ಬೆಲೆ ಹೆಚ್ಚಾದ ಕಾರಣ ಕೆಂಪು ಮೆಣಸಿನಕಾಯಿ ಆಧಾರಿತ ಖಾದ್ಯಗಳ ತಯಾರಿಕೆ ಬೆಲೆಯೂ ಹೆಚ್ಚಳ.
ಮಂಗಳೂರು: ಸಾಂಬಾರು ಪದಾರ್ಥ, ಮಾಂಸಾಹಾರ ತಯಾರಿಕೆಗೆ ಒಳ ಮೆಣಸಿನ ಕಾಯಿ ಹೆಚ್ಚಾಗಿ ಬಳಕೆಯಾಗುತ್ತದೆ. ಒಣಮೆಣಸಿನ ಕಾಯಿ ಕೆಂಪುಕೆAಪಾಗಿ ಆಕರ್ಷಕವಾಗಿ ಕಂಡರೂ ತನ್ನೊಡಲಿನ ಅತೀವ ಖಾರದಿಂದ ಬಾಯಿ ಸುಡುತ್ತದೆ. ಆದರೆ, ಇನ್ನು ಮುಂದೆ ಕೇವಲ ಬಾಯನ್ನಷ್ಟೇ ಅಲ್ಲ, ಜೇಬನ್ನೂ ಸುಡಲಿದೆ. ಉತ್ತಮ ಗುಣಮಟ್ಟದ ಸಾಮಾನ್ಯ ಕೆಂಪು ಮೆಣಸಿನ ಕಾಯಿ ಕೆಜಿಗೆ 610 ರೂ. ಇದ್ದರೆ, ಕಡಿಮೆ ಖಾರ ಹಾಗೂ ಹೆಚ್ಚು ಕೆಂಪು ಬಣ್ಣದ ಕಾಶ್ಮೀರ ಮೆಣಸಿನ ಕಾಯಿ ಕೆಜಿಗೆ 750 ರೂ.ಗಳು ಇರುತ್ತವೆ. ಎರಡು ತಿಂಗಳ ಅಂತರದಲ್ಲಿ ಮೆಣಸಿನ ಕಾಯಿ ದರಗಳು ಗಗನಕ್ಕೇರಿವೆ.
ಬ್ಯಾಡಗಿ ಮೆಣಸಿನಕಾಯಿ ರಖಂ ಮಾರುಕಟ್ಟೆಯಲ್ಲಿ ಕನಿಷ್ಟ 350 ರೂ. ಇದ್ದರೆ, ಗರಿಷ್ಠ 540 ರೂ. ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ರಿಟೇಲ್ 550 ರೂ.ನಿಂದ 610 ರೂ.ವರೆಗೆ ಇದೆ ಎನ್ನುತ್ತಾರೆ ಮಂಗಳೂರಿನ ಬಂದರಿನ ಮೆಣಸಿನ ಕಾಯಿ ವ್ಯಾಪಾರಿ ಜಯರಾಮ್. ರಾಜ್ಯದ ವಿವಿಧ ಭಾಗಗಳಿಗೆ, ಬಳ್ಳಾರಿ, ಹುಬ್ಬಳ್ಳಿ, ಧಾರವಾಡದಿಂದ ಒಣ ಮೆಣಸಿನ ಕಾಯಿ ಪೂರೈಕೆಯಾಗುತ್ತಿದೆ. ಹೊರರಾಜ್ಯದಿಂದಲೂ ಮೆಣಸಿನ ಕಾಯಿ ಸರಬರಾಜು ಮಾಡಲಾಗುತ್ತಿದೆ. ಕಳೆದ ವರ್ಷ 350 ರೂ.ನಿಂದ 400 ರೂ. ಇದ್ದರೆ, ಈ ವರ್ಷ ಏಕಾಏಕಿ 600 ರೂ.ಗಳನ್ನು ದಾಟಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ರಖಂ ಉದ್ಯಮಿ ರಮೇಶ, “ಈ ಬಾರಿ ಏಕಾಏಕಿ ಕೆಂಪು ಮೆಣಸಿನಕಾಯಿಗೆ ಬೇಡಿಕೆ ಹೆಚ್ಚಿದೆ. ಕೆಲವು ದೊಡ್ಡ ಕಂಪನಿಗಳು ಖರೀದಿ ಮಾಡುತ್ತಿದ್ದು, ಹುಡಿ ಮಾಡಿ ಮಾರುಕಟ್ಟೆಗೆ, ರಫುö್ತ ಉದ್ಯಮಕ್ಕೆ ಬಳಸುತ್ತಿವೆ. ಒಂದು ವರ್ಷ ಮುಂಗಡವಾಗಿಯೂ ಖರೀದಿ ಮಾಡುತ್ತಾರೆ” ಎಂದು ಹೇಳಿದ್ದಾರೆ.
“ಕಳೆದ ವರ್ಷ, 350 ರೂ.ಗಳಿಗೆ ಮಾರುತ್ತಿದ್ದೆವು. ಈ ಬಾರಿ 610 ರೂ.ಗಳವರೆಗೆ ದರ ಏರಿಕೆಯಾಗಿದೆ. ನಾವು ಬಿಲ್ ನಿಂತಲೇ ಖರೀದಿಸುತ್ತಿರುವ ಕಾರಣ, ಗ್ರಾಹಕರಿಗೆ ಹೆಚ್ಚುವರಿಯಾಗಿ ಶೇ. 5ರಷ್ಟು ಜಿಎಸ್ ಟಿ ಹೊರೆ ಬೀಳುತ್ತಿದೆ” ಎನ್ನುತ್ತಾರೆ ಇಂಡಿಯನ್ ಫುಡ್ ಮಾರ್ಕೆಟಿಂಗ್ ತಫ್ಟೀಲ್. ಮತ್ತೊಬ್ಬ ಮೆಣಸಿನಕಾಯಿ ವ್ಯಾಪಾರಿ ಹುಸೇನ್ ಕಾಪಿಟಳ್ಳ ಅವರು ಹೇಳುವಂತೆ, ಕರಾವಳಿ ಭಾಗದ ಜನರು ಪ್ರತಿದಿನ ಮೀನು ಪದಾರ್ಥ, ಮೀನು ಫ್ರೆöÊ ತಿನ್ನುವವರು, ಮೀನು ಪದಾರ್ಥಕ್ಕೆ ಕೆಂಪು ಮೆಣಸಿನಕಾಯಿ ಬಳಕೆ ಅನಿವಾರ್ಯ, ಈಗ ದರ ಹೆಚ್ಚಳದಿಂದ ಮಾಂಸಾಹಾರ ಸೇವನೆಯೂ ದುಬಾರಿಯಾಗಿದೆ” ಎಂದು ಹೇಳಿದ್ದಾರೆ.
ಮತ್ತೊಬ್ಬ ವ್ಯಾಪಾರಿ ರಮೇಶ್ ಎಂಬುವರು, `’ಕಳೆದ ಕೆಲವು ವರ್ಷ ಕೆಂಪು ಮೆಣಸಿನಕಾಯಿ ದರ 300 ರೂ. ಆಜುಬಾಜಿತ್ತು. ಈ ಬಾರಿ ದರ ದುಪ್ಪಟ್ಟಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಉತ್ತಮ ದರ್ಜೆಯ ಮೆಣಸಿನಕಾಯಿ ದರ ಕೆಜಿಗೆ 600 ರೂ. ದಾಟಿದೆ” ಎಂದು ಹೇಳಿದ್ದಾರೆ.