ಮೈಸೂರು: ನಾಡಹಬ್ಬ ದಸರೆಯ ಮುನ್ನುಡಿಯಾಗಿ ಗಜಪಯಣ ಪ್ರಾರಂಭದಲ್ಲೇ ಸರ್ಕಾರದ ಕಾರ್ಯಕ್ರಮದಿಂದ ಸ್ವತಃ ಕಾಂಗ್ರೆಸ್ ಶಾಸಕರೇ ದೂರ ಉಳಿಯುವ ಮೂಲಕ ಸಿಎಂ ತವರಿನಲ್ಲಿ ರಾಜಕೀಯ ವಿಘ್ನ ಉಂಟಾಗಿದೆ.
ಹೌದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ನಡೆದ ಮೊದಲ ದಸರಾ ಸಭೆಯಲ್ಲಿ ಒಗ್ಗಟ್ಟಿನ ಪ್ರದರ್ಶನ ಮಾಡಲಾಗಿತ್ತು. ಆದರೆ, ಗಜಪಯಣ ಚಾಲನೆಯೂ ದಸರೆಯ ಮುನ್ನುಡಿಯ ಭಾಗವಾಗಿದೆ. ಸರ್ಕಾರದ ಭಾಗವಾದ ಕಾಂಗ್ರೆಸ್ ಶಾಸಕರೇ ಇಂತಹ ಕಾರ್ಯಕ್ರಮಕ್ಕೆ ಸ್ವತಃ ಗೈರಾಗಿದ್ದಾರೆ. ಅದರಲ್ಲೂ ಕಾಂಗ್ರೆಸ್ ಕಾರ್ಯಾಧ್ಯಕ್ಷರೂ ಆದ ಹಿರಿಯ ಶಾಸಕ ತನ್ವೀರ್ ಸೇಠ್ ಹಾಗೂ ಚಾಮರಾಜ ವಿಧಾನಸಭಾ ಕ್ಷೇತ್ರದ ಕೈ ಶಾಸಕ ಹರೀಶ್ ಗೌಡ ಗೈರು ಅಚ್ಚರಿ ತಂದಿದೆ. ಇನ್ನೂ ವಾಡಿಕೆಯಂತೆ ಬಿಜೆಪಿ ಸಂಸದ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರು, ಬಿಜೆಪಿ ಶಾಸಕ ಶ್ರೀವತ್ಸ ಗೈರಾಗಿದ್ದರು. ಇನ್ನೂ ಸಂಪೂರ್ಣ ಕಾರ್ಯಕ್ರಮದ ಅಧ್ಯಕ್ಷೆವಹಿಸಿದ್ದ ಜೆಡಿಎಸ್ ಶಾಸಕ ಜಿ.ಟಿ.ಹರೀಶ್ ಗೌಡ ಹಾಗೂ ವಿಧಾನಪರಿಷತ್ ಸದಸ್ಯ ವಿವೇಕಾನಂದ ದಸರಾ ಕಾರ್ಯಕ್ರಮದಲ್ಲಿ ರಾಜಕೀಯ ಹೊರತಾಗಿ ಭಾಗವಹಿಸಿದ್ದರು. ಆದರೆ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ರೂ ಆದ ಶಾಸಕ ಜಿ.ಟಿ.ದೇವೇಗೌಡರ ಗೈರಿನಲ್ಲಿ ಕಾರ್ಯಕ್ರಮ ನಡೆಯಿತು.
ದಸರೆ ಗಜಪಯಣದಲ್ಲೇ ರಾಜಕೀಯ ವಿಘ್ನ: ಕೈ ಶಾಸಕರೂ ಗೈರು
