಿನಿಂದ ಚಾಮರಾಜನಗರ ಕಡೆಗೆ ಹೋಗುತ್ತಿದ್ದ ಲಾರಿ. ರಸ್ತೆಯಲ್ಲಿ ತಿರುವು ತೆಗೆದುಕೊಳ್ಳುತ್ತಿದ್ದ ವೇಳೆ ಲಾರಿ ಪಲ್ಟಿ. ಗೋಳೂರು ಗ್ರಾಮದ ತಿರುವಿನಲ್ಲಿ ತಿರುವು ತೆಗೆದುಕೊಳ್ಳುವಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ಗೆ ಲಾರಿ ಡಿಕ್ಕಿಯಾಗಿದೆ.
ಲಾರಿಯಲ್ಲಿ ತುಂಬಿದ್ದ ತರಕಾರಿಗಳು ಮಣ್ಣು ಪಾಲು. ತರಕಾರಿ ಆಯ್ದುಕೊಳ್ಳಲು ಮುಗಿಬಿದ್ದ ಸ್ಥಳೀಯರು.
ಸ್ಥಳಕ್ಕೆ ನಂಜನಗೂಡು ಸಂಚಾರಿ ಠಾಣೆ ಪೆÇಲೀಸರು ಭೇಟಿ ನೀಡಿ ಪರಿಶೀಲನೆ.
ತರಕಾರಿ ತುಂಬಿಕೊಂಡು ಸಾಗುತ್ತಿದ್ದ ಲಾರಿ ಪಲ್ಟಿ: ಲಾರಿ ಸಂಪೂರ್ಣ ಜಖಂ
