ಆರ್ ಸಿಎಚ್ ವರದಿ
ಮೈಸೂರು: ದೆಹಲಿಯಲ್ಲಿನ ಪತ್ರಕರ್ತರು, ಸಾಮಾಜಿಕ ಹಾಗೂ ವಿಜ್ಞಾನ ಚಳವಳಿ ಕಾರ್ಯಕರ್ತರ ಮೇಲಿನ ಪೊಲೀಸರ ದಾಳಿಯನ್ನು ಖಂಡಿಸಿ ನಗರದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಪ್ರತಿಭಟಿಸಿತು.
ನಗರದ ನೂತನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ ಸಂಘಟನೆಯ ಸದಸ್ಯರು, ಪ್ರಜಾಪ್ರಭುತ್ವದ ನೆಲೆ ಎಂದು ಬಣ್ಣಿಸಲ್ಪಡುತ್ತಿರುವ ಭಾರತದಲ್ಲಿ ಪುಜಾಪುಭುತ್ವದ ಕಗ್ಗೋಲೆ ನಡೆಯುತ್ತಿದೆ. ನಿನ್ನ ಬೆಳಿಗ್ಗೆ ದೆಹಲಿಯಲ್ಲಿ ಹಲವು ಪತ್ರಕರ್ತರ ಮತ್ತು ಸಾಮಾಜಿಕ ಕಾರ್ಯಕರ್ತರ ಮನೆಗಳಿಗೆ, ದೆಹಲಿ ಪೋಲೀಸರು, ನುಗ್ಗಿ, ಅವರ ವೈಯಕ್ತಿಕ ಲ್ಯಾಪ್ ಟಾಪ್, ಮೊಬೈಲ್, ಹಾರ್ಡ್ಡಿಸ್ ಗಳನ್ನು ವಶ ಪಡಿಸಿಕೊಂಡಿದ್ದಾರೆ ಎಂದು ವರದಿಗಳಾಗಿವೆ. ಇಬ್ಬರು ಪತ್ರಕರ್ತರನ್ನು ವಶಕ್ಕೆ ಪಡೆಯಲಾಗಿದೆ. ಸ್ವತಂತ್ರ ಸುದ್ದಿ ವಾಹಿನಿಯಾದ ನ್ಯೂಸ್ ಕ್ಲಿಕ್ ವಿರುದ್ಧ ಯು.ಏ.ಪಿ.ಎ ಅಡಿಯಲ್ಲಿ ಹೊಸ ಪಕರಣವನ್ನು ದಾಖಲಿಸಲಾಗಿದೆ. ಅವರ ಕಛೇರಿಗೆ ಬೀಗ ಹಾಕಲಾಗಿದೆ. ಹಿರಿಯ ಪತ್ರಕರ್ತ ಊರ್ಮಿಳೇಶ್ರವರನ್ನ ವಶಕ್ಕೆ ಪಡೆಯಲಾಗಿದೆ. ಇತರ ಪತ್ರಕರ್ತರಾದ ಪರಂಜಯ್ ಗುಹಾ ಠಾಕುರ್ತಾ, ಅಭಿಸಾರ್ ಶರ್ಮಾ, ಅನಂದ ಚಕ್ರವರ್ತಿ, ಭಾಷಾಸಿಂಗ್, ವ್ಯಂಗಚಿತ್ರಕಾರ ಸಂಜಯ್ ರಾಜೇರಾ, ಸಾಮಾಜಿಕ ಹೋರಾಟಗಾರ, ಫಿಲ್ ಮೇಕರ್ ಮತ್ತು ಚರಿತ್ರೆಕಾರರೂ ಆದ ಸೋಹ್ಮಲ್ ಹಷಿಯವರುಗಳು ಇಂದಿನ ಧಾಳಿಗೆ ಗುರಿಯಾಗಿರುವುದು ಬೇಸರದ ಸಂಗತಿಯಾಗಿದೆ.
ಏಕಾಏಕಿ, ಬೆಳಗಿನ ಜಾವ ಮನೆಗಳಿಗೆ ನುಗ್ಗಿ ಅವರ ಎಷ್ಟೋ ವರ್ಷಗಳ ಪರಿಶ್ರಮದ ಫಲವಾದ ಕೆಲಸಗಳನ್ನು ಹೊಂದಿರುವ ಹಾರ್ಡ್ ಡಿಸ್ಕ್, ಲ್ಯಾಪ್ ಟಾಪ್ ಗಳನ್ನು ವಶ ಪಡಿಸಿಕೊಂಡಿರುವುದು. ಕರಾಳ ಯು.ಏ.ಪಿ.ಏ ಅಡಿಯಲ್ಲಿ ಪ್ರಕರಣವನ್ನು ದಾಖಲಿಸುವುದು ಇವು ಭಿನ್ನ ಅಭಿಪ್ರಾಯ ಧ್ವನಿ ಅಡಗಿಸುವ ಹುನ್ನಾರಲ್ಲದೇ ಮತ್ತೇನೂ ಅಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇಂತಹವರ ಧ್ವನಿ ಅಡಗಿಸಲು ನಡೆಸಿರುವ ನಿರಂತರ ಪುಯತ್ನವನ್ನು ನಾವು ವಿರೋಧಿಸುತ್ತೇವೆ. ಮಾಧ್ಯಮವೊಂದು ಕಾವಲುಗಾರ ನಂತೆ, ನಿರ್ಭೀತ, ಸ್ವತಂತ್ರ ಮತ್ತು ಸ್ವಾಯತ್ತ ನೆಲೆಯಲ್ಲಿ ತನ್ನ ಕಾರ್ಯ ನಿರ್ವಹಿಸುವುದೇ
ಅದರ ಕೆಲಸ. ಅದನ್ನು ನಿಯಂತ್ರಣ ಮಾಡುವ ಕೇಂದ್ರದ ಒಕ್ಕೂಟ ಸರಕಾರದ ಈ ಕ್ರಮಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು
ನಾಶ ಮಾಡುತ್ತಿದೆ ಎಂದರು.
ದೇಶದ ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರದ ಪರವಾಗಿ ಕೆಲಸ ಮಾಡುವವರನ್ನು, ತಮ್ಮನ್ನು ವಿರೋಧಿಸುವವರನ್ನು ಕ್ರೂರವಾಗಿ ಬೇಟೆಯಾಡುವುದನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಪ್ರೊ.ಕಾಳಚನ್ನೇಗೌಡ, ಹೊರೆಯಾಲ ದೊರೆಸ್ವಾಮಿ, ಸೀಮಾ ಮೊದಲಾದವರು ಉಪಸ್ಥಿತರಿದ್ದರು.
ದೆಹಲಿ ದಾಳಿ ಖಂಡಿಸಿದ ಪ್ರಗತಿಪರ ಸಂಘಟನೆಯ ಒಕ್ಕೂಟ
