ಮೇಷ ರಾಶಿ: ಅನ್ಯ ಮಾರ್ಗದಿಂದ ನಿಮ್ಮ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ಸರ್ಕಾರದ ಕೆಲಸವನ್ನು ಒತ್ತಡದಿಂದ ಮಾಡಿಸಿಕೊಳ್ಳುವಿರಿ. ಸಾಲವಾಗಿ ಯಾರಿಗೂ ಹಣವನ್ನು ಕೊಡುವುದು ಬೇಡ. ದುರಭ್ಯಾಸವನ್ನು ರೂಢಿಸಿಕೊಳ್ಳಲಿದ್ದೀರಿ. ವಿವಾಹಕ್ಕೆ ಬೇಕಾದ ತಯಾರಿಯಲ್ಲಿ ನೀವಿರುವಿರಿ. ಇಂದು ಮಾಡಬೇಕು ಎಂದುಕೊಂಡ ಕೆಲಸವನ್ನು ಮುಂದೂಡುವಿರಿ. ಮಾತು ಉದ್ವೇಗದಿಂದ ಇರಲಿದೆ. ಬಂಧುಗಳ ಭೇಟಿಯು ಸಂತೋಷವನ್ನು ಕೊಡುವುದು. ಸ್ನೇಹವನ್ನು ಹೆಚ್ಚು ಕಾಲ ಉಳಿಸಿಕೊಳ್ಳಲಾರಿರಿ. ಆರೋಗ್ಯವು ಮಧ್ಯಮ ಸ್ಥಿತಿಯಲ್ಲಿ ಇರಲಿದೆ. ಭಾವನಾತ್ಮಕ ವಿಚಾರಗಳಿಗೆ ಕರಗುವಿರಿ.
ವೃಷಭ ರಾಶಿ: ನಿಮ್ಮರೇ ಆದರೂ ನಿಮ್ಮ ಬಗ್ಗೆ ಸಲ್ಲದ ಮಾತುಗಳನ್ನು ಆಡುವರು. ಮನೆಯ ವಾತಾವರಣವು ಸಂತೋಷವನ್ನು ಕೊಡುವುದು. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳಬೇಕಾಗುವುದು. ಇದು ಅಹಂಕಾರದಂತೆ ತೋರುವುದು. ಹಿತಶತ್ರುಗಳು ನಿಮ್ಮ ಬಗ್ಗೆ ಸಲ್ಲದ ಮಾತುಗಳನ್ನು ಆಡಬಹುದು. ನೂತನ ವಸ್ತ್ರಗಳನ್ನು ಖರೀದಿಸುವಿರಿ. ಮನಸ್ಸು ಬಹಳ ಚಂಚಲವಾಗುವುದು. ಕೇಳಿದವರಿಗೆ ಸಹಾಯವನ್ನು ಮಾಡುವಿರಿ. ಸಂಶೋಧನೆಯಲ್ಲಿ ನಿಮಗೆ ಆಸಕ್ತಿ ಬರಬಹುದು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ಇರಲಿದೆ. ಅರ್ಧವಾದ ಕಾರ್ಯವನ್ನು ಮುಂದುವರಿಸುವಿರಿ. ಅನಾರೋಗ್ಯದ ಕಾರಣ ವಿಶ್ರಾಂತಿಯ ಅವಶ್ಯಕತೆ ಇರಲಿದೆ.
ಮಿಥುನ ರಾಶಿ: ದಾಂಪತ್ಯದಲ್ಲಿ ಪ್ರೀತಿಯು ಕಡಿಮೆ ಆಗಬಹುದು. ಹೊಸ ಉದ್ಯೋಗದ ಸ್ಥಳವು ನಿಮಗೆ ಉತ್ಸಾಹವನ್ನು ಕೊಡುವುದು. ಹೊಸ ಸ್ನೇಹ ಬಳಗವನ್ನೂ ಕಟ್ಟಿಕೊಳ್ಳುವಿರಿ. ಸಂಗಾತಿಯಿಂದ ಉಡುಗೊರೆಯು ನಿಮಗೆ ಸಿಗಲಿದೆ. ಸ್ವಭಾವದಲ್ಲಿ ಬದಲಾವಣೆಯಾಗಲಿದೆ. ನಿಮ್ಮ ಮಾತಿಗೆ ಬೆಲೆಯು ಕಡಿಮೆ ಆಗಬಹುದು. ಯಾರನ್ನೂ ಅಪಹಾಸ್ಯ ಮಾಡುವುದು ಬೇಡ. ದೇವರ ಮೇಲೆ ಶ್ರದ್ಧೆಯು ಅಧಿಕವಾಗುವುದು. ಮಾತುಗಾರರಾಗಿದ್ದರೆ ಉತ್ತಮ ಅವಕಾಶಗಳು ಸಿಗಲಿವೆ. ಕೋಪವನ್ನು ತೋರಿಸುವುದು ಬೇಡ. ಮಾತಿನಲ್ಲಿ ಅಧಿಕಾರದ ಗತ್ತು ಕಾಣಿಸುವುದು.
ಕಟಕ ರಾಶಿ: ಪ್ರೀತಿಯ ವಿಚಾರದಲ್ಲಿ ನಿಮಗೆ ಕೆಲವು ತೊಂದರೆಗಳು ಬರಬಹುದು. ವ್ಯಾಪಾರದಲ್ಲಿ ಹಿನ್ನಡೆಯಾಗಲಿದೆ. ಅಪರಿಚಿತರು ಆಪ್ತರೆಂದು ಬರಬಹುದು. ನಿಮ್ಮದೇ ಸತ್ಯವೆಂದು ವಾದಿಸುವುದು ಸರಿಯಾಗದು. ಬಂಧುಗಳ ಜೊತೆ ಔಚಿತ್ಯಪೂರ್ಣವಾದ ಮಾತುಗಳನ್ನು ಆಡಿ. ನಿಮ್ಮ ವೈಫಲ್ಯವನ್ನು ಸರಿ ಮಾಡಿಕೊಳ್ಳಿ. ನಿಮ್ಮ ಮಾತು ಔಚಿತ್ಯಪೂರ್ಣವಾಗಿ ಇರಲಿ. ಕಳೆದು ಕೊಂಡ ಮಾನವನ್ನು ಮರಳಿ ಪಡೆಯಲಾಗದು. ನಿಮ್ಮ ವೃತ್ತಿಯ ಕ್ಷೇತ್ರದಲ್ಲಿ ನಿಮಗೆ ಗೌರವವು ಕಡಿಮೆ ಆಗಬಹುದು. ಆರ್ಥಿಕತೆಯನ್ನು ನೀವು ಬೆಳೆಸಿಕೊಳ್ಳಲು ಹೆಚ್ಚು ಶ್ರಮಿಸುವಿರಿ. ಸರಳತೆಯು ನಿಮಗೆ ಇಷ್ಟವಾಗದು. ನೇರ ನುಡಿಯಿಂದ ಬೇಸರವು ಉಂಟಾದೀತು.
ಸಿಂಹ ರಾಶಿ: ದಾಂಪತ್ಯದ ಸಮಸ್ಯೆಯು ನ್ಯಾಯಾಲಯದವರೆಗೂ ಹೋಗಬಹುದು. ಪರಸ್ಪರ ಬಗೆ ಹರಿಸಿಕೊಳ್ಳುವುದು ಕ್ಷೇಮ. ನಿಮ್ಮ ತಪ್ಪುಗಳನ್ನು ಇನ್ನೊಬ್ಬರ ಮೇಲೆ ಹಾಕಬಹುದು. ಉದ್ಯೋಗದ ಸ್ಥಳದಲ್ಲಿ ಇಂದು ಮಾತನ್ನು ಕಡಿಮೆ ಮಾಡಿ, ಕೆಲಸದ ಬಗ್ಗೆ ಹೆಚ್ಚು ಗಮನವನ್ನು ಕೊಡಿ. ಗೃಹನಿರ್ಮಾಣಕ್ಕೆ ಯೋಜನೆಯನ್ನು ರೂಪಿಸಿಕೊಳ್ಳುವಿರಿ. ಒಂದೇ ಸಮಯಕ್ಕೆ ಹೆಚ್ಚು ಜವಾಬ್ದಾರಿಯನ್ನು ನಿರ್ವಹಿಸುವುದು ಕಷ್ವಾಗಲಿದೆ. ನೀವು ಏಕಾಂಗಿ ಎಂಬ ಮನೋಭಾವವು ಬರಲಿದೆ. ಇನ್ನೊಬ್ಬರ ಬಳಿ ಇದ್ದ ಸ್ಥಿರಾಸ್ತಿಯನ್ನು ನೀವು ಪಡೆದುಕೊಳ್ಳುವಿರಿ. ಸರ್ಕಾರಿ ಸೌಲಭ್ಯಗಳು ನಿಮಗೆ ನಿಮ್ಮ ಪ್ರಯತ್ನದ ಫಲವಾಗಿ ಸಿಗಲಿದೆ. ವಿದ್ಯಾಭ್ಯಾಸಕ್ಕೆ ಯಾರ ಬಳಿಯಾದರೂ ಸಹಾಯವನ್ನು ಕೇಳುವಿರಿ.
ಕನ್ಯಾ ರಾಶಿ: ತಂದೆಗೆ ಅಪರೂಪದ ಉಡುಗೊರೆಯನ್ನು ಕೊಡುವಿರಿ. ವಾಹನ ಸಂಚಾರವು ಕಡಿಮೆ ಇರಲಿ. ನಿಮ್ಮ ನಿರ್ಣಯಕ್ಕೆ ವಿರುದ್ಧವಾಗಿ ಯಾರಾದರೂ ಮಾತನಾಡಬಹುದು. ಸಂಗಾತಿಯ ಜೊತೆ ಅನಗತ್ಯ ವಸ್ತುಗಳ ಖರೀದಿಯ ಕಾರಣದಿಂದ ಕಲಹವಾಗಲಿದೆ. ನೀವಿಬ್ಬರೂ ಕುಳಿತು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಯೋಗ್ಯ. ಯಾರನ್ನೋ ಅಪಮಾನಿಸಲು ಹೋಗಿ ನೀವೇ ಅವಮಾನಿತರಾಗಬಹುದು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹವು ಸಿಗಲಿದೆ. ಫಲಾಪೇಕ್ಷೆ ಇಲ್ಲದೇ ಶ್ರದ್ಧೆಯಿಂದ ಸಾಮಾಜಿಕ ಕಾರ್ಯದಲ್ಲಿ ಮಗ್ನರಾಗುವಿರಿ. ತಾಯಿಯ ಕಡೆಯಿಂದ ಸಂಪತ್ತು ಸಿಗಬಹುದು.
ತುಲಾ ರಾಶಿ: ಈ ದಿನದ ಆರಂಭದಲ್ಲಿಯೇ ನಿಮ್ಮಲ್ಲಿ ಉತ್ಸಾಹದ ಕೊರತೆಯು ಕಾಣಿಸುವುದು. ಯಾರದೋ ವಿಚಾರಕ್ಕೆ ನೀವು ಸಮಯವನ್ನು ಕೊಡಬೇಕಾಗುವುದು. ಆರ್ಥಿಕತೆಯ ಸುಧಾರಣೆ ಮಾಡಿಕೊಳ್ಳುವಿರಿ. ವಿದೇಶದಲ್ಲಿ ಇರುವವರ ಬಗ್ಗೆ ಚಿಂತೆ ಇರಲಿದೆ. ಉದ್ಯೋಗದ ಕಾರಣಕ್ಕೆ ಮನೆಯಿಂದ ದೂರ ಇರುವಿರಿ. ಅನಧಿಕೃತ ಮಾಹಿತಿಯನ್ನು ಪಡೆದು ಯಾವ ಕೆಲಸಕ್ಕೂ ಮುಂದಾಗಬೇಡಿ. ನಾಲ್ಕಾರು ಜನರ ಅಭಿಪ್ರಾಯವನ್ನು ಪಡೆಯಿರಿ. ನಿಮ್ಮ ಬಗ್ಗೆಯೇ ನಿಮಗೆ ಬೇಸರವಾದೀತು. ಯಾವ ಜವಾಬ್ದಾರಿಯನ್ನೂ ನೀವು ಸ್ವೀಕರಿಸಲು ಹಿಂಜರಿಯುವಿರಿ. ಸಂತೋಷದ ಸಂದರ್ಭಗಳನ್ನು ನೆನಪಿಸಿಕೊಳ್ಳುವಿರಿ.
ವೃಶ್ಚಿಕ ರಾಶಿ: ನಿಮ್ಮ ಸಂಕಟವನ್ನು ಆಪ್ತರ ಜೊತೆ ಹಂಚಿಕೊಂಡು ಸಮಾಧಾನಪಟ್ಟುಕೊಳ್ಳುವಿರಿ. ನಿದ್ರೆಯಲ್ಲಿ ಕಂಡ ಕನಸಿನಿಂದ ಭೀತರಾಗುವಿರಿ. ನಿಮಗೆ ಸಂಪತ್ತು ಯಾರಿಗಾದರೂ ದಾನ ಮಾಡಬೇಕು ಎಂದು ಅನ್ನಿಸುವುದು. ರಾಜಕೀಯವಾದ ಒತ್ತಡವು ನಿಮ್ಮ ಮೇಲೆ ಬರಲಿದೆ. ಒಂದೇ ಸಲಕ್ಕೆ ಅನೇಕ ಕಾರ್ಯಗಳು ನಿಮ್ಮನ್ನು ದಿಕ್ಕು ತೋಚದಂತೆ ಮಾಡುವುದು. ಸಂಬಂಧವಿಲ್ಲದ ವ್ಯಕ್ತಿಗಳ ಬಗ್ಗೆ ಚರ್ಚೋಪಚರ್ಚೆಗಳನ್ನು ಮಾಡುವಿರಿ. ನಿಮ್ಮ ಸಾಮರ್ಥ್ಯವನ್ನು ನೀವಾಗಿಯೇ ತೋರಿಸುವುದು ಬೇಡ. ಅವಶ್ಯಕತೆ ಇದ್ದರೆ ಮಾತ್ರ ಬಳಸಿ. ನಾಗದೇವರ ಉಪಾಸನೆಯಿಂದ ಜಗಕಾಗಿರುವ ನಿಮ್ಮ ಕೆಲಸಕ್ಕೆ ವೇಗವು ಸಿಗಲಿದೆ.
ಧನು ರಾಶಿ: ಮಾಹಿತಿಯ ಕೊರತೆಯಿಂದ ತಪ್ಪಾದ ಕೆಲಸಕ್ಕೆ ಪಶ್ಚಾತ್ತಾಪ ಪಡುವಿರಿ. ನಿಮಗೆ ಗೌರವವು ಸಿಗದ ಕಡೆ ನೀವು ಹೋಗಲು ಇಷ್ಟಪಡುವುದಿಲ್ಲ. ಸಮಾರಂಭಕ್ಕೆ ಭೇಟಿ ಕೊಡುವುದು ನಿಮಗೆ ಇಷ್ಟವಾಗದು. ಉದ್ಯಮದಲ್ಲಿ ಗಟ್ಟಿಯಾದ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೆ ಕಷ್ಟವಸದೀತು. ಉದ್ಯೋಗವನ್ನು ಕಳೆದುಕೊಳ್ಳುವ ಭೀತಿಯು ಇರಲಿದೆ. ವೃತ್ತಿಯನ್ನು ಹೊರತುಪಡಿಸಿದ ಆದಾಯ ಬರುವ ಕೆಲಸವನ್ನು ನೀವು ಹುಡುಕಿಕೊಳ್ಳುವಿರಿ. ವಾತಕ್ಕೆ ಸಂಬಂಧಿಸಿದ ರೋಗವು ಕಾಣಿಸಿಕೊಳ್ಳಬಹುದು. ಬಂಧುಗಳ ಜೊತೆ ಹೆಚ್ಚಿನ ಸಮಯವನ್ನು ಕಳೆಯಬೇಕಾಗಬಹುದು. ಅತಿಯಾದ ಮಾತು ನಿಮಗೆ ಕಿರಿಕಿರಿ ಅನಿಸೀತು.
ಮಕರ ರಾಶಿ: ಸಂಗಾತಿಯ ಜೊತೆ ಹೆಚ್ಚಿನ ಸಮಯವನ್ನು ನೀವು ಕಳೆಯುವಿರಿ. ಖರೀದಿಯನ್ನು ಮಾಡುವಿರಿ. ಸಂತಾನದ ಬಯಕೆಯನ್ನು ಹಂಚಿಕೊಳ್ಳುವಿರಿ. ಸರಳವಾದ ಕೆಲಸವನ್ನು ಸಂಕೀರ್ಣ ಮಾಡಿಕೊಳ್ಳುವುದು ಬೇಡ. ಸಹೋದರನಿಂದ ತುರ್ತಾಗಿ ಹಣವನ್ನು ಪಡೆಯುವಿರಿ. ಬಳಕೆಯಾದ ವಾಹನವನ್ನು ಖರೀದಿಸುವಿರಿ. ತೆಗೆದುಕೊಂಡ ಹಣವನ್ನು ಪಡೆಯಲು ನಿಮಗೆ ಕಷ್ಟವಾದೀತು. ಸ್ಥಿರಾಸ್ತಿಯ ವಿಚಾರಕ್ಕೆ ನೀವು ಕಾನೂನಿಗೆ ಶರಣಾಗುವಿರಿ. ಸರ್ಕಾರದ ಕೆಲಸಗಳನ್ನು ಬೇಗ ಮುಗಿಸಿಕೊಳ್ಳಲು ಪ್ರಯತ್ನಿಸುವಿರಿ. ಮಾತುಗಾರಿಗೆ ಹಿನ್ನಡೆಯಾಗಲಿದೆ. ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳುವಿರಿ.
ಕುಂಭ ರಾಶಿ: ಕುಟುಂಬದಲ್ಲಿ ಅನಿರೀಕ್ಷಿತ ತಿರುವು ಬರಲಿದೆ. ಅನಾರೋಗ್ಯದಿಂದ ಕಷ್ಟಪಡುವಿರಿ. ಸಾಲ ಮಾಡುವ ಯೋಚನೆಯನ್ನು ನೀವು ಬದಲಿಸುವಿರಿ. ಇಂದಿನ ಕೆಲಸವನ್ನು ಬೇಗ ಮುಗಿಸಿ ವಿಶ್ರಾಂತಿಯನ್ನು ಪಡೆಯುವಿರಿ. ನಿಮ್ಮವರ ಮೇಲೆ ತಪ್ಪು ತಿಳಿವಳಿಕೆಯನ್ನು ಇಟ್ಟುಕೊಂಡಿದ್ದು ಅದನ್ನು ಬದಲಿಸಿ. ನಿಮ್ಮ ವಿವಾಹಕ್ಕಾಗಿ ಬಂಧುಗಳು ಪ್ರಯತ್ನಿಸುವರು. ಅಧಿಕಾರದಲ್ಲಿದ್ದರೂ ನಿಮ್ಮ ಪ್ರಭಾವ ಕಡಿಮೆಯಾದೀತು. ರಾಜಕಾರಣಿಗಳು ಬೆಂಬಲಿಗರನ್ನು ಉಳಿಸಿಕೊಳ್ಳಬೇಕಾಗುವುದು. ವಿದ್ಯಾರ್ಥಿಗಳಿಗೆ ಭವಿಷ್ಯವನ್ನು ಸ್ಪಷ್ಟಪಡಿಸಬೇಕಾಗುವುದು. ಕೆಲವರ ಮೇಲೆ ನಿಮಗೆ ಅಸಮಾಧಾನ ಇರಲಿದೆ.
ಮೀನ ರಾಶಿ: ನಿಮಗೆ ದೂರದಲ್ಲಿರುವ ಮಕ್ಕಳನ್ನು ಕಾಣದೇ ಬೇಸರವಾಗಲಿದೆ. ಕಾನೂನಿಗೆ ವಿರುದ್ಧವಾದ ಮಾರ್ಗದಲ್ಲಿ ಹಣಸಂಪಾದನೆಯನ್ನು ಮಾಡುವ ಯೋಚನೆ ಬರುವುದು. ನಿಮ್ಮ ಉದ್ಯಮದಕ್ಕೆ ಸೂಕ್ತವಾದ ವ್ಯಕ್ತಿಗಳನ್ನು ಸೇರಿಸಿಕೊಳ್ಳಿ. ನಿಮಗೆ ಕೊಟ್ಟ ಅಧಿಕಾರವನ್ನು ಸದುಪಯೋಗಿ ಮಾಡಿಕೊಂಡು ಎಲ್ಲರ ಪ್ರೀತಿಯನ್ನು ಗಳಿಸುವಿರಿ. ಸಣ್ಣ ಸಣ್ಣ ವಿಚಾರಗಳಿಗೆ ಸಿಟ್ಟಾಗುವ ಅವಶ್ಯಕತೆ ಇಲ್ಲೆ. ತಾಳ್ಮೆಯಿಂದಲೇ ಮಾತನಾಡಿ. ಬಾಕಿ ಉಳಿದ ಕಛೇರಿಯ ಕಾರ್ಯಗಳನ್ನು ಮಾಡುವಿರಿ. ದಾಂಪತ್ಯದಲ್ಲಿ ಹಳೆಯ ಬೇಸರವೆಲ್ಲ ದೂರವಾಗಿ ಸಂತೋಷವು ಇರಲಿದೆ. ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯನ್ನು ಸಮರ್ಪಿಸಿ