ಮೈಸೂರು:-ನಾಡ ಹಬ್ಬ ದಸರಾ ಮಹೋತ್ಸವ 2024ರಲ್ಲಿ ಪಾಲ್ಗೊಳ್ಳುತ್ತಿರುವ ದಸರಾ ಗಜಪಡೆಗೆ ಇಂದು ತೂಕ ಪರಿಶೀಲನೆ ನಡೆಸಲಾಯಿತು. ಆ. 21ರಂದು ಕಾಡಿನಿಂದ ನಾಡಿಗೆ ಆಗಮಿಸಿರುವ ದಸರಾ ಗಜಪಡೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳಿಗೆ ತೂಕ ನಡೆಸಲಾಯಿತು.ನಗರದ ಧನ್ವಂತ್ರಿ ರಸ್ತೆಯಲ್ಲಿರುವ ಶ್ರೀನಿವಾಸ ವೇ ಬ್ರಿಡ್ಜ್ನಲ್ಲಿ ಆನೆಗಳ ತೂಕ ಪರೀಕ್ಷೆ ನಡೆಯಿತು.ತೂಕ ಪರಿಶೀಲನೆ ನಂತರ ಆನೆಗಳಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ಪದಾರ್ಥ ನೀಡಲಾಗುತ್ತದೆ. ಬಳಿಕ ಜಂಬೂ ಸವಾರಿ ಮೆರವಣಿಗೆಗಾಗಿ ತಾಲೀಮು ನಡೆಯುತ್ತದೆ. ಬೆಳಗ್ಗೆ ಸಂಜೆ ಎರಡು ಸಮಯ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಯಲಿದೆ.ನಗರದ ಸದ್ದುಗದ್ದಲಕ್ಕೆ ವಿಚಲಿತವಾಗದಂತೆ ಆನೆಗಳಿಗೆ ತರಬೇತಿ ನೀಡುವುದೇ ತಾಲೀಮಿನ ಉದ್ದೇಶ ಆಗಿದೆ.ಮತ್ತಿಗೋಡು ಕ್ಯಾಂಪ್ ನಲ್ಲಿ ಮಹೇಂದ್ರ, ಭೀಮ, ಏಕಲವ್ಯ ಆನೆಯನ್ನು ಪರಿಶೀಲಿಸುತ್ತಿರುವ ಡಿಸಿಎಫ್ ಶರಣಬಸಪ್ಪಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳ ತೂಕದ ವಿವರ ನೀಡಿದರು.ಅಭಿಮನ್ಯು : 5560 ಕೆಜಿ, ಭೀಮ : 4945 ಕೆಜಿ, ಏಕಲವ್ಯ : 4730 ಕೆಜಿ, ಕಂಜನ್ : 4515 ಕೆಜಿ, ಧನಂಜಯ : 5155 ಕೆಜಿ, ಲಕ್ಷ್ಮಿ : 2480 ಕೆಜಿ, ವರಲಕ್ಷ್ಮಿ : 3495 ಕೆಜಿ, ರೋಹಿತ : 3625 ಕೆಜಿ, ಗೋಪಿ : 4970 ಕೆಜಿ.ತೂಕದಲ್ಲಿ ಕ್ಯಾಪ್ಟನ್ ಅಭಿಮನ್ಯು ನಂಬರ್ 1 ಆಗಿದ್ದು ಉಳಿದ ಆನೆಗಳಿಗಿಂತ ಹೆಚ್ಚಿದ್ದಾನೆ.ಅರಮನೆಗೆ ಬಂದ ಗಜಪಡೆಗೆ ತೂಕ ಪರೀಕ್ಷೆ ಮಾಡಲಾಗಿದೆ. ಆನೆಗಳ ಆರೋಗ್ಯದ ಬಗ್ಗೆ ಗಮನ ಹರಿಸಲಾಗಿದೆ. ಆನೆಗಳ ತೂಕದ ಮೇಲೆ ಪೌಷ್ಟಿಕ ಆಹಾರ ನೀಡಲಾಗುತ್ತೆ. ದಸರಾಗೆ ಮುನ್ನ ಮತ್ತೆ ಆನೆಗಳ ತೂಕ ಪರೀಕ್ಷೆ ಮಾಡುತ್ತೇವೆ. ಎಲ್ಲಾ ಆನೆಗಳ ಆರೋಗ್ಯ ಚೆನ್ನಾಗಿದೆ. ನಾಳೆಯಿಂದಲೇ ಗಜಪಡೆಗಳ ತಾಲೀಮು ಆರಂಭವಾಗಲಿದೆ ಎಂದು ಮೈಸೂರಿನಲ್ಲಿ ಡಿಸಿಎಫ್ ಡಾ. ಪ್ರಭುಗೌಡ ಅವರು ತಿಳಿಸಿದರು.