ಮೈಸೂರು-ಮೈಸೂರಿನನ ನಾಗರಹೊಳೆ ಅಭಯಾರಣ್ಯದ ದಮ್ಮನಕಟ್ಟೆಯಲ್ಲಿ ಬ್ಲಾಕ್ ಪ್ಯಾಂಥರ್ ದರ್ಶನ ಕೊಟ್ಟಿದೆ. ಹಲವು ದಿನಗಳ ಬಳಿಕ ಸಫಾರಿ ಪ್ರಿಯರಿಗೆ ಬ್ಲಾಕ್ ಪ್ಯಾಂಥರ್ ದರ್ಶನವಾಗಿದೆ.ನಾಗರಹೊಳೆ ದಮ್ಮನಕಟ್ಟೆ ರೇಂಜ್ ನಲ್ಲಿ ಪ್ರಖ್ಯಾತಿ ಹೊಂದಿರುವ ಬ್ಲಾಕ್ ಪ್ಯಾಂಥರ್ ಗಳು ಪ್ರವಾಸಿಗರಿಗೆ ಅಚ್ಚು ಮೆಚ್ಚು. ಕರ್ನಾಟಕದಲ್ಲಿಯೇ ಸಫಾರಿ ಪ್ರಿಯರಿಗೆ ದಮ್ಮನಕಟ್ಟೆ ರೇಂಜ್ ಮೊದಲ ಸ್ಥಾನದಲ್ಲಿದೆ.ಹಿಂದೆ ಇವುಗಳು ಒಟ್ಟೋಟ್ಟಾಗಿ ಕಾಣಿಸಿಕೊಳ್ಳುತ್ತಿದ್ದವು. ಆದರೆ ಹಲವು ದಿನಗಳಿಂದ ದರ್ಶನ ಸಿಗದ ಹಿನ್ನಲೆ ಸಫಾರಿ ಪ್ರಿಯರು ಬೇಸರಗೊಂಡಿದ್ದರು.