ಮೈಸೂರು:ದಸರಾ ಉತ್ಸವಗಳಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ಜರುಗುವ ಸಂಗೀತ ಕಾರ್ಯಕ್ರಮಗಳಲ್ಲಿ ಕರೋಕೆಯನ್ನು ನಿಷೇಧಿಸಿ ಎಂದು ಒತ್ತಾಯಿಸಿ ಮೈಸೂರು ಆರ್ಟಿಸ್ಟ್ ಅಸೋಸಿಯೇಷನ್ ಹಾಗೂ ಮೈಸೂರಿನ ಎಲ್ಲಾ ಕಲಾ ಬಳಗಗಳ ಒಕ್ಕೂಟ ಪ್ರತಿಭಟಿಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಪ್ರತಿಭಟನೆ ನಡೆಸಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗುರುದತ್ ಮಾತನಾಡಿ,
ಮೈಸೂರು ದಸರಾ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ್ದು, ಈ ದಸರಾ ಸಂದರ್ಭದಲ್ಲಿ ಅನೇಕ ವೇದಿಕೆಗಳಲ್ಲಿ ಕರೋಕೆಯನ್ನು ಬಳಸುತ್ತಿದ್ದಾರೆ. ಯುವದಸರಾ, ಯುವಸಂಭ್ರಮ, ಅರಮನೆ ವೇದಿಕೆ ಮತ್ತು ಇನ್ನಿತರ ಮುಖ್ಯ ವೇದಿಕೆಗಳಲ್ಲಿಯೇ ಕರೋಕೆಯ ಬಳಕೆ ಖಂಡನೀಯವಾಗಿದೆ. ಈ ಕರೋಕೆ ಬಳಕೆಯಿಂದ ಮೈಸೂರಿನ ಪಾರಂಪರಿಕ ಇತಿಹಾಸವನ್ನು ಹಾಳು ಮಾಡುತ್ತಿರುವಂತಾಗಿದೆ. ನೈಜ ಕಲಾವಿದರುಗಳಿಗೆ ಅನ್ಯಾಯ ಮಾಡಿದಂತಾಗುತ್ತಿದೆ. ಮೈಸೂರಿನ ಪ್ರತಿಭೆಗಳಿಗೆ ಹಾಗೂ ಕಲಾವಿದರಿಗೆ ಅವಕಾಶ ನೀಡದೆ ಇರುವುದು ಖಂಡನೀಯವಾಗಿದೆ ಎಂದರು.
ಒಕ್ಕೂಟದ ಅಧ್ಯಕ್ಷ ರಘುನಾಥ್ ಮಾತನಾಡಿ, ನೂರಾರು ವರ್ಷಗಳಿಂದ ನಡೆಯುತ್ತಾ ಬಂದಿರುವ ದಸರಾ ಕಾರ್ಯಕ್ರಮಗಳಲ್ಲಿ ಮೈಸೂರಿನ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡದೆ ಇರುವುದು ಮೈಸೂರಿನ ಕಲಾವಿದರಿಗೆ ಮಾಡುತ್ತಿರುವ ಅತಿ ದೊಡ್ಡ ಅನ್ಯಾಯವಾಗಿದೆ ಎಂದರು.
ಸ್ಥಳದಲ್ಲಿ ಕಲಾವಿದರಾದ
ರಘುನಾಥ್, ಗುರುದತ್, ಷಣ್ಮುಗ ಸಜ್ಜಾ, ರೋಶನ್ ಸೂರ್ಯ, ರಾಜೇಶ್ ಪಡಿಯಾರ್, ರವಿಕಿರಣ್, ಬಾಲಣ್ಣ, ಸೌಭಾಗ್ಯ ಪ್ರಭು, ವಿನ್ಸೆಂಟ್, ಪ್ರದೀಪ್ ಗಾಂಧಿನಗರ, ಪ್ರದೀಲ್ ಕಿಗ್ಗಾಲ್, ರಾಮಚಂದ್ರು, ಸಂತೋಷ್, ಜಗದೀಶ್, ನಾಗಲಿಂಗೇಶ್ , ಪೃಥ್ವಿ, ರವಿಕುಮಾರ್ ಸಾಕ್ಸೊಪೋನ, ಬಾಬು
ಮತ್ತಿತರರು ಹಾಜರಿದ್ದರು
ದಸರೆಯಲ್ಲಿ ಕರೋಕೆ ನಿಷೇಧಿಸುವಂತೆ ಆಗ್ರಹಿಸಿ ಪ್ರತಿಭಟನೆ
