ಮೇಷ ರಾಶಿ: ಇಂದು ಹೆಚ್ಚುತ್ತಿರುವ ಆದಾಯದಿಂದ ನಿಮ್ಮ ಆರ್ಥಿಕ ಸಮಸ್ಯೆ ಸರಿಯಾಗುವುದು. ನಿಮಗೇ ಗೊತ್ತಿಲ್ಲದಂತೆ ಶತ್ರುಗಳ ಅನ್ಯಾಯಕ್ಕೆ ಸಾಕ್ಷಿಯು ಸಿಗುವುದು. ನಿಮ್ಮ ಮಾನಸಿಕ ಬಲವು ಅಧಿಕವಾಗುವುದು. ಅನುಭವಯುಕ್ತವಾದ ಸಲಹೆಗಳು ನಿಮಗೆ ಪ್ರಯೋಜನಕ್ಕೆ ಬರಲಿವೆ. ನಿಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡಲಿ ಸಂದರ್ಭವು ಬರಲಿದ್ದು ನೀವು ಮಾತನಾಡುವಾಗ ಉದ್ವೇಗಕ್ಕೆ ಒಳಗಾಗದೇ ಇರಿ. ಸಂಗಾತಿಯ ಕೋಪಕ್ಕೆ ಕಾರಣವನ್ನು ಸಮಾಧಾನ ಮಾಡಲು ಪ್ರಯತ್ನಿಸಿ.
ವೃಷಭ ರಾಶಿ: ಇಂದು ನಿಮ್ಮ ವೈಯಕ್ತಿಕ ಕೆಲಸಗಳಿಗೆ ಅಡೆತಡೆಗಳು ಬರುವುದು. ಸ್ವಲ್ಪ ಆಲೋಚಿಸಿದರೆ ಸಮಸ್ಯೆಗಳಿಗೆ ಉತ್ತರ ಸಿಗುವುದು. ಭೂಮಿಯ ವ್ಯವಹಾರದಲ್ಲಿ ನಿಮಗೆ ಜಯ ದೊರೆಯುವ ಸಾಧ್ಯತೆ ಇದೆ. ಈ ಬಗ್ಗೆ ಅನವಶ್ಯಕ ಗೊಂದಲಕ್ಕೆ ಒಳಗಾಗಬಹುದು. ಯಾರದೋ ಮಾತನ್ನು ಕೇಳಿ ಹೂಡಿಕೆ ಮಾಡುವುದು ಬೇಡ. ಬೇಕಿದ್ದರೆ ಭೂಮಿಯ ಮೇಲೆ ಹೂಡಿಕೆ ಮಾಡುವ ಬಗ್ಗೆ ಯೋಚಿಸಿ. ತಾಯಿಯೊಂದಿಗೆ ವಿವಾದವಾಗುವ ಸಾಧ್ಯತೆ ಇದೆ. ಆಸೆ ಆಮಿಷಗಳಿಗೆ ಬಲಿಯಾಗದೇ ನಿಮ್ಮ ಗುರಿಯತ್ತ ಗಮನ ನೀಡಿರಿ.
ಮಿಥುನ ರಾಶಿ: ನಿಮ್ಮಲ್ಲಿ ಎಷ್ಟೇ ಆತ್ಮವಿಶ್ವಾಸವಿದ್ದರೂ ಕೆಲಸಗಳ ಒತ್ತಡದಲ್ಲಿ ಗೊಂದಲ ಒಳಗಾಗುವಿರಿ. ಇದರಿಂದ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಅಡ್ಡ ಪರಿಣಾಮವು ಆಗಬಹುದು. ಮನೆ ಸದಸ್ಯರ ಮೇಲೆ ವಿನಾಕಾರಣ ಸಿಟ್ಟಾಗುವಿರಿ. ಇದು ನಿಮ್ಮ ಅಸಹಾಯಕತೆಯನ್ನು ತೋ?ರಿಸುವುದು. ಮಕ್ಕಳ ವಿದ್ಯಾಭ್ಯಾಸದಿಂದ ನಿಮಗೆ ನೆಮ್ಮದಿ ದೊರೆಯುವುದು. ಪ್ರಯಾಣ ಕಾಲದಲ್ಲಿ ಆದಷ್ಟು ಎಚ್ಚರಿಕೆ ಇರಲಿ. ಈ ದಿನ ಸಣ್ಣ ಓಡಾಟಗಳನ್ನು ಮಾಡುವಿರಿ. ವಿದೇಶಕ್ಕೆ ಹೋಗುವ ಕನಸು ಕೂಡ ನಿಜವಾಗಬಹುದು. ಯಾವುದೇ ರೀತಿಯ ವಿವಾದ ನಿಮ್ಮನ್ನು ತಪ್ಪಿಸಿಕೊಳ್ಳಿ.
ಕಟಕ ರಾಶಿ: ಇಂದು ಸರ್ಕಾರಿ ನೌಕರರಿಗೆ ಹೆಚ್ಚಿನ ಲಾಭವಿದೆ. ಹಣಕಾಸಿನ ವ್ಯವಹಾರದಲ್ಲಿ ಲೆಕ್ಕಪತ್ರಗಳನ್ನು ಸರಿಯಾಗಿಡುವುದು ಉತ್ತಮ. ಅಧಿಕಾರಿಗಳಿಂದ ಪರಿಶೀಲನೆ ಆಗಬಹುದು. ಅಪರಿಚಿತ ವ್ಯಕ್ತಿಗಳ ಜೊತೆ ಯಾವ ವ್ಯವಹಾರವೂ ಬೇಡ. ಧೈರ್ಯದಿಂದ ಹೊಸ ಯೋಜನೆಯೊಂಡನ್ನು ಆರಂಭಿಸುವಿರಿ. ನಿಮ್ಮ ತಿಳುವಳಿಕೆಗಳಿಂದ ಬರುವ ತೊಂದರೆಯನ್ನು ಪರಿಹರಿಸಿಕೊಳ್ಳುವಿರಿ. ದಿನದ ಕೊನೆಯಲ್ಲಿ ನಿಮ್ಮ ಆರೋಗ್ಯವು ಹದ ತಪ್ಪಬಹುದು. ಯಾವುದೇ ರೀತಿಯಲ್ಲೂಅಪಘಾತವು ಆಗಬಹುದು. ವಾಹನವನ್ನು ಬಹಳ ಎಚ್ಚರಿಕೆಯಿಂದ ಚಲಾಯಿಸಿ.
ಸಿಂಹ ರಾಶಿ: ಅಪಮಾನದಿಂದಾಗಿ ಆದ ದುಃಖವನ್ನು ಆಪ್ತರ ಬಳಿ ಮಾತ್ರ ಹಂಚಿಕೊಳ್ಳಿ. ಶ್ರಮಪಟ್ಟು ಆರಂಭಿಸಿದ ಕಾರ್ಯಗಳು ವಿರೋಧಿಗಳ ಪಿತೂರಿಯಿಂದ ಅರ್ಧಕ್ಕೆ ನಿಲ್ಲಬಹುದು. ನಿಮ್ಮ ದೌರ್ಬಲ್ಯವು ಶತ್ರುಗಳಿಗೆ ಅಸ್ತ್ರವಾಗಬಹುದು. ಯಾವಾಗಲೂ ಯೋಚಿಸದ ಸಂಬಂಧಗಳು ನಿಮ್ಮ ಹತ್ತಿರ ಬರಬಹುದು. ಜೀವನ ಸಂಗಾತಿಯ ಜೊತೆ ಯಾವುದಾದರೂ ವಿಚಾರಕ್ಕೆ ಕಲಹವಾಗಬಹುದು. ನೂತನ ಕಾರ್ಯದ ಆರಂಭಕ್ಕೆ ಮೊದಲು ಯಾರಾದರೂ ಹಿರಿಯರ ಸಲಹೆಯನ್ನು ಪಡೆಯಿರಿ.
ಕನ್ಯಾ ರಾಶಿ: ನಿಮ್ಮ ಜಾಣ್ಮೆಯಿಂದ ಇಂದಿನ ಆದಾಯವನ್ನು ಹೆಚ್ಚುಮಾಡಿಕೊಳ್ಳುವಿರಿ. ನಿಮ್ಮ ಅಸಹಾಯಕತೆಯನ್ನು ಮನೆಯವರ ಮೇಲೆ ಹಾಕುವ ಸಾಧ್ಯತೆ ಇದೆ. ಬಂಧುಗಳ ಜೊತೆ ನಿಮ್ಮ ಸಂಬಂಧವು ಗಟ್ಟಿಯಾಗುವುದು. ಆದಾಯಕ್ಕೆ ತಕ್ಕಂತೆ ಜೀವನ ಇಟ್ಟುಕೊಳ್ಳಿ. ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲು ಆಸಕ್ತಿ ಇರುವುದು. ಮನೆಯ ಅಲಂಕಾರದ ವಸ್ತುಗಳ ಮೇಲೆ ಹಣವನ್ನು ಖರ್ಚು ಮಾಡಬಹುದು. ನಿಮ್ಮ ಹೊಸ ವಾಹನ ಖರೀದಿಯ ಕನಸು ನನಸಾಗಬಹುದು.
ತುಲಾ ರಾಶಿ: ಕುಟುಂಬದಲ್ಲಿ ನಡೆಯಬಹುದಾದ ಅನಿರೀಕ್ಷಿತ ಘಟನೆಗೆ ನಿಮ್ಮಿಂದ ಹೆಚ್ಚಿನ ಹಣ ಖರ್ಚು ಮಾಡುವ ಸನ್ನಿವೇಶವು ಬರಬಹುದು. ಹೂಡಿಕೆಯಲ್ಲಿ ಉತ್ಸಾಹವಿರುವ ನೀವು ವಿವೇಚನೆಯಿಂದ ಹೂಡಿಕೆ ಮಾಡಿ. ಪ್ರತಿ ಕೆಲಸಕ್ಕೂ ಬೇರೆಯವರನ್ನು ಅವಲಂಬಿಸಿ ಆರ್ಥಿಕ ನಷ್ಟವನ್ನು ಎದುರಿಸಬೇಕಾಗುವುದು. ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಯಾರಿಗೂ ಬಿಡಬೇಡಿ. ನೀವು ಮುಖ್ಯವಾದ ಅವಕಾಶಗಳಿಂದ ವಂಚಿತರಾಗುವಿರಿ. ವ್ಯವಹಾರಕ್ಕೆ ಸಂಬಂಧಿಸಿದ ಬಹಳಷ್ಟು ಹೊಸ ಅವಕಾಶಗಳು ಬರುತ್ತವೆ.
ವೃಶ್ಚಿಕ ರಾಶಿ: ಇಂದಿನ ನಿಮ್ಮ ಕಾರ್ಯದಲ್ಲಿ ತಾಳ್ಮೆ ಅಗತ್ಯವಾಗಿ ಬೇಕಾಗುವುದು. ಶತ್ರುವನ್ನು ಉಪಾಯದಿಂದ ಜಯಿಸಿ. ಹೆಚ್ಚಲಿರುವ ಆದಾಯದಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಆಗುವುದು. ವಿದ್ಯಾರ್ಥಿಗಳು ತಮಗೆ ಬರುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವರು. ಅಮೂಲ್ಯ ವಸ್ತುಗಳನ್ನು ಕಾಣೆಯಾಗದಂತೆ ನೋಡಿಕೊಳ್ಳಿ. ನಿಮ್ಮ ಜೀವನದಲ್ಲಿ ಹೊಸ ವ್ಯಕ್ತಿಯು ಬರುವುದರಿಂದ ಸಂತೋಷವಾಗಿ ಇರುವಿರಿ. ಆರೋಗ್ಯವು ಚೆನ್ನಾಗಿ ಇರಲಿದ್ದು ಆಲಸ್ಯವನ್ನು ಬಿಡಬೇಕಾದೀತು. ಈ ದಿನ ತಂದೆ ತಾಯಿಯ ಬೆಂಬಲವು ಪೂರ್ಣವಾಗಿ ಇರುವುದು. ಅವರಿಂದ ಆರ್ಥಿಕ ಸಹಾಯವೂ ದೊರೆಯಬಹುದು.
ಧನು ರಾಶಿ: ಅನವಶ್ಯಕ ಸಾಲಗಳಿಂದ ದೂರವಿರಿ. ಉದ್ಯೋಗಸ್ಥ ದಂಪತಿಗೆ ಒಂದೇ ಕಡೆ ವರ್ಗಾವಣೆಯಾಗಬಹುದು. ಗೃಹ ನಿರ್ಮಾಣದ ಕಾರ್ಯ ಮುಂದೂಡುವುದು ಉತ್ತಮ. ಹಳೆ ಮಿತ್ರರನ್ನು ಭೇಟಿಯಾಗುವಿರಿ. ಸರ್ಕಾರಿ ನೌಕರರಿಗೆ ಹೆಚ್ಚಿನ ಗಳಿಕೆಯಾಗಲಿದೆ. ನಿಮ್ಮ ಮನೆಯಲ್ಲಿ ಮಂಗಳ ಕಾರ್ಯಕ್ಕೆ ತಯಾರಿ ಆರಂಭವಾಗುವುದು. ಹಳೆ ರೋಗಗಳು ಮರುಕಳಿಸದಂತೆ ಎಚ್ಚರ ವಹಿಸಿ. ನಿಮ್ಮ ಆಸೆಯನ್ನು ಈಡೇರಿಸಲು ಬಹಳಷ್ಟು ಪ್ರಯತ್ನವನ್ನು ಮಾಡಬೇಕಾಗುತ್ತದೆ. ವೃತ್ತಿ ಜೀವನದ ಬಗ್ಗೆ ಮಾತನಾಡಿದರೆ, ಈ ದಿನ ನಿಮಗೆ ಉತ್ತಮ ಅವಕಾಶಗಳು ಸಿಗುತ್ತವೆ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸಾಧ್ಯವಾಗುತ್ತದೆ.
ಮಕರ ರಾಶಿ: ಆಸ್ತಿ ಹಂಚಿಕೆ ವಿಚಾರದಲ್ಲಿ ಬುದ್ಧಿವಂತಿಕೆಯಿಂದ ವರ್ತಿಸುವಿರಿ. ಹೆಚ್ಚಲಿರುವ ಆದಾಯದಿಂದ ದುರಭ್ಯಾಸವನ್ನು ಬೆಳೆಸಿಕೊಳ್ಳುವಿರಿ. ಶಿಕ್ಷಕರಿಗೆ ವೇತನದಲ್ಲಿ ಹೆಚ್ಚಳವಾಗಲಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಅವಿವಾಹಿತರಿಗೆ ಕಂಕಣಬಲ ಕೂಡಿಬರುವುದು. ನಿಮ್ಮ ಮಕ್ಕಳ ನಡವಳಿಕೆಯಿಂದ ಬೇಸರ ಆಗುವ ಸಾಧ್ಯತೆ ಇದೆ. ತಾಳ್ಮೆಯಿಂದ ವರ್ತಿಸಿ. ನೀವು ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ, ಆದರೆ ಪ್ರವಾಸದ ಸಮಯದಲ್ಲಿ ಜಾಗರೂಕರಾಗಿರಬೇಕು. ಏಕೆಂದರೆ ನಿಮ್ಮೊಂದಿಗೆ ಅಪಘಾತ ಸಂಭವಿಸಭುದು. ತಂದೆಯ ಆರೋಗ್ಯವು ಹದಗೆಡಬಹುದು. ಆದ್ದರಿಂದ ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಬೇಕು. ಸಹದ್ಯೋಗಿ ಅಥವಾ ಸಂಬಂಧಿಕರ ಬೆಂಬಲವನ್ನು ನೀವು ಪಡೆಯಬಹುದು. ಈ ದಿನ ನೀವು ಆಕಸ್ಮಿಕವಾಗಿ ಹಣವನ್ನು ಕೂಡ ಪಡೆಯಬಹುದು.
ಕುಂಭ ರಾಶಿ: ನಿಮ್ಮ ಬದುಕಿನಲ್ಲಿ ಬದಲಾವಣೆ ಅನಿವಾರ್ಯವಾಗಿ ಮಾಡಿಕೊಳ್ಳುವಿರಿ. ಹಣಕಾಸಿನ ಪರಿಸ್ಥಿತಿ ಉತ್ತಮಗೊಳ್ಳುವುದು. ಸಹೋದ್ಯೋಗಿಗಳಿಗೆ ಸಹಕರಿಸುವಿರಿ. ಮೋಜಿನ ಸುತ್ತಾಟವು ಹೆಚ್ಚಾಗಬಹುದು. ಕಾನೂನು ಸಲಹೆಗಾರರಿಗೆ ಆದಾಯ ಹೆಚ್ಚಲಿದೆ. ಆಹಾರ ಸೇವನೆಯಿಂದ ಅನಾರೋಗ್ಯ ಕಾಡುವ ಸಾಧ್ಯತೆ ಇದೆ. ಬಂಧುಗಳ ಜೊತೆ ವಾಗ್ವಾದ ಬೇಡ ಇಂದು. ಇಂದು ಗಳಿಕೆಗಾಗಿ ಯಾವುದೇ ರೀತಿಯ ಹೂಡಿಕೆ ಮಾಡಬೇಡಿ, ಇಲ್ಲದಿದ್ದರೆ ಆರ್ಥಿಕ ಸವಾಲುಗಳನ್ನು ಎದುರಿಸಬೇಕಾಗಬಹುದು. ವೈವಾಹಿಕ ಜೀವನವು ಸುಖ ಶಾಂತಿಯಿಂದ ತುಂಬಿರುತ್ತದೆ ಮತ್ತು ಯಾವುದೇ ಪ್ರಕಾರದ ದೊಡ್ಡ ತೊಂದರೆಯು ಬಾಧಿಸದು.
ಮೀನ ರಾಶಿ: ಖಾಸಗಿ ಕಂಪನಿ ಉದ್ಯೋಗಿಗಳ ವೇತನವು ಹೆಚ್ಚಾಗುವುದು. ನಿಮ್ಮ ವರ್ಗಾವಣೆಯು ಅನಿವಾರ್ಯವಾಗಬಹುದು. ಮಕ್ಕಳ ಆರೋಗ್ಯಕ್ಕೆ ಹೆಚ್ಚಿನ ಖರ್ಚು ಆಗುವುದು. ವ್ಯವಹಾರದಲ್ಲಿ ಹೆಚ್ಚಿನ ಲಾಭ ಬರುವುದು. ಪ್ರಸಾರ ಮಾಧ್ಯಮದವರಿಗೆ ಅನವರತ ಕಾರ್ಯಗಳು ಇರುವುದು. ಸಾಹಿತಿಗಳಿಗೆ ಸನ್ಮಾನ ಸಿಗುವುದು. ಅವಿವಾಹಿತರಿಗೆ ಕಂಕಣಬಲ ಪ್ರಾಪ್ತವಾಗಬಹುದು. ಬಂಡವಾಳದಿಂದ ಹೆಚ್ಚಿನ ಲಾಭವಿದೆ. ವಿವಾದ ಅಥವಾ ಜಗಳವಾಗುವ ಸಾಧ್ಯತೆ ಇದೆ. ಆದರೆ ಜಾಗರೂಕತೆ ಮತ್ತು ಬುದ್ಧಿವಂತಿಕೆಯಿಂದ ನಡೆದರೆ ಸಮಸ್ಯೆಗಳನ್ನು ನಿವಾರಿಸಬಹುದು. ವಿದ್ಯಾರ್ಥಿಗಳಿಗೆ ಈ ದಿನ ಉತ್ತಮವಾಗಲಿದೆ, ನಿರ್ಧರಿಸಿದ ಗುರಿಯನ್ನು ಪಡೆಯುವಿರಿ.